ETV Bharat / sports

ಮರಿಝಾನ್ ಕಾಪ್​ ಆಲ್​ರೌಂಡರ್ ಆಟ : ಪಾಕ್ ಮಹಿಳೆಯರ ವಿರುದ್ಧ ಗೆದ್ದ ದ. ಆಫ್ರಿಕಾ

author img

By

Published : Jan 30, 2021, 3:14 PM IST

125 ರನ್​ಗಳ ಸುಲಭ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ19 ಓವರ್​ಗಳಲ್ಲಿ 2 ವಿಕೆಟ್ ಪಡೆದುಕೊಂಡು ಗುರಿ ತಲುಪಿತು. ತಾಜ್ಮಿನ್ ಬ್ರಿಟ್ಸ್​ ಅಜೇಯ 52 ರನ್​ಗಳಿಸಿದ್ರೆ, ಮರಿಝಾನ್ ಕಾಪ್ 28 ಹಾಗೂ ಲಿಜೆಲ್ಲಾ ಲೀ 22 ರನ್​ಗಳಿಸಿ ಗೆಲುವಿನ ರೂವಾರಿಗಳಾದರು..

ಪಾಕಿಸ್ತಾ ವುಮೆನ್ vs ದಕ್ಷಿಣ ಆಫ್ರಿಕಾ ವುಮೆನ್ ಟಿ20

ಡರ್ಬನ್ : ಪಾಕಿಸ್ತಾನ್ ವಿರುದ್ಧ ಏಕದಿನ ಸರಣಿಯನ್ನು 3-0ಯಲ್ಲಿ ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದ ದಕ್ಷಿಣ ಆಫ್ರಿಕಾ ವನಿತೆಯರ ತಂಡ, ಟಿ20 ಯಲ್ಲೂ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ.

ಡರ್ಬನ್​ನಲ್ಲಿ ಶುಕ್ರವಾರ ರಾತ್ರಿ(ಭಾರತೀಯ ಕಾಲಮಾನ) ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೇವಲ 128 ರನ್​ಗಳಿಗೆ ಕಟ್ಟಿ ಹಾಕಿತು. ಆಲ್​ರೌಂಡಟರ್ ಮರಿಝಾನ್ ಕಾಪ್​ ಕೇವಲ 24ರನ್​ ನೀಡಿ 3 ವಿಕೆಟ್ ಪಡೆದ್ರೆ, ಶಬ್ನಿಮ್​ ಇಸ್ಮಾಯಿಲ್ 2 ವಿಕೆಟ್ ಪಡೆದು ಮಿಂಚಿದರು.

ಪಾಕಿಸ್ತಾನ ಪರ ಆಯೇಷಾ ನಸೀಮ್​ 32, ಕೈನತ್​ ಇಮ್ತುಯಾಜ್ 24, ನಿಡಾ ದಾರ್ 22 ಹಾಗೂ ಮುನೀಬಾ ಅಲಿ 21 ರನ್​ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

125 ರನ್​ಗಳ ಸುಲಭ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ19 ಓವರ್​ಗಳಲ್ಲಿ 2 ವಿಕೆಟ್ ಪಡೆದುಕೊಂಡು ಗುರಿ ತಲುಪಿತು. ತಾಜ್ಮಿನ್ ಬ್ರಿಟ್ಸ್​ ಅಜೇಯ 52 ರನ್​ಗಳಿಸಿದ್ರೆ, ಮರಿಝಾನ್ ಕಾಪ್ 28 ಹಾಗೂ ಲಿಜೆಲ್ಲಾ ಲೀ 22 ರನ್​ಗಳಿಸಿ ಗೆಲುವಿನ ರೂವಾರಿಗಳಾದರು.

ಆಲ್​ರೌಂಡ್ ಪ್ರದರ್ಶನ ತೋರಿದ ಕಾಪ್ ಪಂದ್ಯ ಶ್ರೇಷ್ಠ ಪ್ರದರ್ಶನಕ್ಕೆ ಪಾತ್ರರಾದರು. ಎರಡು ತಂಡಗಳ ನಡುವಿನ 2ನೇ ಟಿ20 ಪಂದ್ಯ ಭಾನುವಾರ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.