ಮುಂಬೈ : ಎಬಿಡಿ ವಿಲಿಯರ್ಸ್ 44 ಬಾಲ್‌ಗೆ 149 ರನ್ ಸಿಡಿಸುತ್ತಾರಂದ್ರೇ ಕ್ರಿಕೆಟ್ ಬ್ಯಾಟ್ಸ್‌ಮೆನ್ ಗೇಮ್ ಅಲ್ಲದೇ ಮತ್ತೇನು ಅಂತ ಕೇಳೋರಿದ್ದಾರೆ. ಭಾರತವೂ ಗೇಮ್ ಚೇಂಜರ್, ಗೇಮ್ ಫಿನಿಷರ್ ಬ್ಯಾಟ್ಸ್‌ಮೆನ್‌ಗಳನ್ನ ಕಂಡಿದೆ. ಅಂಥ ಅದ್ಭುತ ಏಳು ಗೇಮ್ ಚೇಂಜರ್ ಬಗ್ಗೆ ಹೇಳ್ತೀವಿ ಕೇಳಿ.
90 ದಶಕದ ಗೇಮ್ ಚೇಂಜರ್‌ಗಳನ್ನ ಮರೆಯಲಾಗಲ್ಲ:
ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಬ್ರಿಲಿಯಂಟ್ ಗೇಮ್ ಫಿನಿಷರ್. ಕ್ರಿಕೆಟ್ ಪ್ರೇಮಿಗಳು ಇವರನ್ನ ಮರೆಯಲು ಸಾಧ್ಯವಿಲ್ಲ. ಎಷ್ಟೋ ವರ್ಷಗಳಿಂದ ಮೆನ್ ಇನ್ ಬ್ಲ್ಯೂ ನಿಜಕ್ಕೂ ಅದ್ಭುತ ಗೇಮ್ ಫಿನಿಷರ್‌ನ ಹೊಂದಿತ್ತು. ಬರೀ ಒನ್‌ಡೇ ಮ್ಯಾಚ್‌ನಲ್ಲಿ ಗುರಿ ಚೇಸ್ ಮಾಡೋದಷ್ಟೇ ಅಲ್ಲ, ಮೊದಲ ಇನ್ನಿಂಗ್ಸ್‌ನಲ್ಲೂ ತಮ್ಮ ಬ್ಯಾಟ್‌ನಿಂದ ಮಿಂಚು ಹರಿಸಿದ್ದಾರೆ. ತಂಡಕ್ಕೆ ಒಳ್ಳೇ ಸ್ಕೋರ್ ಕಲೆಹಾಕಿದ್ದಾರೆ. ಟೈಮಿಂಗ್, ಒಳ್ಳೇ ರನ್ನಿಂಗ್ ಮತ್ತು ಬಾಲ್‌ನ ದಂಡಿಸುವ ಮೂಲಕ ಎಂಥ ಕಷ್ಟದ ಸಮಯದಲ್ಲೂ ಆಟದ ಗತಿ ಬದಲಿಸುವ ಸಾಮರ್ಥ್ಯ ಪಡೆದಿದ್ದರು. ಗೆಲ್ಲಲು ತಮ್ಮ ಮಹತ್ವಪೂರ್ಣ ಬ್ಯಾಟಿಂಗ್ ಕಾಣಿಕೆ ನೀಡಿದ್ದರು. 1990 ದಶಕದ ಬಾಲ್ಯದಲ್ಲಿ ಕೆಲ ಇಂಥ ಆಟಗಾರರ ಬ್ಯಾಟಿಂಗ್ ಕೌಶಲ್ಯ ನೋಡಲು ಸಿಗುತ್ತಿತ್ತು. ಆಸೀಸ್‌ನ ಮೈಕೆಲ್ ಬೆವನ್‌ರ ಮಾರ್ವಲಸ್ ಬ್ಯಾಟಿಂಗ್‌ಗೆ ತಲೆದೂಗದವರಿಲ್ಲ. ಆಸೀಸ್ ತಂಡ ಹೋಪ್‌ಲೆಸ್ ಸ್ಥಿತಿಯಲ್ಲಿ ಬ್ಯಾಟಿಂಗ್‌ಗೆ ಬಂದ್ರೂ ಬೆವನ್ ಸ್ಕ್ರೀಜ್ ಕಚ್ಚಿ ಕೊನೆಗೆ ಅದ್ಭುತ ಗೆಲುವನ್ನ ತಂಡಕ್ಕೆ ತಂದು ಕೊಡ್ತಾಯಿದ್ದರು. ಆಸೀಸ್ ತಂಡಕ್ಕೆ ಆಗ ಮೈಕೆಲ್ ಬೆವನ್ ಅಲ್ಟಿಮೇಟ್ ಗೇಮ್ ಫಿನಿಷರ್, ಗೇಮ್ ಚೇಂಜರ್ ಎಂದು ಕರೆಯಿಸಿಕೊಳ್ಳುತ್ತಿದ್ದರು.
