ಸಿಡ್ನಿ: ಭಾರತದ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರಂಥ ಅನುಭವಿ ಬೌಲರ್ಗಳೇ ಬ್ಯಾಟ್ಸ್ಮನ್ಗಳೆದುರು ಸಾಕಷ್ಟು ರನ್ ಬಿಟ್ಟುಕೊಟ್ಟು ಸಿಡ್ನಿ ಮೈದಾನದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ ಇದೇ ಕ್ರೀಡಾಂಗಣದಲ್ಲಿ ಕೇವಲ ಎರಡೇ ಎರಡು ಅಂತಾರಾಷ್ಟ್ರೀಯ ಪಂದ್ಯವನ್ನಾಡಿರುವ ನಟರಾಜನ್ ಬ್ಯಾಟ್ಸ್ಮನ್ಸ್ನೇಹಿ ಪಿಚ್ನಲ್ಲಿ ಮಿಂಚು ಹರಿಸಿದ್ದಾರೆ. ಈ ಮೂಲಕ ವಿಶ್ವಕ್ರಿಕೆಟ್ನಲ್ಲಿ ಕ್ರಿಕೆಟ್ ಪಂಡಿತರಿಂದ ಮೆಚ್ಚುಗೆ ಗಳಿಸಿದ್ದಾರೆ.
ಭಾರತ ತಂಡದ ಯಾರ್ಕರ್ ಕಿಂಗ್ ಎಂದೇ ಖ್ಯಾತರಾಗಿರುವ ಜಸ್ಪ್ರೀತ್ ಬುಮ್ರಾ ಸಿಡ್ನಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 73 ಮತ್ತು 79, ಅನುಭವಿ ಮೊಹಮ್ಮದ್ ಶಮಿ 59 ಮತ್ತು 73 ಹಾಗೂ ಆಸ್ಟ್ರೆಲಿಯಾದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ 65 ಮತ್ತು 82 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.
ಅಷ್ಟೇ ಏಕೆ?, ಇಂದು ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಭಾರತದ ಎಲ್ಲಾ ಬೌಲರ್ಗಳು 9ಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರೆ, ನಟರಾಜನ್ ಮಾತ್ರ ಕೇವಲ 5ರ ಏಕಾನಮಿಯಲ್ಲಿ 20 ರನ್ ಬಿಟ್ಟುಕೊಟ್ಟಿದ್ದಲ್ಲದೆ 2 ವಿಕೆಟ್ ಕೂಡ ಪಡೆದರು.
ಓದಿ: ಅಭ್ಯಾಸ ಪಂದ್ಯದಲ್ಲಿ ಸೊನ್ನೆ ಸುತ್ತಿದ ಪೃಥ್ವಿ ಶಾ- ಗಿಲ್: ನಾಯಕ ರಹಾನೆ ಶತಕದಾಟ
ಮೂರು ತಿಂಗಳ ಹಿಂದೆ ನಟರಾಜನ್ ಯಾರೆಂದು ತಮಿಳುನಾಡಿನ ಕೆಲವರಿಗೆ ಬಿಟ್ಟರೆ ಬೇರೆ ಯಾರಿಗೂ ತಿಳಿದಿರಲಿಲ್ಲ. ಆದರೆ ಐಪಿಎಲ್ ಪಂದ್ಯಾವಳಿಗಳಲ್ಲಿ ಅವರು ನೀಡಿದ ಪ್ರದರ್ಶನ ಇಂದು ವಿಶ್ವಮಟ್ಟದಲ್ಲಿ ಯಾರ್ಕರ್ ಕಿಂಗ್ ಎಂಬ ಬಿರುದನ್ನು ಅವರಿಗೆ ತಂದು ಕೊಟ್ಟಿದೆ. ಸ್ವತಃ ಆಸ್ಟ್ರೇಲಿಯಾ ಮಾಧ್ಯಮಗಳೇ ನಟರಾಜನ್ ಅವರನ್ನು ಯಾರ್ಕರ್ ಸ್ಪೆಷಲಿಸ್ಟ್ ಎಂದು ಕರೆದಿವೆ.
-
Onwards and upwards!
— BCCI (@BCCI) December 4, 2020 " class="align-text-top noRightClick twitterSection" data="
After his ODI debut, @Natarajan_91 will today play his maiden T20I game for #TeamIndia. He gets his 🧢 from @Jaspritbumrah93 #AUSvIND pic.twitter.com/hfDsw2Tycu
">Onwards and upwards!
— BCCI (@BCCI) December 4, 2020
After his ODI debut, @Natarajan_91 will today play his maiden T20I game for #TeamIndia. He gets his 🧢 from @Jaspritbumrah93 #AUSvIND pic.twitter.com/hfDsw2TycuOnwards and upwards!
