ನವದೆಹಲಿ: ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ನಂತರ ತನ್ನ ಟೀಂ ಮೇಟ್ಗಳ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು 2019ರ ವಿಶ್ವಕಪ್ ನನ್ನ ನೆಚ್ಚಿನ ನೆನಪುಗಳಲ್ಲಿ ಒಂದು ಎಂದು ಕಿವೀಸ್ ಆಲ್‌ರೌಂಡರ್ ಜಿಮ್ಮಿ ನಿಶಾಮ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಿಂಗ್ಸ್ ಇಲೆವೆನ್ ಪಂಜಾಬ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ನಿಶಾಮ್ ಈ ರೀತಿ ಉತ್ತರಿಸಿದ್ದಾರೆ. ಓಲ್ಡ್ ಟ್ರ್ಯಾಫೋರ್ಡ್ನಲ್ಲಿ ನಡೆದ ಪಂದ್ಯ ಮೊದಲ ದಿನ ಮಳೆಯಿಂದ ರದ್ದಾದ ಹಿನ್ನೆಲೆ ಪಂದ್ಯವನ್ನು ಮಾರನೇ ದಿನಕ್ಕೆ ಮುಂದೂಡಲಾಗಿತ್ತು.
-
Sitting in the changing room with the guys after the semifinal against India https://t.co/uP5lp5ygLp
— Kings XI Punjab (@lionsdenkxip) June 2, 2020 " class="align-text-top noRightClick twitterSection" data="
">Sitting in the changing room with the guys after the semifinal against India https://t.co/uP5lp5ygLp
— Kings XI Punjab (@lionsdenkxip) June 2, 2020Sitting in the changing room with the guys after the semifinal against India https://t.co/uP5lp5ygLp
— Kings XI Punjab (@lionsdenkxip) June 2, 2020
ಮೊದಲು ಬ್ಯಾಟ್ ಮಾಡಿದ ಕಿವೀಸ್ 8 ವಿಕೆಟ್ ನಷ್ಟಕ್ಕೆ ಕೇವಲ 239 ರನ್ ಗಳಿಸಲಷ್ಟೆ ಶಕ್ತವಾಗಿತ್ತು. ಸುಲಭದ ಗುರಿ ಬೆನ್ನಟ್ಟಿದ ಭಾರತ ತಂಡ ಮ್ಯಾಟ್ ಹೆನ್ರಿ ಮತ್ತು ಟ್ರೆಂಟ್ ಬೋಲ್ಟ್ ದಾಳಿಯನ್ನು ಎದುರಿಸಲಾಗದೆ 96 ರನ್ ಗಳಿವಷ್ಟರಲ್ಲಿ ಪ್ರಮುಖ 6 ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ 116 ರನ್ ಜೊತೆಯಾಟವಾಡುವ ಮೂಲಕ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ, ಬಳಿಕ 59 ಎಸೆತಕ್ಕೆ 77 ರನ್ ಗಳಿಸಿದ ರವೀಂದ್ರ ಜಡೇಜ ಪೆವಿಲಯನ್ನತ್ತ ಹೆಜ್ಜೆ ಹಾಕಿದ್ದರು. ನಂತರ 49 ಓವರ್ನಲ್ಲಿ ಧೋನಿ ರನೌಟ್ ಆಗುವ ಮೂಲಕ ಕಿವೀಸ್ ಜಯ ಖಚಿತವಾಗಿತ್ತು.