ETV Bharat / sports

ನಿದ್ರೆಯ ವೇಳೆಯೂ ಧೋನಿಗೆ ಪಬ್​ಜಿ ಧ್ಯಾನ..! - ಸಿಎಸ್​ಕೆ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಇತ್ತೀಚಿಗೆ ಪಬ್​ಜಿ ಗೇಮ್​ನಲ್ಲಿ ತಲ್ಲೀನರಾಗಿರುತ್ತಾರೆ ಎಂದು ಧೋನಿ ಪತ್ನಿ ಸಾಕ್ಷಿ ಬಹಿರಂಗಪಡಿಸಿದ್ದಾರೆ.

MS Dhoni
ಮಹೇಂದ್ರ ಸಿಂಗ್​ ಧೋನಿ
author img

By

Published : Jun 1, 2020, 7:36 AM IST

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಇತ್ತೀಚಿನ ದಿನಗಳಲ್ಲಿ ಪಬ್​​ಜಿ ಗೇಮ್​ ಮೊಬೈಲ್​ ಗೇಮ್​ ಅನ್ನು ಹೆಚ್ಚಾಗಿ ಆಡುತ್ತಿದ್ದಾರೆ. ನಿದ್ರೆಯ ವೇಳೆಯೂ ಕೂಡಾ ಪಬ್​ಜಿ ಬಗ್ಗೆ ಮಾತನಾಡುತ್ತಾರೆ ಎಂದು ಧೋನಿ ಪತ್ನಿ ಸಾಕ್ಷಿ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ನ ಅಧಿಕೃತ ಇನ್ಸ್​ಟಾಗ್ರಾಮ್​ ಖಾತೆಯಲ್ಲಿ ನಡೆದ ಸಂವಾದದಲ್ಲಿ ಇತ್ತೀಚಿನ ದಿನಗಳಲ್ಲಿ ಧೋನಿ ಏನು ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಸಾಕ್ಷಿ ಈ ರೀತಿಯಾಗಿ ಉತ್ತರ ನೀಡಿದ್ದಾರೆ. ಇದರ ಜೊತೆಗೆ ಧೋನಿಗೆ ಬೈಕ್​ಗಳ ಬಗ್ಗೆ ಇರುವ ಅಪಾರ ಪ್ರೀತಿಯ ಬಗ್ಗೆಯೂ ಕೂಡಾ ಉಲ್ಲೇಖಿಸಿದ್ದಾರೆ.

ಧೋನಿಯ ಪಬ್​ಜಿ ಪ್ರೀತಿಯ ಬಗ್ಗೆ ಮಾತನಾಡಿದ ಸಾಕ್ಷಿ, ಧೋನಿಯ ಬಳಿ 9 ಬೈಕ್​ಗಳಿದ್ದು, ಬೈಕ್​ಗಳ ಭಾಗಗಳನ್ನು ಜೋಡಿಸುವುದೂ ಆಗಾಗ ನಡೆಯುತ್ತದೆ ಎಂದಿದ್ದಾರೆ.

38 ವರ್ಷದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದು ಈಗಷ್ಟೇ ಸ್ವಲ್ಪ ಸಮಯವನ್ನು ಆನಂದಿಸುತ್ತಿದ್ದು, ಪಬ್​ಜಿಯ ಬಗ್ಗೆ ಆಸಕ್ತರಾಗಿದ್ದಾರೆ ಎಂದು ಸಾಕ್ಷಿ ಬಹಿರಂಗಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.