ರಾಂಚಿ: ಇಂಗ್ಲೆಂಡ್ನಲ್ಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ಎಂ.ಎಸ್. ಧೋನಿ ಮೈದಾನಕ್ಕಿಳಿದಿಲ್ಲ. ಸರಿಸುಮಾರು ನಾಲ್ಕು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದ ರಾಂಚಿ ಬಾಯ್ ಇದೀಗ ದಿಢೀರ್ ಆಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಂಗ್ಲಾದೇಶದೊಂದಿಗಿನ ಟೆಸ್ಟ್ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ವೆಸ್ಟ್ ಇಂಡೀಸ್ ಸರಣಿ ಆರಂಭಗೊಳ್ಳಲಿದೆ. ಅದಕ್ಕಾಗಿ ತಂಡ ಸೇರಿಕೊಳ್ಳುವ ಉದ್ದೇಶದಿಂದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂ.ಎಸ್. ಧೋನಿ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಜೆಎಸ್ಸಿಎ ಮೈದಾನದಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ದೊರೆತಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.
-
.@msdhoni’s first net session after a long long break.
— MS Dhoni Fans Official (@msdfansofficial) November 15, 2019 " class="align-text-top noRightClick twitterSection" data="
Retweet if you can’t wait to see him back!😇😍#Dhoni #MSDhoni #Ranchi #JSCA pic.twitter.com/2X6kbQNYMG
">.@msdhoni’s first net session after a long long break.
— MS Dhoni Fans Official (@msdfansofficial) November 15, 2019
Retweet if you can’t wait to see him back!😇😍#Dhoni #MSDhoni #Ranchi #JSCA pic.twitter.com/2X6kbQNYMG.@msdhoni’s first net session after a long long break.
— MS Dhoni Fans Official (@msdfansofficial) November 15, 2019
Retweet if you can’t wait to see him back!😇😍#Dhoni #MSDhoni #Ranchi #JSCA pic.twitter.com/2X6kbQNYMG
2019ರ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೆಮಿಸ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಆಗಸ್ಟ್ ತಿಂಗಳಲ್ಲಿ ಜಮ್ಮುಕಾಶ್ಮೀರದ ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಹಿ ತದನಂತರ ತಂಡದಿಂದ ಹೊರಗುಳಿದಿದ್ದರು.
ಈಗಾಗಲೇ ಧೋನಿ ಸ್ಥಾನ ತುಂಬಲು ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ರೇಸ್‌ನಲ್ಲಿದ್ದು, ಒಂದ್ವೇಳೆ ಧೋನಿ ವಿಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಮೈದಾನಕ್ಕಿಳಿದು ತಮ್ಮ ವಿದಾಯದ ಪಂದ್ಯ ಆಡಿದ್ರೂ ಅಚ್ಚರಿಯಿಲ್ಲ. ಆದರೆ 2020ರಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ಸರಣಿಗಾಗಿ ಅನುಭವಿ ಆಟಗಾರರ ಅವಶ್ಯಕತೆ ಇದೆ ಎಂಬ ಉದ್ದೇಶದಿಂದ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.