ETV Bharat / sports

2ನೇ ಟಿ20.. ಬಾಂಗ್ಲಾದೇಶವನ್ನು 28ರನ್​ಗಳಿಂದ ಮಣಿಸಿ 2-0ಯಲ್ಲಿ ಸರಣಿ ವಶಪಡಿಸಿಕೊಂಡ ಕಿವೀಸ್

author img

By

Published : Mar 30, 2021, 4:42 PM IST

171 ರನ್​ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 16 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 142 ರನ್​ಗಳಿಸಿ 28 ರನ್​ಗಳ ಸೋಲು ಕಂಡಿತು. ಸೌಮ್ಯ ಸರ್ಕಾರ್​ 27 ಎಸೆತಗಳಲ್ಲಿ 51, ನಯೀಮ್ 38 ಹಾಗೂ ಮಹಮದುಲ್ಲಾ 21 ರನ್​ಗಳಿಸಿದರು..

ನ್ಯೂಜಿಲ್ಯಾಂಡ್​ಗೆ ಸರಣಿ ಜಯ
ನ್ಯೂಜಿಲ್ಯಾಂಡ್​ಗೆ ಸರಣಿ ಜಯ

ನೇಪಿಯರ್ : ಬಾಂಗ್ಲಾದೇಶದ ವಿರುದ್ಧ 2ನೇ ಟಿ20 ಪಂದ್ಯವನ್ನು 28ರನ್​ಗಳಿಂದ ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್​ ಇನ್ನೂ ಒಂದು ಪಂದ್ಯವಿರುವಂತೆ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್​ ಗೆದ್ದ ಬಾಂಗ್ಲಾದೇಶ ಅತಿಥೇಯರಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭಿಕರಾದ ಅಲೆನ್ ಮತ್ತು ಗಫ್ಟಿಲ್ ಮೊದಲ ವಿಕೆಟ್​ಗೆ 36 ರನ್​ ಸೇರಿಸಿದರು. ಆರ್​ಸಿಬಿ ಸೇರಿರುವ ಅಲೆನ್ ಕೇವಲ 17ರನ್​ಗಳಿಗೆ ವಿಕೆಟ್​ ಒಪ್ಪಿಸಿ ನಿರಾಶೆಯನುಭವಿಸಿದರು. ಇವರ ಬೆನ್ನಲ್ಲೇ ಗಫ್ಟಿಲ್(21) ಮತ್ತು ಕಾನ್ವೆ(15) ವಿಲ್ ಯಂಗ್​(14)ಮತ್ತು ಚಾಂಪ್​ಮನ್​(7) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಆದರೆ, 6ನೇ ವಿಕೆಟ್‌ಗೆ ಒಂದಾದ ಗ್ಲೇನ್ ಫಿಲಿಫ್ಸ್‌​ ಮತ್ತು ಆಲ್​ರೌಂಡರ್ ಡೇರಿಲ್ ಮಿಚೆಲ್ 62 ರನ್​ಗಳ ಜೊತೆಯಾಟ ನೀಡಿದರು. ಫಿಲಿಫ್ಸ್​ 31 ಎಸೆತಗಳಲ್ಲಿ 57 ರನ್​ಗಳಿಸಿದರೆ, ಮಿಚೆಲ್ 16 ಎಸೆತಗಳಲ್ಲಿ 34 ರನ್​ಗಳಿಸಿದರು. ಈ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಕಿವೀಸ್​ ಇನ್ನಿಂಗ್ಸ್​ 17.5 ಓವರ್​ಗಳಿಗೆ ಮುಗಿಸಿ ಬಾಂಗ್ಲಾದೇಶಕ್ಕೆ 16 ಓವರ್​ಗಳಲ್ಲಿ 171ರನ್​ಗಳ ಟಾರ್ಗೆಟ್ ನೀಡಲಾಯಿತು.

171 ರನ್​ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 16 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 142 ರನ್​ಗಳಿಸಿ 28 ರನ್​ಗಳ ಸೋಲು ಕಂಡಿತು. ಸೌಮ್ಯ ಸರ್ಕಾರ್​ 27 ಎಸೆತಗಳಲ್ಲಿ 51, ನಯೀಮ್ 38 ಹಾಗೂ ಮಹಮದುಲ್ಲಾ 21 ರನ್​ಗಳಿಸಿದರು.

ನ್ಯೂಜಿಲ್ಯಾಂಡ್ ಪರ ಟಿಮ್​ ಸೌಥಿ, ಹ್ಯಾಮೀಶ್ ಬ್ಯಾನೆಟ್​ ಹಾಗೂ ಆ್ಯಡಂ ಮಿಲ್ನೆ ತಲಾ 2 ವಿಕೆಟ್ ಪಡೆದರು. ಗ್ಲೇನ್ ಫಿಲಿಫ್ಸ್​ ಒಂದು ವಿಕೆಟ್ ಪಡೆದರು. ಗುರುವಾರ ಎರಡು ತಂಡಗಳ ನಡುವೆ ಕೊನೆಯ ಟಿ20 ಪಂದ್ಯ ನಡೆಯಲಿದೆ.

ಇದನ್ನು ಓದಿ: ಟಿ20 ವಿಶ್ವಕಪ್​ನಲ್ಲಿ ಆರಂಭಿಕರಾಗಿ ರೋಹಿತ್-ಧವನ್ ಆಡಿದರೆ ಉತ್ತಮ : ಮಾಜಿ ಸೆಲೆಕ್ಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.