ಹೈದರಾಬಾದ್: ನ್ಯೂಜಿಲ್ಯಾಂಡ್ ಬ್ಯಾಟ್ಸ್‌ಮನ್ ರಾಸ್ ಟೇಲರ್ಗೆ ಗಾಯದ ಸಮಸ್ಯೆ ಎದುರಾಗಿರುವ ಕಾರಣ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಜಾಗಕ್ಕೆ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್ಮನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
-
Ross Taylor has been ruled out of the 2nd ODI at Hagley Oval as a precaution, having not fully recovered from his left-hamstring tear. #NZvBAN #CricketNation pic.twitter.com/Q6DmmnZtKa
— BLACKCAPS (@BLACKCAPS) March 22, 2021 " class="align-text-top noRightClick twitterSection" data="
">Ross Taylor has been ruled out of the 2nd ODI at Hagley Oval as a precaution, having not fully recovered from his left-hamstring tear. #NZvBAN #CricketNation pic.twitter.com/Q6DmmnZtKa
— BLACKCAPS (@BLACKCAPS) March 22, 2021Ross Taylor has been ruled out of the 2nd ODI at Hagley Oval as a precaution, having not fully recovered from his left-hamstring tear. #NZvBAN #CricketNation pic.twitter.com/Q6DmmnZtKa
— BLACKCAPS (@BLACKCAPS) March 22, 2021
ಅಭ್ಯಾಸ ನಡೆಸುವ ವೇಳೆ ರಾಸ್ ಟೇಲರ್ ಎಡ ಮಂಡಿಗೆ ಗಾಯವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಹೊರಗುಳಿದಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ತಿಳಿಸಿತ್ತು. ಆದರೆ ಇನ್ನೂ ಗಾಯದ ಸಮಸ್ಯೆ ಸರಿ ಹೋಗದ ಕಾರಣ ಎರಡನೇ ಪಂದ್ಯದಿಂದಲೂ ಕೂಡಾ ಹೊರಗುಳಿದಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ.
"ಸರಣಿಯ ಮುನ್ನಾ ದಿನದಂದು ರಾಸ್ ಟೇಲರ್ಗೆ ಗಾಯವಾಗಿದ್ದು ಅಘಾತವನ್ನುಂಟು ಮಾಡಿದೆ. ಇದು ಒಂದು ಸಣ್ಣ ಗಾಯವಾಗಿದ್ದು, ಸ್ವಲ್ಪ ವಿಶ್ರಾಂತಿ ನಂತರ ಅವರು ತಂಡಕ್ಕೆ ಲಭ್ಯರಾಗಲಿದ್ದಾರೆ" ಎಂದು ಸ್ಟೀಡ್ ತಿಳಿಸಿದ್ದಾರೆ.
ಓದಿ : ಚಂದ್ರನ ಮೇಲಿದ್ದಂತೆ ಭಾಸವಾಗುತ್ತಿದೆ.. ಸಚಿನ್ ಹೀಗೆ ಹೇಳಿದ್ಯಾಕೆ..!?
"ಟಿ 20 ತಂಡದಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ ಮಾರ್ಕ್‌ಗೆ ಇದು ಒಂದು ಉತ್ತಮ ಅವಕಾಶ, ಅವರು ಈ ಅವಕಾಶವನ್ನ ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನಮಗಿದೆ" ಎಂದು ಅವರು ಹೇಳಿದರು.
ನ್ಯೂಜಿಲೆಂಡ್ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ -20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಮಂಗಳವಾರ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿದೆ.