ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ ಕೊಹ್ಲಿ, ಸ್ಮಿತ್​ ಮೀರಿಸಿದ ರನ್​ ಮಷಿನ್​ಗೆ ಏಕದಿನ ತಂಡದಲ್ಲೂ ಚಾನ್ಸ್ ​ಕೊಟ್ಟ ಆಸೀಸ್​​​ - ಲಾಬುಶೇನ್ ಏಕದಿನ ತಂಡಕ್ಕೆ ಸೇರ್ಪಡೆ

ಮುಂದಿನ ವರ್ಷ ಜನವರಿ 14 ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ 14 ಆಟಗಾರರ ತಂಡ ಪ್ರಕಟಿಸಿದ್ದು, ಟೆಸ್ಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ಲಾಬುಶೇನ್​ ಸೀಮಿತ ಓವರ್​ಗಳ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ.

Marnus Labuschagne Called Up As Australia ODI

author img

By

Published : Dec 17, 2019, 1:01 PM IST

ಮೆಲ್ಬೋರ್ನ್​: ಪ್ರಸಕ್ತ ಸಾಲಿನಲ್ಲಿ ಟೆಸ್ಟ್​ ಕ್ರಿಕೆಟ್​ನ ಅತಿ ಹೆಚ್ಚು ರನ್​ಗಳಿಸಿರುವ​ ಮಾರ್ನಸ್​ ಲಾಬುಶೇನ್​ಗೆ ಏಕದಿನ ತಂಡದಲ್ಲೂ ಅವಕಾಶ ನೀಡಿದ್ದಾರೆ.

ಮುಂದಿನ ವರ್ಷ ಜನವರಿ 14 ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ 14 ಆಟಗಾರರ ತಂಡ ಪ್ರಕಟಿಸಿದ್ದು, ಟೆಸ್ಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ಲಾಬುಶೇನ್​ ಸೀಮಿತ ಓವರ್​ಗಳ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ. ಈ ವಿಚಾರವನ್ನು ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವರ್​ ಹೋನ್ಸ್​ ತಿಳಿಸಿದ್ದಾರೆ.

ಮುಂದಿನ ವರ್ಷ ಟಿ20 ವಿಶ್ವಕಪ್​ ಇರುವುದರಿಂದ ಈಗಿನಿಂದಲೇ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಅಲ್ಲದೆ 2023 ರ ವಿಶ್ವಕಪ್​ ದೃಷ್ಠಿಕೋನದಲ್ಲೂ ತಂಡವನ್ನು ಬಲಿಷ್ಠಗೊಳಿಸಲು ಮಾರ್ನಸ್​ ಲಾಬುಶೇನ್​ಗೆ ಅವಕಾಶ ನೀಡಲಾಗಿದೆ. ಅವರು ಕ್ವೀನ್ಸ್​ಲ್ಯಾಂಡ್​ ಪರ ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವುದರಿಂದ ಅವರ ಮೇಲೆ ಭರವಸೆ ಹೆಚ್ಚಾಗಿದೆ ಎಂದು ಹೋನ್ಸ್​ ಹೇಳಿದರು.

  • JUST IN: Australia's ODI squad to tour India next month #INDvAUS

    Aaron Finch (c)
    Sean Abbott
    Ashton Agar
    Alex Carey (vc)
    Pat Cummins (vc)
    Peter Handscomb
    Josh Hazlewood
    Marnus Labuschagne
    Kane Richardson
    Steven Smith
    Mitchell Starc
    Ashton Turner
    David Warner
    Adam Zampa

    — cricket.com.au (@cricketcomau) December 17, 2019 " class="align-text-top noRightClick twitterSection" data=" ">

ಮಾರ್ನಸ್​ ಲಾಬುಶೇನ್​ 2019 ರಲ್ಲಿ 10 ಟೆಸ್ಟ್​ ಪಂದ್ಯಗಳಲ್ಲಿ 15 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್​ ನಡೆಸಿರುವ ಮಾರ್ನಸ್ ಲಾಬುಶೇನ್ ಸಾವಿರ(1022) ರನ್​ ಗಡಿದಾಟಿದ ಮೊದಲ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಲ್ಲದೆ​ ಹಾಗೂ 2019ರಲ್ಲಿ ಅತಿ ಹೆಚ್ಚು ರನ್​ಗಳಿಸಿದ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಟೆಸ್ಟ್​ ಕ್ರಿಕೆಟ್​ ಕಿಂಗ್​ ಸ್ಟಿವ್​ ಸ್ಮಿತ್​ , ಕೊಹ್ಲಿ, ಜೋ ರೂಟ್​, ವಿಲಿಯಮ್ಸನ್ ​ಅವರೆನ್ನಲ್ಲಾ ಹಿಂದಿಕ್ಕಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.