ಮೆಲ್ಬೋರ್ನ್: ನ್ಯೂಜಿಲ್ಯಾಂಡ್ ತಂಡದ ವೇಗದ ಬೌಲರ್ ನೈಲ್ ವ್ಯಾಗ್ನರ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 200ನೇ ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸ್ಟಿವ್ ಸ್ಮಿತ್ ವಿಕೆಟ್ ಪಡೆಯುವ ಮೂಲಕ ವ್ಯಾಗ್ನರ್ ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಸಾಧನೆ ಮಾಡಿದ್ದಾರೆ. ಅಲ್ಲದೆ ಕಿವೀಸ್ ಪರ ವೇಗವಾಗಿ 200 ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆಯನ್ನು ಅವರ ಹೆಸರಿಗೆ ಬರೆದುಕೊಂಡಿದ್ದಾರೆ.
-
Neil Wagner today became the second fastest New Zealand bowler to reach 200 Test wickets!#AUSvNZ pic.twitter.com/sHvhj6r2As
— ICC (@ICC) December 28, 2019 " class="align-text-top noRightClick twitterSection" data="
">Neil Wagner today became the second fastest New Zealand bowler to reach 200 Test wickets!#AUSvNZ pic.twitter.com/sHvhj6r2As
— ICC (@ICC) December 28, 2019Neil Wagner today became the second fastest New Zealand bowler to reach 200 Test wickets!#AUSvNZ pic.twitter.com/sHvhj6r2As
— ICC (@ICC) December 28, 2019
ವ್ಯಾಗ್ನರ್ಗಿಂತ ಮೊದಲು ಕಿವೀಸ್ನ ಲೆಜೆಂಡರಿ ಬೌಲರ್ ರಿಚರ್ಡ್ ಹ್ಯಾಡ್ಲಿ ಕೇವಲ 44 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ. 3ನೇ ಸ್ಥಾನದಲ್ಲಿ ಟ್ರೆಂಟ್ ಬೌಲ್ಟ್(53), 4ನೇ ಸ್ಥಾನದಲ್ಲಿ ಟಿಮ್ ಸೌಥಿ(56), 5ನೇ ಸ್ಥಾನದಲ್ಲಿ ಕ್ರಿಸ್ ಕೈರ್ನ್ಸ್(58) ಇದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ನಲ್ಲಿ ನೋಡುವುದಾದರೆ ಪಾಕಿಸ್ತಾನದ ಯಾಸಿರ್ ವೇಗವಾಗಿ 200 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಅವರು 33 ಟೆಸ್ಟ್ಗಳಲ್ಲಿ 200 ವಿಕೆಟ್ ಪಡೆದಿದ್ದರು. 2ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗ್ರಿಮ್ಮೆಟ್(36), 3ನೇ ಸ್ಥಾನದಲ್ಲಿ ಭಾರತದ ಅಶ್ವಿನ್(37), 4ನೇ ಸ್ಥಾನದಲ್ಲಿ ಬ್ರೇಟ್ ಲೀ(38), ವಾಕರ್ ಯೂನೀಸ್(38) ಇದ್ದಾರೆ.