ರಾಂಚಿ: ಭಾರತ ತಂಡದ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾಗಿರುವ ಎಂ ಎಸ್ ಧೋನಿ ಬೈಕ್ ಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಧೋನಿ ಶೆಡ್ಗೆ ಗ್ರ್ಯಾಂಡ್ ಚೆರೋಕಿ ಕಾರ್ ಕೂಡ ಬಂದು ಸೇರಿದೆ.
ಭಾರತ ತಂಡ ಅತ್ಯುತ್ತಮ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಕಾರು ಪ್ರಿಯರಾಗಿದ್ದು, ಹಲವಾರು ಕಂಪನಿಗಳ ಐಷಾರಾಮಿ ಕಾರು ಹೊಂದಿದ್ದಾರೆ. ಅದೇ ರೀತಿ ಧೋನಿ ಕೂಡ ಬೈಕ್ ಪ್ರಿಯರಾಗಿದ್ದು ಅವರ ಬಳಿ ಸಮಾರು 44 ಬೈಕ್ಗಳಿವೆ. ಈ ವಿಚಾರವನ್ನು ರವೀಂದ್ರ ಜಡೇಜಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
- " class="align-text-top noRightClick twitterSection" data="
">
ಕಾರುಗಳಲ್ಲಿ ನೋಡುವುದಾದರೆ ಆಡಿ ಕ್ಯೂ7, ಹಮ್ಮರ್ ಹೆಚ್ 2, ಮಿತ್ಸುಬಿಶಿ ಪೆಜೆರೋ ಎಸ್ಎಫ್ಎಕ್ಸ್ ಔಟ್ಲ್ಯಾಂಡರ್, ಮಹಿಂದ್ರಾ ಸ್ಕಾರ್ಪಿಯೋ, ಲ್ಯಾಂಡ್ರೋವರ್ ಫ್ರೀಲ್ಯಾಂಡರ್ 2, ಫೆರಾರಿ 599 ಜಿಟಿಒ ಅಂತ ದುಬಾರಿ ಕಾರುಗಳನ್ನು ಹೊಂದಿದ್ದಾರೆ.
ಸದ್ಯಕ್ಕೆ ಧೋನಿ ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಸಮಯದಲ್ಲಿ ಅವರ ಮನೆಗೆ ಅವರಿಷ್ಟದ ಗ್ರ್ಯಾಂಡ್ ಚೆರೋಕಿ ಕಾರ್ ಬಂದು ತಲುಪಿದ್ದು, ಇದನ್ನು ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.