ಪುಣೆ: ಮಯಾಂಕ್ ಶತಕ(108) ಹಾಗೂ ನಾಯಕ ಕೊಹ್ಲಿ ಅರ್ಧಶತಕದ ನೆರವಿನಿಂದ ದಕ್ಷಿಣ ಅಫ್ರಿಕಾ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಮೊದಲ ದಿನದಂತ್ಯಕ್ಕೆ ಭಾರತ ತಂಡ 3 ವಿಕೆಟ್ ಕಳೆದುಕೊಂಡು 273 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕೊಹ್ಲಿ ಪಡೆ ಆರಂಭದಲ್ಲೇ ರೋಹಿತ್ ಶರ್ಮಾ(14) ವಿಕೆಟ್ ಕಳೇದುಕೊಂಡು ಆಘಾತ ಅನುಭವಿಸಿತು. ಆದರೆ ಮಯಾಂಕ್ ಹಾಗೂ ಪೂಜಾರ (58) ಎರಡನೇ ವಿಕೆಟ್ ಜೊತೆಯಾಟದಲ್ಲಿ 148 ರನ್ ಸೇರಿಸಿ ಆಘಾತದಿಂದ ಮೇಲೆತ್ತಿದರು.
-
That will be Stumps on Day 1 in Pune. #TeamIndia 273/3. Kohli 63*, Rahane 18*. Join us for Day 2 tomorrow #INDvSA @Paytm pic.twitter.com/78HYVJAD2g
— BCCI (@BCCI) October 10, 2019 " class="align-text-top noRightClick twitterSection" data="
">That will be Stumps on Day 1 in Pune. #TeamIndia 273/3. Kohli 63*, Rahane 18*. Join us for Day 2 tomorrow #INDvSA @Paytm pic.twitter.com/78HYVJAD2g
— BCCI (@BCCI) October 10, 2019That will be Stumps on Day 1 in Pune. #TeamIndia 273/3. Kohli 63*, Rahane 18*. Join us for Day 2 tomorrow #INDvSA @Paytm pic.twitter.com/78HYVJAD2g
— BCCI (@BCCI) October 10, 2019
ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಈ ಜೋಡಿಯನ್ನು ರಬಾಡ ಬೇರ್ಪಡಿಸಿದರು. 112 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 58 ರನ್ಗಳಿಸಿ ಪುಜಾರ ಔಟಾದರೆ, ಅಗರ್ವಾಲ್ ಶತಕ ಪೂರ್ತಿಯಾಗುತ್ತಿದ್ದಂತೆ ರಬಾಡ ಬೌಲಿಂಗ್ನಲ್ಲೇ ವಿಕೆಟ್ ಒಪ್ಪಿಸಿದರು. ಅಗರ್ವಾಲ್ 195 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 16 ಬೌಂಡರಿ ಸಿಡಿಸಿದ್ದರು.
ನಾಯಕ ಕೊಹ್ಲಿ ಅರ್ಧಶತಕ ದಾಖಲಿಸಿದ್ದು ರಹಾನೆ ಜೊತೆ 75 ರನ್ ಸೇರಿಸಿದ್ದಾರೆ. ಕೊಹ್ಲಿ 63 ರನ್ ಹಾಗೂ ರಹಾನೆ 18 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಟೀಮ್ ಇಂಡಿಯಾ ಕಳೆದುಕೊಂಡಿರುವ 3 ವಿಕೆಟ್ಗಳು ವೇಗಿ ಕಗಿಸೋ ರಬಡಾ ಪಾಲಾದವು.