ETV Bharat / sports

ಓಮನ್​ಗೆ ಶಾಕ್​ ನೀಡಿ ಚೊಚ್ಚಲ ಬಾರಿಗೆ ಟಿ-20 ವಿಶ್ವಕಪ್​ ಅರ್ಹತೆ ಪಡೆದ ನಮೀಬಿಯಾ! - ಓಮನ್​ ಮಣಿಸಿದ ನಮೀಬಿಯಾ

ವಿಶ್ವಕಪ್​ ಕ್ವಾಲಿಫೈಯರ್​ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿದ ನಮೀಬಿಯಾ 2020ರ ವಿಶ್ವಕಪ್​ ಅರ್ಹತೆ ಪಡೆದ 4 ನೇ ತಂಡ ಎನಿಸಿತು. ಈಗಾಗಲೇ ಐರ್ಲೆಂಡ್​, ಪುಪುವಾ ನ್ಯೂಗೀನಿಯ ಹಾಗೂ ನೆದರ್ಲೆಂಡ್ಸ್​ ಅರ್ಹತೆ ಪಡೆದಿದ್ದವು.

Namibia qualify ಟಿ20 ವಿಶ್ವಕಪ್​ ಅರ್ಹತೆ ಪಡೆದ ನಮೀಬಿಯಾ
author img

By

Published : Oct 30, 2019, 1:01 PM IST

ದುಬೈ: ಕ್ರಿಕೆಟ್​ನಲ್ಲಿ ಅಂಬೆಗಾಲಿಡುತ್ತಿರುವ ನಮೀಬಿಯಾ ತನ್ನಂತೆಯೇ ಇರುವ ಓಮನ್​ ತಂಡವನ್ನು 54 ರನ್​ಗಳಿಂದ ಬಗ್ಗುಬಡಿದು 2020ರ ಟಿ20 ವಿಶ್ವಕಪ್​ಗೆ ಅರ್ಹತೆಗಿಟ್ಟಿಸಿಕೊಂಡಿದೆ.

ಮಂಗಳವಾರ ನಡೆದ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಓಮನ್​ ವಿರುದ್ಧ ಮೊದಲು ಬ್ಯಾಟಿಂಗ್​ ನಡೆಸಿ 161 ರನ್​ಗಳಿಸಿತ್ತು. ನಮೀಬಿಯಾ ಪರ ಜೆಜೆ ಸ್ಮಿತ್​ 25 ಎಸೆತಗಳಲ್ಲಿ 5 ಸಿಕ್ಸರ್​ ಹಾಗೂ ಕ್ರೈಗ್​ ವಿಲಿಯಮ್ಸ್​ 41 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 2 ಬೌಂಡರಿ ನೆರವಿನಿಂದ 45 ರನ್​ಗಳಿಸಿ ತಂಡವು ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

162 ರನ್​ಗಳ ಟಾರ್ಗೆಟ್​ ಪಡೆದ ಓಮನ್ ತಂಡಕ್ಕೆ ಆರಂಭಿಕ​ ಕನ್ವರ್​ ಅಲಿ 41 ರನ್​ಗಳಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ 20ರ ಗಡಿದಾಟದೇ ಇರುವುದು ಸೋಲಿಗೆ ಕಾರಣವಾಯಿತು. ಒಟ್ಟಾರೆ 19.1 ಓವರ್​ಗಳಲ್ಲಿ 107 ರನ್​ಗಳಿಗೆ ಆಲೌಟ್​ ಆಗುವ ಮೂಲಕ 54 ರನ್​ಗಳ ಸೋಲನುಭವಿಸಿತು.

ನಮೀಬಿಯಾ ಪರ ನಾಯಕ ಗೆರ್ಹಾರ್ಡ್​ ಎರಾಸ್ಮಸ್​ 3, ಬೆರ್ನಾರ್ಡ್​ ಸ್ಕಾಲ್ಟ್ಜ್​ 3 ಜೆಜೆ ಸ್ಮಿತ್​ 2 ಹಾಗೂ ಜಾನ್​ ಫ್ರಿಲಿಂಕ್ ಹಾಗೂ ಕ್ರೈಗ್​ ವಿಲಿಯಮ್ಸ್​ ತಲಾ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.​

ಈ ಗೆಲುವಿನ ಮೂಲಕ ವಿಶ್ವಕಪ್​ ಕ್ವಾಲಿಫೈಯರ್​ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿದ ನಮೀಬಿಯಾ 2020ರ ವಿಶ್ವಕಪ್​ ಅರ್ಹತೆ ಪಡೆದ 14 ನೇ ತಂಡ ಎನಿಸಿತು. ಈಗಾಲೆ ಐರ್ಲೆಂಡ್​, ಪುಪುವಾ ನ್ಯೂಗೀನಿಯ, ನೆದರ್ಲೆಂಡ್ಸ್​ ಅರ್ಹತೆ ಪಡೆದಿದ್ದವು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.