ಹ್ಯಾಮಿಲ್ಟನ್: ಇಲ್ಲಿನ ಸೆಡ್ಡನ್ ಪಾರ್ಕ್ನಲ್ಲಿ ಇಂದು ನ್ಯೂಜಿಲ್ಯಾಂಡ್ ಮತ್ತು ಭಾರತ ನಡುವೆ ಮೂರನೇ ಟಿ-20 ಪಂದ್ಯ ನಡೆಯಲಿದೆ. ಕಿವೀಸ್ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಹೌದು, ಇಂದಿನ ಪಂದ್ಯ ರೋಚಕತೆಯಿಂದ ಕೂಡಿದೆ. ಕಿವೀಸ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾದ್ರೆ, ಭಾರತ ತಂಡಕ್ಕೆ ಮೊದಲ ಬಾರಿ ನ್ಯೂಜಿಲ್ಯಾಂಡ್ ನೆಲದಲ್ಲಿ ಇತಿಹಾಸ ನಿರ್ಮಿಸುವ ಅವಕಾಶ ಸಿಕ್ಕಿದೆ.
ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಕಿವೀಸ್ ವಿರುದ್ಧ ಎರಡು ಪಂದ್ಯ ಗೆದ್ದು ಮುನ್ನುಗ್ಗಿದೆ. ಇಲ್ಲಿಯವರೆಗೆ ನ್ಯೂಜಿಲ್ಯಾಂಡ್ನಲ್ಲಿ ಭಾರತ ಒಂದೇ ಒಂದು ಟಿ-20 ಸರಣಿ ಗೆದ್ದಿಲ್ಲ. ಈ ಬಾರಿ ಸರಣಿ ಗೆಲ್ಲುವ ಅವಕಾಶ ಭಾರತ ತಂಡಕ್ಕೆ ಹೆಚ್ಚಾಗಿದೆ.
ಇನ್ನು ಕಿವೀಸ್ ತಂಡ ಅಷ್ಟು ಸುಲಭವಾಗಿ ತಮ್ಮ ನೆಲದಲ್ಲಿ ಸರಣಿ ಬಿಟ್ಟು ಕೊಡುವುದಿಲ್ಲ. ಇದಕ್ಕೆ ಕಾರ್ಯತಂತ್ರ ರೂಪಿಸಿ ಕಣಕ್ಕಿಳಿಯಲಿದೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.