ETV Bharat / sports

ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಬಾರಿಗೆ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ ನ್ಯೂಜಿಲ್ಯಾಂಡ್​

author img

By

Published : Jan 6, 2021, 3:12 PM IST

ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಮೊದಲ ಟೆಸ್ಟ್​ ಗೆದ್ದಾಗಲೇ ನ್ಯೂಜಿಲ್ಯಾಂಡ್​ ಅಗ್ರಸ್ಥಾನದಲ್ಲಿದೆ ಎಂದು ಐಸಿಸಿ ತಿಳಿಸಿತ್ತಾದರೂ ಅಧಿಕೃತವಾಗಿ ಪಾಯಿಂಟ್​ ಬಿಡುಗಡೆ ಮಾಡಿರಲಿಲ್ಲ.

ನ್ಯೂಜಿಲ್ಯಾಂಡ್ ತಂಡ
ನ್ಯೂಜಿಲ್ಯಾಂಡ್ ತಂಡ

ಕ್ರೈಸ್ಟ್​ಚರ್ಚ್​: ಪಾಕಿಸ್ತಾನ ತಂಡವನ್ನು ಇನ್ನಿಂಗ್ಸ್​ ಮತ್ತು 176 ರನ್​ಗಳಿಂದ ಮಣಿಸಿದ ನ್ಯೂಜಿಲ್ಯಾಂಡ್​ ತಂಡ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಮೊದಲ ಟೆಸ್ಟ್​ ಗೆದ್ದಾಗಲೇ ನ್ಯೂಜಿಲ್ಯಾಂಡ್​ ಅಗ್ರಸ್ಥಾನದಲ್ಲಿದೆ ಎಂದು ಐಸಿಸಿ ತಿಳಿಸಿತ್ತಾದರೂ ಅಧಿಕೃತವಾಗಿ ಪಾಯಿಂಟ್​ ಬಿಡುಗಡೆ ಮಾಡಿರಲಿಲ್ಲ.

  • 🇳🇿 NEW ZEALAND ARE NO.1️⃣🎉

    Victory over Pakistan has sent Kane Williamson's side to the 🔝 of the @MRFWorldwide ICC Test Team Rankings!

    They have achieved the feat for the first time in rankings history 👏 pic.twitter.com/8lKm6HebtO

    — ICC (@ICC) January 6, 2021 " class="align-text-top noRightClick twitterSection" data=" ">

ಬುಧವಾರ ಬಿಡುಗಡೆ ಮಾಡಿರುವ ಅಂಕಪಟ್ಟಿಯ ಪ್ರಕಾರ ನ್ಯೂಜಿಲ್ಯಾಂಡ್​ 118 ರೇಟಿಂಗ್ ಅಂಕ ಪಡೆದು ಅಗ್ರಸ್ಥಾನ ಪಡೆದಿದೆ. 116 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ 2ನೇ ಸ್ಥಾನದಲ್ಲಿದ್ದರೆ, ಭಾರತ ತಂಡ 114 ಅಂಕ ಪಡೆದು 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್​ (106), ದಕ್ಷಿಣ ಆಫ್ರಿಕಾ(96), ಶ್ರೀಲಂಕಾ(86), ಪಾಕಿಸ್ತಾನ(82), ವೆಸ್ಟ್​ ಇಂಡೀಸ್​(77), ಅಫ್ಘಾನಿಸ್ತಾನ(57), ಬಾಂಗ್ಲಾದೇಶ(55) ನಂತರದ ಸ್ಥಾನದಲ್ಲಿವೆ.

ನ್ಯೂಜಿಲ್ಯಾಂಡ್​ ತಂಡ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವನ್ನು 101ರನ್​ಗಳಿಂದ ಗೆದ್ದಿತ್ತು. ಎರಡನೇ ಪಂದ್ಯದಲ್ಲಿ ಇನ್ನಿಂಗ್ಸ್​ ಮತ್ತು 176 ರನ್​ಗಳಿಂದ ಜಯ ಸಾಧಿಸಿ 2-0ಯಲ್ಲಿ ಸರಣಿ ಗೆದ್ದುಕೊಂಡಿದೆ. ಸರಣಿಯಲ್ಲಿ 388 ರನ್​ ಗಳಿಸಿದ ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್ ವಿಲಿಯಮ್ಸನ್​ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನು ಓದಿ:ಪಾಕ್ ವಿರುದ್ಧ ಭರ್ಜರಿ ಜಯ: ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್ ಮಾಡಿದ ಕಿವೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.