— BCCI (@BCCI) December 4, 2020
After his ODI debut, @Natarajan_91 will today play his maiden T20I game for #TeamIndia. He gets his 🧢 from @Jaspritbumrah93 #AUSvIND pic.twitter.com/hfDsw2Tycu
ನಟರಾಜನ್ ಬೌಲಿಂಗ್ ಬಗ್ಗೆ ಭಾರತದ ಮಾಜಿ ವೇಗಿ ಜಹೀರ್ ಖಾನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು," ತಂಡದಲ್ಲಿರುವ ಎಲ್ಲಾ ಬೌಲರ್ಗಳು ರನ್ ಬಿಟ್ಟುಕೊಡುವ ಸಂದರ್ಭದಲ್ಲಿ ಒಬ್ಬ ಬೌಲರ್ ಬ್ಯಾಟ್ಸ್ಮನ್ಗಳ ವಿರುದ್ಧ ಹೋರಾಟ ನಡೆಸುವುದು ಸುಲಭ ಮಾತಲ್ಲ. ಆದರೆ ನಟರಾಜನ್ ಸಂದಿಗ್ಧ ಸನ್ನಿವೇಶದಲ್ಲಿ ಬೌಲಿಂಗ್ ಮಾಡುವ ಕಲೆಯನ್ನು ಬಹುಬೇಗ ರೂಢಿಸಿಕೊಂಡಿದ್ದಾರೆ. ಇದು ಖಂಡಿತ ಭಾರತ ತಂಡಕ್ಕೆ ಹಾಗೂ ಅವರ ಭವಿಷ್ಯಕ್ಕೂ ಬಹುದೊಡ್ಡ ವಿಷಯ" ಎಂದು ಕ್ರಿಕ್ಬಜ್ ಜೊತೆಗಿನ ಸಂವಾದದಲ್ಲಿ ಅವರು ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ ನಟರಾಜನ್ ಸಾಧನೆ:
ನಟರಾಜನ್ ಐಪಿಎಲ್‌ನಲ್ಲಿ 16 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದರು. ಅವರು ಟೂರ್ನಿಯಲ್ಲಿ 166 ಯಾರ್ಕರ್ ಬೌಲಿಂಗ್ ಮಾಡುವ ಮೂಲಕ ಗರಿಷ್ಠ ಯಾರ್ಕರ್ ಎಸೆದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
-
T Natarajan
— Sarang Bhalerao (@bhaleraosarang) December 4, 2020 " class="align-text-top noRightClick twitterSection" data="
2016: Conceded 5 runs in super over v Abhinav Mukund & Washington Sundar in TNPL
2017: IPL debut for KXIP
2020: Impressive for SRH. Picked big wickets of MSD, Kohli, ABD, Russell in IPL. Makes ODI & T20 debut for India
Never stop dreamingpic.twitter.com/1lxBo4p62X
">T Natarajan
— Sarang Bhalerao (@bhaleraosarang) December 4, 2020

Never stop dreamingpic.twitter.com/1lxBo4p62XT Natarajan
— Sarang Bhalerao (@bhaleraosarang) December 4, 2020
2016: Conceded 5 runs in super over v Abhinav Mukund & Washington Sundar in TNPL
2017: IPL debut for KXIP
2020: Impressive for SRH. Picked big wickets of MSD, Kohli, ABD, Russell in IPL. Makes ODI & T20 debut for India
Never stop dreamingpic.twitter.com/1lxBo4p62X
ಆಸ್ಟ್ರೇಲಿಯಾ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಪ್ರಯಾಣಿಸಿದ್ದ ನಟರಾಜನ್ ನಂತರ ವರುಣ್ ಚಕ್ರವರ್ತಿ ಗಾಯಗೊಂಡ ಕಾರಣ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಸೈನಿ ಗಾಯಗೊಂಡಿದ್ದರಿಂದ ಏಕದಿನ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದರು.
ಏಕದಿನ ಪಂದ್ಯಗಳಲ್ಲಿ ಸಾಧನೆ:
ಏಕದಿನ ಪಂದ್ಯದಲ್ಲಿ ನಟರಾಜನ್ 70 ರನ್‌ಗಳಿಗೆ 2 ವಿಕೆಟ್ ಪಡೆದಿದ್ದರು. ಟಿ20 ಸರಣಿಯ ಮೊದಲ ಪಂದ್ಯದಲ್ಲಿ 30ಕ್ಕೆ 3 ವಿಕೆಟ್ ಹಾಗೂ ಎರಡನೇ ಪಂದ್ಯದಲ್ಲಿ 20ಕ್ಕೆ 2 ವಿಕೆಟ್ ಪಡೆದಿದ್ದಾರೆ.