ಕ್ರೈಸ್ಟ್‌ಚರ್ಚ್: ನ್ಯೂಜಿಲ್ಯಾಂಡ್ ವಿರುದ್ಧ ಮತ್ತೆ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದು, ನಮ್ಮ ತಂಡದ ಬ್ಯಾಟ್ಸ್ಮನ್ಗಳ ಬೇಜವಾಬ್ದಾರಿಯಿಂದ ಎಂದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹನುಮ ವಿಹಾರಿ ದೂರಿದ್ದಾರೆ.
ಭಾರತ ತಂಡ ಉತ್ತಮ ಆರಂಭ ಪಡೆಯಿತಾದರೂ ಕೊನೆಯ 48 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ನಿರಾಶೆ ಮೂಡಿಸಿತು. ಇದಕ್ಕೆ ಪ್ರತಿಕ್ರಿಯಿಸಿರುವ ವಿಹಾರಿ ನಮ್ಮ ತಂಡದ ಬ್ಯಾಟ್ಸ್ಮನ್ಗಳ ಕೆಲವು ತಪ್ಪುಗಳಿಂದಲೇ ಹೆಚ್ಚು ವಿಕೆಟ್ ಕಳೆದುಕೊಂಡೆವು ಎಂದಿದ್ದಾರೆ.
"ಪೃಥ್ವಿ ಶಾ ಆರಂಭದಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಿ 100 ರನ್ ದಾಟಲು ನೆರವಾದರು. ಪೂಜಾರ ತಮ್ಮ ಅನುಭವದಿಂದ ಕ್ರೀಸ್ನಲ್ಲಿ ಹೆಚ್ಚು ಸಮಯ ಕಳೆದರು. ಆದರೆ, ನಾವು ಮೂವರು ತಂಡಕ್ಕೆ ನಮ್ಮ ಅಗತ್ಯವಿದ್ದ ಸಂದರ್ಭದಲ್ಲಿ ವಿಕೆಟ್ ಒಪ್ಪಿಸಿದೆವು. ಆದರೆ, ನಾವು ವಿಕೆಟ್ ಕಳೆದುಕೊಳ್ಳಲು ಪಿಚ್ ಕಾರಣ ಎನ್ನುವುದು ಸರಿಯಲ್ಲ. ಬ್ಯಾಟ್ಸ್ಮನ್ಗಳು ಮಾಡಿದ ತಪ್ಪಿನಿಂದ ವಿಕೆಟ್ ಕಳೆದುಕೊಂಡೆವು" ಎಂದಿದ್ದಾರೆ.
ನನ್ನ ಪ್ರಕಾರ ಈ ಮೈದಾನದಲ್ಲಿ 300 ರನ್ ಗೌರವಯುತ ಮೊತ್ತವಾಗಿತ್ತು. ಕಡಿಮೆ ಮೊತ್ತಕೆ ಆಲೌಟ್ ಆದರೂ ನಾವೂ ವೆಲ್ಲಿಂಗ್ಟನ್ಗಿಂತ ಇಲ್ಲಿ ಉತ್ತಮವಾಗಿ ಆಡಿದ್ದೇವೆ ಎಂದು ಭಾವಿಸಿದ್ದೇನೆ. ಈ ಧನಾತ್ಮಕ ಅಂಶದಿಂದ ನಾವು ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ಆಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇನ್ನು ನ್ಯೂಜಿಲ್ಯಾಂಡ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ 63 ರನ್ಗಳಿಸಿದೆ. ಆದರೆ, ಭಾರತದ ಬೌಲರ್ಗಳ ಪರ ಮಾತನಾಡಿರುವ ವಿಹಾರಿ," ಸ್ಕೋರ್ಬೋರ್ಡ್ ನಾವು ಬೌಲಿಂಗ್ ಮಾಡಿದ ವಿಧಾನವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಇಂದು ಉತ್ತಮ ಪ್ರದೇಶಗಳಲ್ಲಿ ಬೌಲಿಂಗ್ ಮಾಡಿದ್ದೇವೆ. ನಾವು ಒಂದು ಉತ್ತಮ ಬೌಲಿಂಗ್ ಘಟಕ ಹೊಂದಿರುವ ತಂಡವಾಗಿದ್ದು, ನಾಳೆ ಪ್ರತಿ ಬ್ಯಾಟ್ಸ್ಮನ್ಗಳಿಗೆ ಪ್ರತ್ಯೇಕ ಯೋಜನೆಗಳನ್ನು ಹೊಂದಿದ್ದೇವೆ. ಆದಷ್ಟು ಬೇಗ ವಿಕೆಟ್ ಪಡೆಯಲು ಪ್ರಯತ್ನಿಸಲಿದ್ದೇವೆ ಎಂದು ಎಂದು ವಿಹಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.