ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಸೋತು ಬ್ಯಾಟಿಂಗ್ ನಡೆಸಿಎ ಕೆಕೆಆರ್ 194ರನ್ಗಳಿಕೆ ಮಾಡಿದೆ.
ಆರಂಭಿಕರಾಗಿ ಕಣಕ್ಕಿಳಿದ ಕೆಕೆಆರ್ ತಂಡದ ನಿತೀಶ್ ರಾಣಾ 53 ಎಸೆತಗಳಲ್ಲಿ ಬರೋಬ್ಬರಿ 81ರನ್ಗಳಿಕೆ ಮಾಡಿದ್ದಾರೆ. 13 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ರಾಣಾ, ತಮ್ಮ ಅರ್ಧಶತಕವನ್ನ ಮೃತ ಮಾವನಿಗೆ ಅರ್ಪಿಸಿದ್ದಾರೆ.
-
Sent in to open the innings, @NitishRana_27 responds with a fine 5️⃣0️⃣ and dedicates it to his father in law, who passed away yesterday.#Dream11IPL pic.twitter.com/1LUINkpqpe
— IndianPremierLeague (@IPL) October 24, 2020 " class="align-text-top noRightClick twitterSection" data="
">Sent in to open the innings, @NitishRana_27 responds with a fine 5️⃣0️⃣ and dedicates it to his father in law, who passed away yesterday.#Dream11IPL pic.twitter.com/1LUINkpqpe
— IndianPremierLeague (@IPL) October 24, 2020Sent in to open the innings, @NitishRana_27 responds with a fine 5️⃣0️⃣ and dedicates it to his father in law, who passed away yesterday.#Dream11IPL pic.twitter.com/1LUINkpqpe
— IndianPremierLeague (@IPL) October 24, 2020
ನಿತೀಶ್ ರಾಣಾ ಅವರ ಮಾವ ಸುರಿಂದರ್ ನಿನ್ನೆ ತೀರಿಕೊಂಡಿದ್ದು, ಇಂದು ತಾವು ಸಿಡಿಸಿರುವ ಅರ್ಧಶತಕವನ್ನ ಅವರಿಗೆ ಅರ್ಪಿಸಿ ಗೌರವ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಟ್ವೀಟರ್ ಖಾತೆಯಲ್ಲೂ ಬರೆದುಕೊಂಡಿದೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಣಾ ಸಿಡಿಸಿದ 81ರನ್ ಹಾಗೂ ನರೈನ್ ಅವರ 64ರನ್ಗಳ ನೆರವಿನಿಂದ ಕೆಕೆಆರ್ ತಂಡ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 194ರನ್ಗಳಿಕೆ ಮಾಡಿದೆ. ಮುಂದಿನ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿಬೇಕಾದ ಅನಿವಾರ್ಯತೆಯಲ್ಲಿ ಕೆಕೆಆರ್ ಇದೆ.