ದುಬೈ: ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಹೊರಬಿದ್ದ ತಕ್ಷಣ ಗಂಭೀರ್, ಮಂಜ್ರೇಕರ್ ಸೇರಿದಂತೆ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿ ನಾಯಕತ್ವ ತ್ಯಜಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೋಚ್ ಸೈಮನ್ ಕ್ಯಾಟಿಚ್ ಮತ್ತು ತಂಡದ ಡೈರೆಕ್ಟರ್ ಮೈಕ್ ಹೆಸನ್ ಕೊಹ್ಲಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಆನ್ಲೈನ್ ಸಂವಾದದಲ್ಲಿ ಮಾತನಾಡಿರುವ ಆರ್‌ಸಿಬಿಯ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸ್ಸನ್, ತಂಡದ ನಾಯಕತ್ವ ದೃಷ್ಟಿಕೋನದ ವಿಚಾರದಲ್ಲಿ ಕೊಹ್ಲಿಯನ್ನು ಹೊಂದಿರುವುದಕ್ಕೆ ನಾವು ಅದೃಷ್ಟಶಾಲಿಗಳು. ಅವರು ಹೆಚ್ಚು ವೃತ್ತಿಪರರು ಮತ್ತು ತಂಡದ ಎಲ್ಲಾ ಆಟಗಾರರಿಂದ ತುಂಬಾ ಗೌರವಿಸಲ್ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕೊಹ್ಲಿ ಸಾಕಷ್ಟು ಸಮಯವನ್ನು ತಂಡದ ಜೊತೆಯಲ್ಲಿ ಕಳೆದಿದ್ದಾರೆ. ಅದರಲ್ಲೂ ಯುವ ಆಟಗಾರ ದೇವದತ್ ಪಡಿಕ್ಕಲ್ ಜೊತೆ ಸಾಕಷ್ಟು ಸಮಯ ಕಳೆದಿದ್ದು, ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಬಹಳಷ್ಟು ಜನರು ಈ ದೃಷ್ಟಿಕೋನದಲ್ಲಿ ನೋಡುವುದಿಲ್ಲ. ನಾವು ಸ್ಪರ್ಧೆಯಲ್ಲಿ ಕೊನೆಯವರೆಗೂ ಹೋರಾಡಿದ್ದೇವೆ. ಇದರ ಶ್ರೇಯವನ್ನು ಕೂಡ ಕೊಹ್ಲಿ ಪಡೆಯುತ್ತಾರೆ ಎಂದು ಹೆಸನ್ ಹೇಳಿದ್ದಾರೆ.
-
Post Match Press Conference: SRH v RCB: Simon Katich
— Royal Challengers Bangalore (@RCBTweets) November 7, 2020 " class="align-text-top noRightClick twitterSection" data="
Our Head Coach Simon Katich talks about RCB's exit, positives from the tournament and what's in store for the future.#PlayBold #IPL2020 #Dream11IPL #WeAreChallengers pic.twitter.com/zBW3XukNZ3
">Post Match Press Conference: SRH v RCB: Simon Katich
— Royal Challengers Bangalore (@RCBTweets) November 7, 2020
Our Head Coach Simon Katich talks about RCB's exit, positives from the tournament and what's in store for the future.#PlayBold #IPL2020 #Dream11IPL #WeAreChallengers pic.twitter.com/zBW3XukNZ3Post Match Press Conference: SRH v RCB: Simon Katich
— Royal Challengers Bangalore (@RCBTweets) November 7, 2020
Our Head Coach Simon Katich talks about RCB's exit, positives from the tournament and what's in store for the future.#PlayBold #IPL2020 #Dream11IPL #WeAreChallengers pic.twitter.com/zBW3XukNZ3
ಕ್ಯಾಟಿಚ್ ಮಾತನಾಡಿ, ಮೊದಲಾರ್ಧದಲ್ಲಿ ನಾವು ಉತ್ತಮ ಆರಂಭ ಪಡೆಯುತ್ತಿದ್ದೆವು. ಪಡಿಕ್ಕಲ್ ಹಾಗೂ ಫಿಂಚ್ ಉತ್ತಮ ಜೊತೆಯಾಟ ನೀಡುತ್ತಿದ್ದರು. ಆದರೆ ಪವರ್ ಪ್ಲೇ ನಂತರ ಕೊಹ್ಲಿ ಬ್ಯಾಟಿಂಗ್ ಇಳಿಯುತ್ತಿದ್ದರಿಂದ ಕೊಹ್ಲಿಗೆ ಅದು ಸವಾಲಿನ ಕೆಲಸವಾಗಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 52 ಎಸೆತಗಳಲ್ಲಿ 90 ರನ್ಗಳಿಸುವ ಮೂಲಕ ಅವರ ಕ್ಲಾಸ್ ಏನೆಂದು ತೋರಿಸಿಕೊಟ್ಟಿದ್ದರು ಎಂದಿದ್ದಾರೆ. ಅಲ್ಲದೆ ಯುವ ಆಟಗಾರರಾದ ಪಡಿಕ್ಕಲ್, ವಾಷಿಂಗ್ಟನ್ ಸುಂದರ್ ಹಾಗೂ ಸಿರಾಜ್ ಪ್ರದರ್ಶನದ ಈ ಆವೃತ್ತಿಯಲ್ಲಿ ಅತ್ಯುತ್ತಮವಾಗಿತ್ತು ಎಂದು ತಿಳಿಸಿದ್ದಾರೆ.
ಇನ್ನು ಈ ಆವೃತ್ತಿಯಲ್ಲಿ 11ರಿಂದ 12 ವಾರಗಳ ಕಾಲ ಆಟಗಾರರ ಜೊತೆ ಕಳೆದಿದ್ದೇವೆ, ಹಾಗಾಗಿ ನಾವು ಅವರ ಜ್ಞಾನದ ಬಗ್ಗೆ ಸಾಕಷ್ಟು ತಿಳಿದಿದ್ದೇವೆ. ಒಳ್ಳೆಯ ವಿಷಯಗಳನ್ನ ಅವರಲ್ಲಿರುವ ಸಾಕಷ್ಟು ಮಾಹಿತಿಗಳನ್ನ ಸಂಗ್ರಹಿಸಿದ್ದೇವೆ. ಈ ಆವೃತ್ತಿಯ ಬಗ್ಗೆ ಪರಾಮರ್ಶೆ ನಡೆಸಿ ಮುಂದಿನ ಆವೃತ್ತಿಯ ಬಗ್ಗೆ ನಂತರ ಚಿಂತಿಸುತ್ತೇವೆ ಎಂದು ಅವರಿಬ್ಬರು ಹೇಳಿದ್ದಾರೆ.