21ನೇ ಶತಮಾನಕ್ಕೆ ಕಾಲಿಡುತ್ತಿದ್ದಂತೆ ಈಗ ಟೀಂ ಇಂಡಿಯಾದಲ್ಲೂ ಅದ್ಭುತ ಗೇಮ್ ಫಿನಿಷರ್‌ಗಳಿದ್ದಾರೆ. ದೇಶಕ್ಕಾಗಿ ಅವರು ಆಡಿದ ಇನ್ನಿಂಗ್ಸ್‌ಗಳನ್ನ ಯಾವುದೇ ಕ್ರಿಕೆಟ್ ಪ್ರೇಮಿಯೂ ಮರೆಯಲ್ಲ. ದೇಶಕ್ಕಾಗಿ ಆಡಿದ ಇಂಥ ಆಟಗಾರರನ್ನು ಹೊಂದಿರುವ ಭಾರತವೇ ಲಕ್ಕಿ. ಬರೀ ಗೇಮ್ ಚೇಂಜರ್ ಅಷ್ಟೇ ಅಲ್ಲ, ಇಂಥ ಘಾತಕ ಬ್ಯಾಟಿಂಗ್‌ನಿಂದ ಮ್ಯಾಚ್‌ನ ಹೇಗೆ ಚೇಂಜ್ ಮಾಡಬೇಕೆಂಬುದನ್ನ ಕಲೆ ಕಲಿಸಿಕೊಟ್ಟಿದ್ದ ಪ್ಲೇಯರ್‌ಗಳವರು.

1. ಎಂ.ಎಸ್ ಧೋನಿ:
ವಿಧ್ವಂಸಕ ಬ್ಯಾಟಿಂಗ್‌ನಿಂದ ಎದುರಾಳಿಗೆ ಭಯ ಹುಟ್ಟಿಸುವ ಎಂ.ಎಸ್ ಧೋನಿಗೆ, ಅವಶ್ಯವಿದ್ದಾಗ ತನ್ನ ಜವಾಬ್ದಾರಿಯಿಂದ ತನ್ನ ಮುನ್ನಡೆಸಿ, ಗೆಲುವು ಧಕ್ಕಿಸಿಕೊಟ್ಟ ಕೀರ್ತಿಯಿದೆ. ಕೂಲ್ ಬಾಯ್ ಧೋನಿ 2006ರಲ್ಲಿ ಲಾಹೋರ್‌ನಲ್ಲಿ ಪಾಕ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 46 ಬಾಲ್‌ಗೆ 72 ರನ್ ಪೇರಿಸಿ, ಟೀಂ ಇಂಡಿಯಾಗೆ ಗೆಲುವು ತಂದಿದ್ದರು. 2011ರ ವರ್ಲ್ಡ್‌ಕಪ್‌ನಲ್ಲಿ ಲಂಕಾ ವಿರುದ್ಧದ ಅಮೋಘ ಪ್ರದರ್ಶನವನ್ನ ಯಾರು ನೋಡಿಲ್ಲ ಹೇಳಿ. ಹೆಲಿಕಾಪ್ಟರ್ ಶಾಟ್‌ನಿಂದಲೇ ಗೇಮ್‌ನ ಕೂಲಾಗಿ ಫಿನಿಷ್ ಮಾಡಿದ್ದರು ಧೋನಿ.
