ದುಬೈ: ಚೆನ್ನೈ ಸೂಪರ್ ತಂಡದ ನಾಯಕ ಎಂಎಸ್ ಧೋನಿ ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮತ್ತೊಂದು ಮಹತ್ವದ ಮೈಲುಗಲ್ಲನ್ನು ತಲುಪಿದ್ದಾರೆ. ಐಪಿಎಲ್ನಲ್ಲಿ 100 ಕ್ಯಾಚ್ ಪಡೆದ ಎರಡನೇ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ಹಾಗೂ ನಾಯಕನಾಗಿರುವ ದಿನೇಶ್ ಕಾರ್ತಿಕ್ ಐಪಿಎಲ್ನಲ್ಲಿ 100 ಕ್ಯಾಚ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದರು.
-
MS Dhoni adds another feather to his cap.
— IndianPremierLeague (@IPL) October 4, 2020 " class="align-text-top noRightClick twitterSection" data="
Gets to 100 catches as a wicketkeeper in the IPL 👏👏#Dream11IPL pic.twitter.com/FWNd6Y7FvP
">MS Dhoni adds another feather to his cap.
— IndianPremierLeague (@IPL) October 4, 2020
Gets to 100 catches as a wicketkeeper in the IPL 👏👏#Dream11IPL pic.twitter.com/FWNd6Y7FvPMS Dhoni adds another feather to his cap.
— IndianPremierLeague (@IPL) October 4, 2020
Gets to 100 catches as a wicketkeeper in the IPL 👏👏#Dream11IPL pic.twitter.com/FWNd6Y7FvP
ಭಾನುವಾರದ ಪಂದ್ಯದಲ್ಲಿ ಧೋನಿ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ವಿಕೆಟ್ ಪಡೆಯುವ ಮೂಲಕ ಕ್ಯಾಚ್ನಲ್ಲಿ ಶತಕ ಬಾರಿಸಿದರು. ಕಾರ್ತಿಕ್ 103 ಕ್ಯಾಚ್ ಪಡೆದು ಹೆಚ್ಚು ಕ್ಯಾಚ್ ಪಡೆದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಆದರೆ ಐಪಿಎಲ್ನಲ್ಲಿ ಹೆಚ್ಚು ಬಲಿ ಪಡೆದ ದಾಖಲೆ ಧೋನಿ ಹೆಸರಿನಲ್ಲಿಯೇ ಇದೆ. ಧೋನಿ ಐಪಿಎಲ್ನಲ್ಲಿ 139 ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗಟ್ಟಿದ್ದರೆ, ಕಾರ್ತಿಕ್ 133 ಬ್ಯಾಟ್ಸ್ಮನ್ಗಳ ಬಲಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.