ETV Bharat / sports

ಮೊಹಮ್ಮದ್​ ಅಮೀರ್​ ಯೂ ಟರ್ನ್​: ಟಿ20 ಸರಣಿಗಾಗಿ ಇಂಗ್ಲೆಂಡ್​ಗೆ ಪಯಣಿಸಲಿರುವ ಪಾಕ್​ ಬೌಲರ್​ - ಇಂಗ್ಲೆಂಡ್​ ಪಾಕಿಸ್ತಾನ

ಟೀಮ್​ ಮ್ಯಾನೇಜ್​ಮೆಂಟ್​ ಕೋರಿಕೆಯ ಮೇರೆಗೆ ಮೊಹಮ್ಮದ್​ ಅಮೀರ್​ ಜೊತೆಗೆ ಮೊಹಮ್ಮದ್​ ಇಮ್ರಾನ್​ರನ್ನು ಇಂಗ್ಲೆಂಡ್​ಗೆ ಕಳುಹಿಸಲು ಒಪ್ಪಿಗೆ ಸೂಚಿಸಿದೆ.

ಮೊಹಮ್ಮದ್​ ಅಮೀರ್
ಮೊಹಮ್ಮದ್​ ಅಮೀರ್
author img

By

Published : Jul 20, 2020, 7:43 PM IST

Updated : Jul 20, 2020, 7:51 PM IST

ಲಾಹೋರ್​: ಕೌಟುಂಬಿಕ ಕಾರಣ ನೀಡಿ ಇಂಗ್ಲೆಂಡ್​ ವಿರುದ್ಧದ ಸರಣಿಯಿಂದ ಹಿಂದೆ ಸರಿದಿದ್ದ ವೇಗಿ ಮೊಹಮ್ಮದ್​ ಅಮೀರ್​ ಮತ್ತೆ ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿದ್ದಾರೆ. ಹ್ಯಾರೀಸ್​ ಸೊಹೈಲ್​​ಬದಲಿಗೆ ಅಮೀರ್ ಆಯ್ಕೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಟೀಮ್​ ಮ್ಯಾನೇಜ್​ಮೆಂಟ್​ ಕೋರಿಕೆಯ ಮೇರೆಗೆ ಮೊಹಮ್ಮದ್​ ಅಮೀರ್​ ಜೊತೆಗೆ ಮೊಹಮ್ಮದ್​ ಇಮ್ರಾನ್​ರನ್ನು ಇಂಗ್ಲೆಂಡ್​ಗೆ ಕಳುಹಿಸಲು ಒಪ್ಪಿಗೆ ಸೂಚಿಸಿದೆ.

ಪ್ರಸ್ತುತ ಪ್ರಕ್ತಿಯೆಯ ಭಾಗವಾಗಿ ಅಮೀರ್​ ಮತ್ತು ಇಮ್ರಾನ್​ ಇಬ್ಬರು ಸೋಮವಾರ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದಾರೆ. ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲು 2 ಪರೀಕ್ಷೆಗಳಲ್ಲಿ ನೆಗೆಟಿವ್ ಫಲಿತಾಂಶದ ಅಗತ್ಯವಿದೆ. ಮೊದಲ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ ಅವರಿಬ್ಬರನ್ನು ಬಯೋ ಸೆಕ್ಯೂರ್​​ ತಾಣಕ್ಕೆ ಸ್ಥಳಾಂತರಿಸಲಾಗುತ್ತದೆ. ಲಾಹೋರ್​ನಲ್ಲಿ ಬುಧವಾರ ನಡೆಸುವ ಎರಡನೇ ಟೆಸ್ಟ್​ನಲ್ಲಿ ನೆಗೆಟಿವ್​ ಫಲಿತಾಂಶ ಬಂದರೆ ಅವರು ಈ ವಾರಾಂತ್ಯದಲ್ಲಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

ಅಮೀರ್ ತಂಡಕ್ಕೆ ಸೇರಿದ ಕೂಡಲೇ ಮೀಸಲು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರೋಹೈಲ್ ನಜೀರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗುವುದು ಎಂದು ಪಿಸಿಬಿ ಹೇಳಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ ಮೂರು ಟೆಸ್ಟ್ ಮತ್ತು ಮೂರು ಟಿ -20 ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಆಗಸ್ಟ್ 5 ರಿಂದ ಪ್ರಾರಂಭವಾಗಲಿದೆ.

Last Updated : Jul 20, 2020, 7:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.