ದುಬೈ: ಭಾನುವಾರ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಸಿಡಿಸಿ ಸಿಎಸ್ಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರುತುರಾಜ್ ಧೋನಿ ಜೊತೆ ಬ್ಯಾಟಿಂಗ್ ಆಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನ 45ನೇ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 145 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಸಿಎಸ್ಕೆ ಗಾಯಕ್ವಾಡ್(65) ಅವರ ಅಜೇಯ ಅರ್ಧಶತಕದ ನೆರವಿನಿಂದ ಇನ್ನು 8 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತ್ತು.
ಸತತ ಸೋಲು, ಹೀನಾಯ ಪ್ರದರ್ಶನದಿಂದ ಬೇಸತ್ತಿದ್ದ ಚೆನ್ನೈ ತಂಡ ಈ ಗೆಲುವಿನ ಮೂಲಕ ಸ್ವಲ್ಪ ನಗುಮುಖ ಕಾಣುವಂತಾಯಿತು. ಅದರಲ್ಲೂ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ್ದಕ್ಕೆ ಚೆನ್ನೈ ತಂಡ ಸೋಲಿನ ಕಹಿಗಳನ್ನು ಮರೆಯುವಂತೆ ಮಾಡಿತ್ತು. ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ಗಾಯಕ್ವಾಡ್ ಕೂಡ ಗೆಲುವಿನ ಜೊತೆಗೆ ಧೋನಿ ಆಡಿದ್ದನ್ನು ಸಂಭ್ರಮ ವ್ಯಕ್ತಪಡಿಸಿದ್ದಾರೆ.
" ಅರ್ಧಶತಕ ಸಿಡಿಸಿಉದ ವೈಯಕ್ತಕ ಸಾಧನೆಗಿಂತ ತಂಡ ಗೆಲುವು ಸಾಧಿಸಿದ್ದಕ್ಕೆ ಹೆಚ್ಚು ಸಂತೋಷವಾಗಿದೆ. ಚೆನ್ನೈನಲ್ಲಿ ಕ್ಯಾಂಪ್ ಆರಂಭವಾದಾಗ ನನಗೆ ತಂಡದಲ್ಲಿ ಆಡುವ ಅವಕಾಶ ಹಾಗೂ ಧೋನಿ ಭಾಯ್ ಜೊತೆ ಬ್ಯಾಟಿಂಗ್ ಆಡುತ್ತೇನೆಂಬ ಭರವಸೆಯಿತ್ತು. ಅದು ಈ ಪಂದ್ಯದಲ್ಲಿ ನನಸಾಗಿದೆ. ಮಹಿ ಭಾಯ್ ಜೊತೆ ಬ್ಯಾಟಿಂಗ್ ನಡೆಸಿದ್ದು, ಮುಂದಿನ ಪಂದ್ಯದಲ್ಲಿ ಗಮನ ಹರಿಸಲು ನನಗೆ ತುಂಬಾ ಅನುಕೂಲವಾಗಲಿದೆ" ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಗಾಯಕ್ವಾಡ್ ಹೇಳಿದ್ದಾರೆ.