ETV Bharat / sports

ಐಪಿಎಲ್​ ವಿಶ್ವದ ಎಲ್ಲಾ ಟಿ-20 ಟೂರ್ನಮೆಂಟ್​ಗಳಿಗೆ ಕಿರೀಟವಿದ್ದಂತೆ: ಮಿಚೆಲ್​ ಸ್ಯಾಂಟ್ನರ್​ - ಸುರೇಶ್​ ರೈನಾ

ಸ್ಯಾಂಟ್ನರ್​ ಅವರನ್ನು 2018ರ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಖರೀದಿಸಿತ್ತು. ಆದರೆ ಗಾಯದ ಸಮಸ್ಯೆಯಿಂದ ಅವರು ಆ ವರ್ಷ ಆಡಲಿಲ್ಲ. 2019ರಲ್ಲಿ ಕೆಲವು ಪಂದ್ಯಗಳನ್ನು ಆಡಿದರು. ಅದರಲ್ಲೂ ರಾಜಸ್ಥಾನ ರಾಯಲ್ಸ್​ ವಿರುದ್ಧ ಕೊನೆಯ ಬಾಲ್​ನಲ್ಲಿ ಸಿಕ್ಸರ್​ ಬಾರಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

ಮಿಚೆಲ್​ ಸ್ಯಾಂಟ್ನರ್​
ಮಿಚೆಲ್​ ಸ್ಯಾಂಟ್ನರ್​
author img

By

Published : Jul 20, 2020, 5:10 PM IST

ನವದೆಹಲಿ​: ಇಂಡಿಯನ್​ ಪ್ರೀಮಿಯರ್​ ಲೀಗ್​ ವಿಶ್ವದ ಎಲ್ಲಾ ಟಿ-20 ಟೂರ್ನಮೆಂಟ್​ಗಳಿಗೆ ಶಿಖರವಿದ್ದಂತೆ ಎಂದು ನ್ಯೂಜಿಲ್ಯಾಂಡ್​ ಸ್ಪಿನ್ನರ್​ ಮಿಚೆಲ್​ ಸ್ಯಾಂಟ್ನರ್​ ಅಭಿಪ್ರಾಯಪಟ್ಟಿದ್ದಾರೆ.

ಸ್ಯಾಂಟ್ನರ್​ ಅವರನ್ನು 2018ರ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಖರೀದಿಸಿತ್ತು. ಆದರೆ ಗಾಯದ ಸಮಸ್ಯೆಯಿಂದ ಅವರು ಆ ವರ್ಷ ಆಡಲಿಲ್ಲ. 2019ರಲ್ಲಿ ಕೆಲವು ಪಂದ್ಯಗಳನ್ನು ಆಡಿದರು. ಅದರಲ್ಲೂ ರಾಜಸ್ಥಾನ ರಾಯಲ್ಸ್​ ವಿರುದ್ಧ ಕೊನೆಯ ಬಾಲ್​ನಲ್ಲಿ ಸಿಕ್ಸರ್​ ಬಾರಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

ನನ್ನ ಪ್ರಕಾರ ಐಪಿಲ್ ವಿಶ್ವದ ಎಲ್ಲಾ ಟಿ-20 ಲೀಗ್​ಗಳ ಶಿಖರವೆನಿಸಿದೆ. 2008ರಲ್ಲಿ ಚೆನ್ನೈ ತಂಡಕ್ಕೆ ಆಯ್ಕೆಯಾಗಿದ್ದಾಗ ನಾನು ಬಹಳ ಉತ್ಸುಕನಾಗಿದ್ದೆ. ಚೆನ್ನೈ ತಂಡದಲ್ಲಿ ವಿಶ್ವದರ್ಜೆಯ ಸ್ಪಿನ್ನರ್‌ಗಳಿದ್ದರು. ನಾನು ಹೆಚ್ಚು ವೀಕ್ಷಣೆ ಮಾಡಿರುವಂತಹ ಹರ್ಭಜನ್ ಸಿಂಗ್ ಸೇರಿದಂತೆ ಇಮ್ರಾನ್ ತಾಹಿರ್, ರವೀಂದ್ರ ಜಡೇಜಾರಂತಹ ಮಹಾನ್​ ಆಟಗಾರರ ಜೊತೆಗೆ ಬೌಲಿಂಗ್​ ವಿಭಾಗ ಸೇರಿದ್ದು ಅತ್ಯುತ್ತಮ ಅನುಭವ ಎಂದಿದ್ದಾರೆ.

2018ರಲ್ಲಿ ನಾನು ಗಾಯಗೊಂಡು ಆಡದಿದ್ದಕ್ಕೆ ತುಂಬಾ ಬೇಸರವಾಗಿತ್ತು. ಆದರೆ ಕಳೆದ ವರ್ಷ ನನಗೆ ಆಡುವ ಅವಕಾಶ ಸಿಕ್ಕಿತು. ಅದೊಂದು ಮರೆಯಲಾಗದ ಅನುಭವ ನೀಡಿದೆ. ಇದೊಂದು ನಂಬಲಸಾಧ್ಯವಾದ ಟೂರ್ನಮೆಂಟ್. ಹಾಗಾಗಿ ವಿಶ್ವದಲ್ಲಿ ನಡೆಯುತ್ತಿರುವ​ ಟಿ-20 ಕ್ರಿಕೆಟ್‌ ಲೀಗ್​ಗಳಲ್ಲಿ ಇದು ಅತ್ಯುತ್ತಮ ಲೀಗ್​ ಎಂದಿದ್ದಾರೆ.

ಎಂ.ಎಸ್.ಧೋನಿ ನಾಯಕತ್ವದಲ್ಲಿ ಟಿ-20 ಲೀಗ್​ನಲ್ಲಿ ಆಡಿದ್ದರಿಂದ ನನು ಸಾಕಷ್ಟು ಅನುಭವ ಪಡೆದುಕೊಂಡಿದ್ದೇನೆ. ಜೊತೆಗೆ ಸುರೇಶ್​ ರೈನಾ ಅವರಂತಹ ಆಟಗಾರರ ಜೊತೆಗೆ ಡ್ರೆಸ್ಸಿಂಗ್​ ರೂಮ್​ ಹಂಚಿಕೊಂಡಿದ್ದು ಅದ್ಭುತವಾಗಿತ್ತು ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.