ಸಿಡ್ನಿ: ವಿಶ್ವದ ಕೆಲವೇ ಕೆಲವು ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ಧೋನಿ ಮೊದಲ ಸಾಲಿನಲ್ಲಿ ಬರುತ್ತಾರೆ. ಗಿಲ್ಕ್ರಿಸ್ಟ್ರನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿರುವ ಅವರು ಇಂದು ಸಾವಿರಾರು ಯುವ ವಿಕೆಟ್ ಕೀಪರ್ಗಳಿಗೆ ಮಾದರಿಯಾಗಿದ್ದಾರೆ. ಆದರೆ ಸ್ವತಃ ಆಸೀಸ್ ಕೀಪರ್ ಧೋನಿಯಷ್ಟು ವೇಗವಾಗಿ ಸ್ಟಂಪ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಆ ವಿಡಿಯೋ ವೈರಲ್ ಆಗುತ್ತಿದೆ.
ಭಾನುವಾರ ನಡೆದ 2ನೇ ಟಿ-20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರನ್ನು ಸ್ಟಂಪ್ ಔಟ್ ಮಾಡಲು ವಿಫಲವಾದ ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ಹೀಗೆ ಹೇಳಿದ್ದಾರೆ.
9ನೇ ಓವರ್‌ನಲ್ಲಿ ಶಿಖರ್, ಲೆಗ್ ಸ್ಪಿನ್ನರ್ ಮೈಕಲ್ ಸ್ವೆಪ್ಸನ್ ಬೌಲಿಂಗ್‌ನಲ್ಲಿ ವೈಡ್ ಎಸೆತ ಆಡಲು ಹೋಗಿ ವಿಫಲರಾದರು. ಆದರೆ ಕ್ರೀಸ್ನಿಂದ ಕಾಲನ್ನು ಮೇಲೆತ್ತಿದ್ದರು. ವೇಡ್ ತಕ್ಷಣ ಬೆಲ್ಸ್ ಬಾರಿಸಿ ಮನವಿ ಮಾಡಿದರು. ರೀಪ್ಲೆನಲ್ಲಿ ಧವನ್ ನೆಲದಿಂದ ಮೇಲಕ್ಕೆ ಕಾಲು ಎತ್ತಿದ್ದರಾದರೂ ವೇಡ್ ಸ್ಟಂಪ್ ಮಾಡುವುದರೊಳಗೆ ಧವನ್ ಕ್ರೀಸ್ನಲ್ಲಿ ಕಾಲಿರಿಸಿದ್ದರು.
-
"Not Dhoni, not quick enough like Dhoni!" 😂
— cricket.com.au (@cricketcomau) December 6, 2020 " class="align-text-top noRightClick twitterSection" data="
Live #AUSvIND: https://t.co/L1KY15FYnb pic.twitter.com/IOC7NH2xgb
">"Not Dhoni, not quick enough like Dhoni!" 😂
— cricket.com.au (@cricketcomau) December 6, 2020
Live #AUSvIND: https://t.co/L1KY15FYnb pic.twitter.com/IOC7NH2xgb"Not Dhoni, not quick enough like Dhoni!" 😂
— cricket.com.au (@cricketcomau) December 6, 2020
Live #AUSvIND: https://t.co/L1KY15FYnb pic.twitter.com/IOC7NH2xgb
ರೀಪ್ಲೇನಲ್ಲಿ ನಾಟೌಟ್ ಎಂದು ಬಂದ ತಕ್ಷಣ ಧವನ್ರ ಕುರಿತು," ನಾನು ಧೋನಿಯಲ್ಲ, ಧೋನಿಯಷ್ಟು ವೇಗ ನನ್ನಲ್ಲಿಲ್ಲ" ಎಂದು ನಗುತ್ತಾ ಹೇಳಿದ್ದಾರೆ. ಈ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ವತಃ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಅಧಿಕೃತ ಟ್ವಿಟರ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿಕೊಂಡಿದೆ.
ಆ ಸಂದರ್ಭದಲ್ಲಿ 39 ರನ್ ಗಳಿಸಿದ್ದ ಧವನ್ ಸ್ಟಂಪಿಂಗ್ನಿಂದ ಜೀವದಾನ ಪಡೆದು 52 ರನ್ ಗಳಿಸಿದರು. ನಿನ್ನ ನಡೆದ ಪಂದ್ಯವನ್ನು ಭಾರತ ತಂಡ 6 ವಿಕೆಟ್ಗಳಿಂದ ಗೆದ್ದು 2-0 ಅಂತರದಲ್ಲಿ ಟಿ-20 ಸರಣಿ ವಶಪಡಿಸಿಕೊಂಡಿದೆ.
ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 195 ಸ್ಟಂಪ್ ಔಟ್ ಮಾಡುವ ಮೂಲಕ ಗರಿಷ್ಠ ಸ್ಟಂಪ್ ಔಟ್ ಮಾಡಿದ ದಾಖಲೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರನ್ನು ಬಿಟ್ಟರೆ ಶ್ರೀಲಂಕಾದ ಕುಮಾರ್ ಸಂಗಾಕ್ಕರ 139 ಸ್ಟಂಪ್ ಔಟ್ ಮಾಡಿ 2ನೇ ಸ್ಥಾನದಲ್ಲಿದ್ದಾರೆ.