2. ಯುವರಾಜ್ ಸಿಂಗ್:
ಯುವಿ ಅಂದ್ರೇನೆ ಯುವೋತ್ಸಾಹ. ನಿರರ್ಗಳ ಸ್ಟ್ರೋಕ್ ಪ್ಲೇ ಎಡಗೈ ಬ್ಯಾಟ್ಸ್‌ಮೆನ್ ಟ್ಯಾಲೆಂಟ್. ಆ ಆಟದಿಂದಲೇ ಪಂದ್ಯವನ್ನ ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗುವ ತಾಕತ್ತು ಯುವಿಗೆ ಮಾತ್ರವಿದೆ. 2003ರಲ್ಲಿ ನಡೆದಿದ್ದ ವಿಬಿ ಸರಣಿಯಲ್ಲಿ ಆಸೀಸ್ ವಿರುದ್ಧ 139ರನ್ ಸಿಡಿಸಿದ್ದ ಯುವಿ ಪಂದ್ಯದ ದಿಕ್ಕನ್ನೇ ಚೇಂಜ್ ಮಾಡಿದ್ದರು.

3. ಸುರೇಶ್ ರೈನಾ:
ಕ್ರಿಯೇಟಿವಾಗಿ ಹೊಸ ಹೊಸ ಶಾಟ್‌ಗಳನ್ನ ಪ್ರಯೋಗಿಸಲು ರೈನಾ ಯಾವತ್ತೂ ಹಿಂಜರಿದಿಲ್ಲ. ಅದೇ ಅವರ ಬಲ ಹಾಗೂ ದೌರ್ಬಲ್ಯವೂ ಹೌದು. ಅಸಾಧ್ಯ ಫೀಲ್ಡಿಂಗ್ ಸಾಮರ್ಥ್ಯದಿಂದಲೂ ಹೆಸರುವಾಸಿ ರೈನಾ. ಟೀಂ ಇಂಡಿಯಾ ಪರ ಸಾಕಷ್ಟು ಪಂದ್ಯ ಗೆಲ್ಲಿಸಿಕೊಂಡ ಕೀರ್ತಿಯೂ ರೈನಾಗೆ ಸಲ್ಲಬೇಕು.
4. ಕೇದಾರ್ ಜಾಧವ್:
ಒಂದು ವೇಳೆ ಸ್ಕ್ರೀಜ್‌ನಲ್ಲಿ ಕೇದಾರ್ ಜಾದವ್ ಇದ್ರೇ, ಎದುರಾಳಿ ತಂಡ ತಾವೇ ಗೆದ್ದುಬಿಡ್ತು ಅಂತಾ ತಿಳಿದುಕೊಳ್ಳೋದಕ್ಕೆ ಸಾಧ್ಯವಿಲ್ಲ. ಯಾವುದೇ ಸ್ಥಿತಿಯಲ್ಲೂ ಪಂದ್ಯವನ್ನ ಉಲ್ಟಾ - ಪಲ್ಟಾ ಮಾಡುವ ಸಾಮರ್ಥ್ಯ ಕೇದಾರ್ ಗಿದೆ. ಪುಣೆಯಲ್ಲಿ ಆಂಗ್ಲರ ವಿರುದ್ಧ ನಡೆದ ಮೂರನೆ ಏಕದಿನ ಪಂದ್ಯದಲ್ಲಿ 76 ಬಾಲ್ಗಳಲ್ಲಿ 120 ರನ್ ಸಿಡಿಸುವ ಮೂಲಕ ಕೇದಾರ್ ಜಾಧವ್ ಅದ್ಭುತ ಇನ್ನಿಂಗ್ಸ್ ಆಡಿ, ಆ ಮ್ಯಾಚ್ ಗೆಲ್ಲಿಸಿದ್ದರು.

