ETV Bharat / sports

ಚುಟುಕು ಕ್ರಿಕೆಟ್​​ನಲ್ಲಿ ವಿಶ್ವದಾಖಲೆ ಮಾಡಿದ ಯಾರ್ಕರ್​​​ ಕಿಂಗ್​​​​​! - ವಿಶ್ವದಾಖಲೆ ಬರೆದ ಬುಮ್ರಾ

ಟೀಂ ಇಂಡಿಯಾ ವೇಗಿ ಜಸ್​ಪ್ರೀತ್​ ಬುಮ್ರಾ ಟಿ-20 ಕ್ರಿಕೆಟ್​​ನಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡಿದ್ದು, ಈವರೆಗೆ ಈ ಸಾಧನೆ ಮಾಡಿರುವ ಮೊದಲ ಬೌಲರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

Jasprit Bumrah
ಜಸ್​ಪ್ರೀತ್​ ಬುಮ್ರಾ
author img

By

Published : Feb 3, 2020, 7:59 AM IST

ಮೌಂಟ್‌ ಮಾಂಗ್ನುಯಿ: ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ನಡೆದ ಕೊನೆಯ ಟಿ-20 ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಟೀಂ ಇಂಡಿಯಾ ಕಿವೀಸ್​ ನೆಲದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಟಿ-20 ಸರಣಿಯನ್ನ 5-0 ಅಂತರದಲ್ಲಿ ಕ್ಲೀನ್​ ಸ್ವೀಪ್​ ಮಾಡಿಕೊಂಡಿದೆ.

ಇದರ ಜತೆಗೆ ಟೀಂ ಇಂಡಿಯಾದ ಯಾರ್ಕರ್​ ಕಿಂಗ್​ ಜಸ್​ಪ್ರೀತ್​ ಬುಮ್ರಾ ಕೂಡ ಚುಟುಕು ಕ್ರಿಕೆಟ್​​ನಲ್ಲಿ ಹೊಸ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ನಿನ್ನೆಯ ಪಂದ್ಯದಲ್ಲಿ 4 ಓವರ್​ ಮಾಡಿ ಕೇವಲ 12 ರನ್​ ನೀಡಿರುವ ಈ ವೇಗಿ, ಮೂರು ವಿಕೆಟ್​ ಪಡೆಯುವ ಜತೆಗೆ ಒಂದು ಓವರ್​ ಮೇಡನ್​ ಮಾಡಿದ್ದಾರೆ. ಇದರ ಜತೆಗೆ ಟಿ-20 ಕ್ರಿಕೆಟ್​​ನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಓವರ್​ ಮೇಡನ್​ ಮಾಡಿರುವ ದಾಖಲೆ ಇದೀಗ ಬುಮ್ರಾ ಪಾಲಾಗಿದೆ. ಟಿ-20 ಕ್ರಿಕೆಟ್​​ನಲ್ಲಿ ಒಟ್ಟು 7 ಮೇಡನ್​ ಓವರ್​ ಮಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿರುವ ಬುಮ್ರಾ ಮ್ಯಾನ್​ ಆಫ್​ ದಿ ಮ್ಯಾಚ್​​ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Jasprit Bumrah
ಜಸ್​ಪ್ರೀತ್​ ಬುಮ್ರಾ

ಈ ಹಿಂದೆ ಶ್ರೀಲಂಕಾದ ನುವಾನ್​ ಕುಲಶೇಖರ್​​​ 58 ಪಂದ್ಯಗಳಿಂದ 6 ಮೇಡನ್​ ಓವರ್​ ಮಾಡಿದ್ದರು. ಇದೀಗ ಅವರ ದಾಖಲೆ ಬ್ರೇಕ್​ ಆಗಿದ್ದು, ಭಾರತೀಯ ವೇಗಿ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಬುಮ್ರಾ ನಿರ್ಮಾಣ ಮಾಡಿರುವ ದಾಖಲೆ ಕುರಿತು ಮುಂಬೈ ಇಂಡಿಯನ್ಸ್​ ತನ್ನ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.