ETV Bharat / sports

ಎನ್​ಸಿಎ ಜೊತೆಗೆ ಕೋವಿಡ್​-19 ಟಾಸ್ಕ್​ ಫೋರ್ಸ್​ ಭಾಗವಾಗಲಿರುವ ರಾಹುಲ್​ ದ್ರಾವಿಡ್​

author img

By

Published : Aug 4, 2020, 12:26 PM IST

ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಯ ಮುಖ್ಯಸ್ಥರಾಗಿ ಈಗಾಗಲೇ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಬಿಸಿಸಿಐ ಅವರನ್ನು ಕೋವಿಡ್-19 ಟಾಸ್ಕ್​ ಫೋರ್ಸ್​ ತಂಡಕ್ಕೂ ಸೇರ್ಪಡೆಗೊಳಿಸಿದೆ.

ರಾಹುಲ್​ ದ್ರಾವಿಡ್​
ರಾಹುಲ್​ ದ್ರಾವಿಡ್​

ಮುಂಬೈ: ಎನ್​ಸಿಎ ಅಧ್ಯಕ್ಷ ರಾಹುಲ್​ ದ್ರಾವಿಡ್​ ಬಿಸಿಸಿಐ ಕೋವಿಡ್​-19 ನಿಯಂತ್ರಿಸಲು ರಚನೆಯಾಗಿರುವ ಕಾರ್ಯಪಡೆ ಸೇರಿಕೊಂಡಿದ್ದಾರೆ.

ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಯ ಮುಖ್ಯಸ್ಥರಾಗಿ ಈಗಾಗಲೇ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಬಿಸಿಸಿಐ ಅವರನ್ನು ಕೋವಿಡ್-19 ಟಾಸ್ಕ್​ ಫೋರ್ಸ್​ ತಂಡಕ್ಕೂ ಸೇರ್ಪಡೆಗೊಳಿಸಿದೆ. ಈ ವಿಚಾರವನ್ನು ಬಿಸಿಸಿಐ ರಾಜ್ಯಗಳಿಗೆ ಕಳುಹಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ)ನಲ್ಲಿ ಬಿಸಿಸಿಐ ತಿಳಿಸಿದೆ.

ಸ್ಟ್ಯಾಂಡರ್ಡ್​ ಆಪರೇಟಿಂಗ್ ಪ್ರೊಸೀಜರ್​ನಲ್ಲಿ ಎಲ್ಲಾ ರಾಜ್ಯಗಳ ಕ್ರಿಕೆಟಿಗರು ತಮ್ಮ ಅಭ್ಯಾಸ ಪುನರಾರಂಭಿಸುವ ಮೊದಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕಿದೆ. ಎಸ್​ಒಪಿ ಪ್ರಕಾರ 60 ವರ್ಷ ಮೇಲ್ಪಟ್ಟ ಸಹಾಯಕ ಸಿಬ್ಬಂದಿ ಅಥವಾ ಮೈದಾನದ ಯಾವುದೇ ಸಿಬ್ಬಂದಿ ಹಾಗೂ ಸಕ್ಕರೆ ಕಾಯಿಲೆ, ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರು ಕೂಡ ತರಬೇತಿಗೆ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿದೆ.

ತರಬೇತಿ ಪುನರಾರಂಭಗೊಂಡಾಗ ಕೋವಿಡ್-19 ಟಾಸ್ಕ್ ಫೋರ್ಸ್‌ನಲ್ಲಿ ರಾಹುಲ್ ದ್ರಾವಿಡ್ ಜೊತೆ ವೈದ್ಯಕೀಯ ಅಧಿಕಾರಿಗಳು, ನೈರ್ಮಲ್ಯ ಅಧಿಕಾರಿ, ಬಿಸಿಸಿಐ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.