ಆಕ್ಲೆಂಡ್: ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ತವಕದಲ್ಲಿದೆ ಟೀಂ ಇಂಡಿಯಾ.
ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿರುವ ಕಾರಣ ಸರಣಿ ಜೀವಂತವಾಗಿರಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಬ್ಲೂ ಬಾಯ್ಸ್ಗೆ ಗೆಲುವು ಅನಿವಾರ್ಯವಾಗಿದೆ. ಈಡೆನ್ ಪಾರ್ಕ್ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆಲ್ಲುತ್ತಿದ್ದಂತೆ ಕ್ಯಾಪ್ಟನ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಎರಡು ಬದಲಾವಣೆ: ಟೀಂ ಇಂಡಿಯಾ ಇಂದಿನ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿದೆ. ಬಲಗೈ ವೇಗಿ ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ಗೆ ತಂಡದಿಂದ ಕೈಬಿಡಲಾಗಿದ್ದು, ಯಜುವೇಂದ್ರ ಚಹಲ್ ಹಾಗೂ ನವದೀಪ್ ಸೈನಿಗೆ ಚಾನ್ಸ್ ನೀಡಲಾಗಿದೆ. ಇದರ ಮಧ್ಯೆ ನ್ಯೂಜಿಲ್ಯಾಂಡ್ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದ್ದು, ಕೈಲ್ ಜೇಮಿಸನ್ ಡೆಬ್ಯು ಮಾಡಿದ್ದು, ಮಿಚೆಲ್ ಸ್ಯಾಂಟ್ನರ್ ಸ್ಥಾನಕ್ಕೆ ಮಾರ್ಕ್ ಚ್ಯಾಪ್ಮ್ಯಾನ್ 11ರ ಬಳಗದಲ್ಲಿ ಚಾನ್ಸ್ ಪಡೆದುಕೊಂಡಿದ್ದಾರೆ.
ಆಡುವ 11ರ ಬಳಗ ಇಂತಿವೆ:
ಟೀಂ ಇಂಡಿಯಾ: ಪೃಥ್ವಿ ಶಾ, ಮಯಾಂಕ್ ಅಗರವಾಲ್,ವಿರಾಟ್ ಕೊಹ್ಲಿ(ಕ್ಯಾಪ್ಟನ್),ಶ್ರೇಯಸ್ ಅಯ್ಯರ್,ಕೆಎಲ್ ರಾಹುಲ್(ವಿ.ಕೀ), ಕೇದಾರ್ ಜಾಧವ್,ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್,ನವದೀಪ್ ಸೈನಿ,ಯಜುವೇಂದ್ರ ಚಹಾಲ್,ಜಸ್ಪ್ರೀತ್ ಬುಮ್ರಾ
ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್ ಗಪ್ಟಿಲ್,ಹೆನ್ರಿ ನಿಕೂಲಸ್,ಥಾಮ್ ಬ್ಲಡೆಲ್,ರಾಸ್ ಟೇಲರ್,ಥಾಮ್ ಲ್ಯಾಥಮ್(ವಿ.ಕೀ,ಕ್ಯಾಪ್ಟನ್),ಮಾರ್ಕ್ ಚಾಂಪೆನ್,ಜೇಮ್ಸ್ ನೆಸಮ್,ಕಾಲಿನ್ ಗ್ರ್ಯಾಂಡ್ಹೋಮ್,ಥಿಮ್ ಸೌಥಿ,ಕೈಲ್ ಜೇಮಿಸನ್,ಮಾರ್ಕ್ ಚ್ಯಾಪ್ಮ್ಯಾನ್