ETV Bharat / sports

ಧೋನಿ ಸೀಮಿತ ಓವರ್​ಗಳಲ್ಲೇ ಅತ್ಯುತ್ತಮ ನಾಯಕ: ಇಂಗ್ಲೆಂಡ್​ ಮಾಜಿ ಕ್ಯಾಪ್ಟನ್​​​​​

author img

By

Published : Oct 9, 2019, 9:38 PM IST

ತಂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವ ವೇಳೆ ತೆಗೆದುಕೊಳ್ಳುವ ನಿರ್ಧಾರ, ಕೀಪಿಂಗ್​ ಜೊತೆಗೆ ಯುವ ಬೌಲರ್​ಗಳಿಗೆ ಸಲಹೆ ನೀಡುತ್ತಾ ತಂಡಕ್ಕೆ ಗೆಲುವು ತಂದುಕೊಡುವುದರಲ್ಲಿ ಧೋನಿ ನಿಸ್ಸೀಮರಾಗಿದ್ದರು ಎಂದು ವಾನ್​ ಹೇಳಿದ್ದಾರೆ.

MS Dhoni

ಮುಂಬೈ: ಭಾರತ ಕ್ರಿಕೆಟ್​ಗೆ ದಶಕಗಳ ಕಾಲ ನಾಯಕನಾಗಿದ್ದ ಮಹೇಂದ್ರ ಸಿಂಗ್​ ಧೋನಿ ತನ್ನ ಚಾಣಕ್ಷ ನಾಯಕತ್ವದಿಂದ ಭಾರತ ತಂಡವನ್ನು ಚಾಂಪಿಯನ್​ ತಂಡವಾಗಿ ಕಟ್ಟಿದ್ದಾರೆ. ಅವರೊಬ್ಬ ವೈಟ್ ​ಬಾಲ್​ ಕ್ರಿಕೆಟ್​ನ ಯಶಸ್ವಿ ನಾಯಕ ಎಂದು ಇಂಗ್ಲೆಂಡ್​ ಮಾಜಿ ನಾಯಕ ಮೈಕಲ್​ ವಾನ್​ ಅಭಿಪ್ರಾಯಪಟ್ಟಿದ್ದಾರೆ.

ಧೋನಿ ಒಬ್ಬ ಆಟಗಾರನಾಗಿ ಹೆಸರು ಮಾಡಿರುವುದಕ್ಕಿಂದ ಹೆಚ್ಚಾಗಿ ನಾಯಕನಾಗಿ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ತಂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವ ವೇಳೆ ತೆಗೆದುಕೊಳ್ಳುವ ನಿರ್ಧಾರ, ಕೀಪಿಂಗ್​ ಜೊತೆಗೆ ಯುವ ಬೌಲರ್​ಗಳಿಗೆ ಸಲಹೆ ನೀಡುತ್ತಾ ತಂಡಕ್ಕೆ ಗೆಲುವಿನ ಗೆಲುವು ತಂದುಕೊಡುವುದರಲ್ಲಿ ಅವರು ನಿಸ್ಸೀಮರಾಗಿದ್ದರು ಎಂದು ವಾನ್​ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲಾ ಮಾದರಿಯಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಆದರೆ ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಮಾತ್ರ ಅತ್ಯುತ್ತಮ ನಾಯಕ ಯಾರೆಂದರೆ ಯೋಚನೆ ಮಾಡದೇ ಧೋನಿ ಎಂದು ಹೇಳಬಹುದು. ವಿಕೆಟ್​ ಹಿಂದೆ ನಿಂತು ಎದುರಾಳಿ ಆಟಗಾರರ ಸೂಕ್ಷ್ಮತೆಯನ್ನು ಗಮನಿಸುವುದು, ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಧೋನಿ ಬಿಟ್ಟರೆ ಮತ್ಯಾರಿಲ್ಲ. ಇನ್ನು ಬ್ಯಾಟಿಂಗ್​ನಲ್ಲೂ ಧೋನಿ ಸಾಧನೆ ಉತ್ತಮವಾಗಿದೆ ಎಂದು ವಾನ್​ ಹೇಳಿದ್ದಾರೆ.

ಇನ್ನು ಯುವ ನಾಯಕ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಾನ್, ಕೊಹ್ಲಿ ಒಬ್ಬ ಬ್ಯಾಟ್ಸ್​ಮನ್​ ಆಗಿರುವ ಜೊತೆಗೆ ತಂಡವನ್ನು ಬಲಿಷ್ಠವನ್ನಾಗಿಸಿ ಮುನ್ನಡೆಸುತ್ತಿದ್ದಾರೆ. ವೈಯಕ್ತಿಕವಾಗಿ ಕೊಹ್ಲಿ ನಾಯಕನಾಗಿ ಹೋಗುತ್ತಿರುವ ದಾರಿ ನನಗೆ ತುಂಬಾ ಇಷ್ಟವಾಗಿದ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.