ಕೊಲಂಬೊ: ವಾಹನ ಚಲಾಯಿಸುವಾಗ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಕ್ಕಾಗಿ ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್ ಅವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲಂಬೊ ಉಪನಗರ ಪನದುರಾದಲ್ಲಿ ಮೆಂಡಿಸ್ 74 ವರ್ಷದ ಪಾದಚಾರಿಗೆ ವಾಹನ ಗುದ್ದಿ, ಆತನ ಸಾವಿಗೆ ಕಾರಣವಾಗಿದ್ದರು. ಹೀಗಾಗಿ ಬಂಧಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
25 ವರ್ಷದ ಬ್ಯಾಟ್ಸ್‌ಮನ್ ಮೆಂಡಿಸ್, 44 ಟೆಸ್ಟ್ ಮತ್ತು 76 ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ. ಲಾಕ್ ಡೌನ್ ಸಡಿಲಗೊಂಡ ಬಳಿಕ ಪುನಾರಂಭಗೊಂಡ ರಾಷ್ಟ್ರೀಯ ತಂಡದ ತರಬೇತಿಯಲ್ಲಿ ಮೆಂಡಿಸ್ ಇದ್ದರು.