5. ಮೊಹ್ಮಮದ್ ಕೈಫ್:
ಟೀಂ ಇಂಡಿಯಾ ಇನ್ನೇನು ಪಂದ್ಯ ಕೈಚೆಲ್ಲಿದೆ ಅನ್ನೋ ಸಂಕಷ್ಟದ ಸ್ಥಿತಿಯಲ್ಲೂ ಕೈಫ್ ಬಹಳಷ್ಟು ಸಾರಿ ಪಂದ್ಯ ಗೆಲ್ಲಿಸಿದ್ದಾರೆ. 2002ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಿಂಬಾಬ್ವೆ ವಿರುದ್ಧದ ಮ್ಯಾಚ್‌ನಲ್ಲಿ ಟೀಂ ಇಂಡಿಯಾ ಮಹತ್ವದ ವಿಕೆಟ್ಸ್‌ಗಳನ್ನ ಕೈಫ್ ತಮ್ಮ ವೇಗದ ದಾಳಿಯಿಂದ ಉರುಳಿಸಿದ್ದರು. ಆದರೆ, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ಮೊಹಮ್ಮದ್ ಕೈಫ್, ಅವತ್ತು 111 ರನ್ ಪೇರಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಆ ಪಂದ್ಯವನ್ನ ಈಗಲೂ ಕ್ರಿಕೆಟ್ ಪ್ರೇಮಿಗಳು ಮರೆತಿಲ್ಲ.

6. ಅಜಯ್ ಜಡೇಜಾ:
ಕ್ವಿಕ್ ರನ್ನರ್. ಹಾರ್ಡ್ ಹಿಟ್ಟರ್. ಸಂಕಷ್ಟದ ವೇಳೆ ತಂಡಕ್ಕೆ ಅಮೂಲ್ಯ ರನ್‌ಗಳ ಕಾಣಿಕೆ ನೀಡುತ್ತಿದ್ದರು ಅಜಯ್ ಜಡೇಜಾ. ಗೇಮ್ ಫಿನಿಷರ್ ಎಂದು ಕೂಡಲೇ ಥಟ್ ಎಂದು ನೆನಪಿಗೆ ಬರುವ ಹೆಸರೇ ಜಡೇಜಾ. ಬೆಂಗಳೂರಿನಲ್ಲಿ ನಡೆದಿದ್ದ 1996ರ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯ ಅದು. ಅವತ್ತು ಪಾಕ್ ಬೌಲರ್ ವಾಖರ್ ಯೂನಿಸ್ ಓವರ್‌ನಲ್ಲಿ ಅಜೇಯ ಘರ್ಜನೆ ಇನ್ನೂ ಕಣ್ಮುಂದೆ ಕಟ್ಟಿದಂತಿದೆ.
7. ಕಪಿಲ್ ದೇವ್:
ಆರಂಭಿಕ ವೇಗದ ಬೌಲರಾಗಿದ್ದರು ಹರಿಯಾಣದ ಹುಲಿ ಕಪಿಲ್ ದೇವ್ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಇಳಿಯುತ್ತಿದ್ದರು. ತಂಡಕ್ಕೆ ಅವಶ್ಯವಿದ್ದಾಗ ಅದ್ಭುತ ಬ್ಯಾಟಿಂಗ್‌ನಿಂದ ಪಂದ್ಯ ಗೆಲ್ಲಿಸಿಕೊಡುತ್ತಿದ್ದರು ಕಪಿಲ್‌ಪಾಜಿ. 1983ರಲ್ಲಿ ವರ್ಲ್ಡ್‌ಕಪ್ ಗೆಲ್ಲೋದಕ್ಕೆ ಕ್ಯಾಪ್ಟೆನ್ಸಿ ಜತೆ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಕಪಿಲ್ ಶ್ರೇಷ್ಠ ಪ್ರದರ್ಶನ ತೋರಿದ್ದರು. ವರ್ಲ್ಡ್‌ಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 138 ಬಾಲ್‌ಗೆ 175 ಸಿಡಿಸಿದ್ದ ಅವರ ಬ್ಯಾಟಿಂಗ್ ಪವರ್‌ಗೆ ಸರಿಸಮಾನರಿಲ್ಲ.
