ETV Bharat / sports

ವೃತ್ತಿ ಜೀವನದ 3ನೇ ಟೆಸ್ಟ್​ ಪಂದ್ಯವಾಡುತ್ತಿರುವಾಗಲೇ ನಿವೃತ್ತಿ ಘೋಷಿಸಿದ ಅಫ್ಘಾನ್​ ಕ್ರಿಕೆಟಿಗ

ಟೆಸ್ಟ್​ ಕ್ರಿಕೆಟ್​ಗೆ ಮಾನ್ಯತೆ ಗಿಟ್ಟಿಸಿಕೊಂಡು ಕೇವಲ 3ನೇ ಟೆಸ್ಟ್​ ಪಂದ್ಯವಾಡುತ್ತಿರುವ ಅಫ್ಘಾನಿಸ್ತಾನ ತಂಡದ ಆಲ್​ರೌಂಡರ್​ ಮೊಹಮ್ಮದ್​ ನಬಿ ದಿಢೀರ್​ ವಿದಾಯ ಘೋಷಿಸಿದ್ದಾರೆ.

Mohammad Nabi
author img

By

Published : Sep 7, 2019, 8:28 PM IST

ಚಿತ್ತಗಾಂಗ್​: ಅಫ್ಘಾನಿಸ್ತಾನದ ಆಲ್​ರೌಂಡರ್​ ಮೊಹಮ್ಮದ್​ ನಬಿ ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ.

ವೃತ್ತಿ ಜೀವನದ 3ನೇ ಟೆಸ್ಟ್​ ಪಂದ್ಯವಾಡುತ್ತಿರುವ ನಬಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ನಂತರ ಟೆಸ್ಟ್​ ಕ್ರಿಕೆಟ್​​ಗೆ ವಿದಾಯ ಘೋಷಿಸುವುದಾಗಿ ಹೇಳಿಕೊಂಡಿದ್ದಾರೆ.

ನಾನು ಈಗಾಗಲೇ 18 ವರ್ಷಕ್ಕೂ ಹೆಚ್ಚು ಸಮಯ ಅಫ್ಘಾನಿಸ್ತಾನ ತಂಡವನ್ನು ಪ್ರತಿನಿಧಿಸಿದ್ದೇನೆ. ಅಫ್ಘಾನಿಸ್ತಾನದ ಪರ ಟೆಸ್ಟ್​ ಆಡಬೇಕೆಂಬ ನನ್ನ ಕನಸು ನನಸಾಗಿದೆ. ನಮ್ಮ ತಂಡ ವರ್ಷಕ್ಕೆ 2 ಅಥವಾ 3 ಪಂದ್ಯಗಳನ್ನಾಡಲಿದೆ. ನನ್ನ ಜಾಗದಲ್ಲಿ ಯುವ ಆಟಗಾರರು ಆಡಿದರೆ ಉತ್ತಮ ಎಂದು ನನಗನ್ನಿಸುತ್ತಿದೆ. ಯುವಕರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಘೋಷಿಸುತ್ತಿರುವುದಾಗಿ ಎಸಿಬಿಗೆ ತಿಳಿಸಿದ್ದಾರೆ.

ಇನ್ನು ಏಕದಿನ ಹಾಗೂ ಟಿ-20 ಕ್ರಿಕೆಟ್​ನಲ್ಲಿ ಹಾಗೂ ಐಪಿಎಲ್​, ಬಿಗ್​ಬ್ಯಾಶ್​ ಲೀಗ್​ಗಳಲ್ಲಿ ತಮ್ಮ ಆಟ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ. ನಬಿ ಅಫ್ಘಾನ್ ​ಪರ 3 ಟೆಸ್ಟ್​, 121 ಏಕದಿನ ಪಂದ್ಯ ಹಾಗೂ 68 ಟಿ-20 ಪಂದ್ಯಗಳನ್ನಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.