ಮುಂಬೈ: ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಎಷ್ಟೇ ರನ್ಗಳಿಸಿದ್ದರೂ, ನಾಯಕತ್ವದಲ್ಲಿ ಮಾಡುವ ಕೆಲವು ದುಡುಕು ನಿರ್ಧಾರಗಳ ಬಗ್ಗೆ, ಕೆಲ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಆ ಸಾಲಿಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕೂಡ ಸೇರಿಕೊಂಡಿದ್ದಾರೆ.
ಕೊಹ್ಲಿ ತಂಡದ ಆಟಗಾರರ ಮೇಲೆ ಹೆಚ್ಚು ವಿಶ್ವಾಸ ಹೊಂದಿಲ್ಲ, ಅವರು ಆಟಗಾರರನ್ನ ಬ್ಯಾಕ್ಅಪ್ ಮಾಡುವುದಿಲ್ಲ, ತಂಡದ ಆಯ್ಕೆಯಲ್ಲಿ ಕೊಹ್ಲಿ, ಸಾಕಷ್ಟು ಪ್ರಯೋಗ ಮಾಡುತ್ತಾರೆ. ಈ ಹಿಂದೆ ಕೊಹ್ಲಿ ಸಾಕಷ್ಟು ಕಾಂಬಿನೇಷನ್ ಪ್ರಯೋಗ ಮಾಡಿದ್ದಾರೆ. ಸಾಮರ್ಥ್ಯ ಇಲ್ಲದ ಆಟಗಾರರನ್ನೂ ಕಳೆದ ವಿಶ್ವಕಪ್ಗೆ ಆಯ್ಕೆ ಮಾಡಿಕೊಂಡಿದ್ದರು. ಕೊಹ್ಲಿ ತಂಡದ ಆಟಗಾರರನ್ನ ಬೆಂಬಲಿಸಬೇಕು. ಒಂದು ವೇಳೆ, ಆಟಗಾರ ಫಾರ್ಮ್ ಕಳೆದುಕೊಂಡಿದ್ರೆ, ಆತನಿಗೆ ಸಪೋರ್ಟ್ ಮಾಡಬೇಕು. ಆಗಲೇ ಕೊಹ್ಲಿ, ಉತ್ತಮ ನಾಯಕನಾಗಲು ಸಾಧ್ಯ ಎಂದು ಕೈಫ್ ಹೇಳಿದ್ದಾರೆ.
ವಿಕೆಟ್ ಕೀಪರ್ ಆಯ್ಕೆಯಲ್ಲೂ ಕೊಹ್ಲಿ ಸಾಕಷ್ಟು ಆಟಗಾರರನ್ನು ಬದಲಾಯಿಸಿದ್ದಾರೆ. ಧೋನಿ ಜಾಗಕ್ಕೆ ಎಂದು ಒಬ್ಬ ಪರ್ಮನೆಂಟ್ ವಿಕೆಟ್ ಕೀಪರ್ ಅಗತ್ಯವಿದೆ. ಕೆಎಲ್ ರಾಹುಲ್ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದಾರೆ. ಆದರೆ, ಅವರನ್ನ ಪರ್ಮನೆಂಟ್ ವಿಕೆಟ್ ಕೀಪರ್ ಆಗಿ ನೋಡಲು ಸಾಧ್ಯವಿಲ್ಲ. ನೀವು ಧೋನಿ ಬಿಟ್ಟು ಪಂತ್ಗೆ ಬೆಂಬಲ ನೀಡುವುದಾದರೆ, ಕೊಹ್ಲಿ ಪಂತ್ ಹಿಂದೆ ನಿಲ್ಲಬೇಕು. ಆತ ತಂಡದ ವಾಟರ್ ಬಾಯ್ ಅಲ್ಲ ಎಂದು ಹೆಲೋ ಆ್ಯಪ್ಗೆ ನೀಡಿದ ಸಂದರ್ಶನದಲ್ಲಿ ಕೈಫ್ ಹೇಳಿದ್ದಾರೆ.
ಇನ್ನು 2019 ವಿಶ್ವಕಪ್ನಲ್ಲಿ ಅನುಭವಿ ಅಂಬಾಟಿ ರಾಯುಡು ಅವರನ್ನು ತಂಡದಿಂದ ಕೈಬಿಟ್ಟು ವಿಜಯ್ ಶಂಕರ್ರಿಗೆ ಅವಕಾಶಕೊಟ್ಟಿದ್ದರು. ಇನ್ನು ಫೈನಲ್ ಪಂದ್ಯದಲ್ಲೂ ಧೋನಿಯನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿದಾಗಲೂ ಕೂಡ ಕೊಹ್ಲಿ ನಾಯಕತ್ವನ್ನು ಪ್ರಶ್ನಿಸಲಾಗಿತ್ತು.