ದುಬೈ: ರಬಾಡರ ಅದ್ಭುತ ಬೌಲಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೂಪರ್ ಓವರ್ನಲ್ಲಿ ಮಣಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ ತಂಡ 13ನೇ ಆವೃತ್ತಿಯ ಐಪಿಎಲ್ನಲ್ಲಿ ಶುಭಾರಂಭ ಮಾಡಿದೆ.
ಡೆಲ್ಲಿ ನೀಡಿದ 158 ರನ್ಗಳ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಿಗಧಿಕ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ಗಳಿಸಿ ಟೈ ಮಾಡಿಕೊಂಡಿತು. ಆದರೆ ರಬಾಡ ಎಸೆದ ಸೂಪರ್ ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು ಕೇವಲ 2 ರನ್ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ತಂಡ ಕೇವಲ 2 ಎಸೆತಗಳಲ್ಲಿ 3 ರನ್ಗಳಿಸಿ 13ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು.
ಮೊದಲು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ 53 ರನ್, ಪಂತ್ 31 ಹಾಗೂ ಶ್ರೇಯಸ್ ಅಯ್ಯರ್ 39 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ಗಳಿಸಿತ್ತು.
ಪಂಜಾಬ್ ತಂಡದ ಪರ ಮೊಹಮ್ಮದ್ ಶಮಿ 15 ರನ್ ನೀಡಿ 3 ವಿಕೆಟ್, ಶೆಲ್ಡಾನ್ ಕಾಟ್ರೆಲ್ 24 ರನ್ ನೀಡಿ 2 ವಿಕೆಟ್ ಪಡೆದರೆ ಇಂದೇ ಪದಾರ್ಪಣೆ ಮಾಡಿದ ರವಿ ಬಿಷ್ಣೋಯ್ 22 ರನ್ ನೀಡಿ ಒಂದು ವಿಕೆಟ್ ಪಡೆದರು
-
The Match Summary from Dubai.#Dream11IPL #DCvKXIP pic.twitter.com/OfLjeFVhGZ
— IndianPremierLeague (@IPL) September 20, 2020 " class="align-text-top noRightClick twitterSection" data="
">The Match Summary from Dubai.#Dream11IPL #DCvKXIP pic.twitter.com/OfLjeFVhGZ
— IndianPremierLeague (@IPL) September 20, 2020The Match Summary from Dubai.#Dream11IPL #DCvKXIP pic.twitter.com/OfLjeFVhGZ
— IndianPremierLeague (@IPL) September 20, 2020
158 ರನ್ಗಳ ಟಾರ್ಗೆಟ್ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ 7 ಓವರ್ಗಳಾಗುಷ್ಟರಲ್ಲಿ ನಾಯಕ ರಾಹುಲ್(21), ಕರುಣ್ ನಾಯರ್(1), ನಿಕೋಲಸ್ ಪೂರನ್(0) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(1) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.
ನಂತರ ಬಂದ ಸರ್ಫರಾಜ್ ಖಾನ್ ಆಟ 12 ರನ್ಗಳಿಗೆ ಸೀಮಿತವಾಯಿತು. ಈ ಹಂತದಲ್ಲಿ ಮಯಾಂಕ್ ಅಗರ್ವಾಲ್(89)ಜೊತೆಯಾದ ಕೆ. ಗೌತಮ್(20) 6ನೇ ವಿಕೆಟ್ಗೆ 46 ರನ್ಗಳ ಜೊತೆಯಾಟ ನಡೆಸಿದರು. ಗೌತಮ್ ಔಟಾಗುತ್ತಿದ್ದಂತೆ ಮಯಾಂಕ್ ಅಬ್ಬರದ ಬ್ಯಾಟಿಂಗ್ ಮುಂದಾದರು.
ಕೊನೆಯ 3 ಓವರ್ಳಲ್ಲಿ ಗೆಲುವಿಗೆ 42 ರನ್ಗಳ ಅಗತ್ಯವಿತ್ತು. ಮಯಾಂಕ್, ಮೋಹಿತ್ ಶರ್ಮಾ ಎಸೆದ 18 ಓವರ್ನಲ್ಲಿ ಓವರ್ನಲ್ಲಿ 17 ರನ್, ರಬಾಡ ಎಸೆದ 19 ನೇ ಓವರ್ನಲ್ಲಿ 12 ರನ್ ಚಚ್ಚಿದರು. ಕೊನೆಯ ಓವರ್ನಲ್ಲಿ 6 ಎಸೆತಕ್ಕೆ 13 ರನ್ಗಳ ಅಗತ್ಯವಿತ್ತು. ಸ್ಟೋಯ್ನಿಸ್ ಎಸೆದ ಮೊದಲ ಮೂರು ಎಸೆತಗಳಲ್ಲಿ ಒಂದು ಸಿಕ್ಸರ್, ಬೌಂಡರಿ ಹಾಗೂ 2 ರನ್ ಸಹಿತ 12 ರನ್ಗಳಿಸಿದರು. ನಾಲ್ಕನೇ ಎಸೆತ ಡಾಟ್ ಮಾಡಿದ ಅಗರ್ವಾಲ್ 5ನೇ ಎಸೆತದಲ್ಲಿ ಔಟ್ ಆದರು. 6ನೇ ಎಸೆತದಲ್ಲಿ ಜೋರ್ಡಾನ್ ಔಟಾಗುವುದರೊಂದಿಗೆ ಪಂದ್ಯ ಟೈ ಆಯಿತು.
ಮಯಾಂಕ್ ಅಗರ್ವಾಲ್ 60 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 89 ರನ್ಗಳಿಸಿದ್ದರು. ಆದರೆ ಅವರ ಬದಲು ಸೂಪರ್ ಓವರ್ಗೆ ಬಂದ ರಾಹುಲ್ 2 ಎಸೆತಗಳನ್ನೆದುರಿಸಿ 2 ರನ್ಗಳಿಸಿ ಔಟಾದರು. 3ನೇ ಎಸೆತದಲ್ಲಿ ಪೂರನ್ ಬೌಲ್ಡ್ ಆಗುವುದರೊಂದಿಗೆ ಪಂಜಾಬ್ ಗೆಲುವಿನ ಆಸೆ ಕಮರಿತು. ಪಂಜಾಬ್ ನೀಡಿದ 3 ರನ್ಗಳನ್ನು ಡೆಲ್ಲಿ 3 ಎಸೆತಗಳಲ್ಲಿ ತಲುಪಿ ಜಯ ಸಾಧಿಸಿತು.
ಅರ್ಧಶತಕ ಹಾಗೂ ಕೊನೆಯ ಓವರ್ನಲ್ಲಿ 2 ವಿಕೆಟ್ ಪಡೆದು ಟೈ ಆಗಲು ನರವಾಗಿದ್ದ ಮಾರ್ಕಸ್ ಸ್ಟೋಯ್ನಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.