ETV Bharat / sports

ಹೆಚ್ಚು ಪಂದ್ಯಗಳಲ್ಲಿ ಬೆಂಚ್ ಕಾಯ್ದ ವಿಶ್ವದಾಖಲೆ ಖಂಡಿತ ಮನೀಶ್ ಪಾಂಡೆ ಹೆಸರಿಗೆ : ದೊಡ್ಡ ಗಣೇಶ್ ಕಿಡಿ

author img

By

Published : Dec 2, 2020, 4:52 PM IST

ಮನೀಶ್ ಪಾಂಡೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ 5 ವರ್ಷಗಳಾಗಿದ್ದರೂ ಅವರು ಭಾರತ ತಂಡದ ಪರ ಆಡುವುದಕ್ಕೆ ಅವಕಾಶ ಸಿಕ್ಕಿರುವುದು ಮಾತ್ರ ಕೇವಲ 26 ಪಂದ್ಯ ಮಾತ್ರ. ಅದರಲ್ಲಿ ಬ್ಯಾಟಿಂಗ್ ಸಿಕ್ಕಿರುವುದು ಕೇವಲ 21 ಇನ್ನಿಂಗ್ಸ್​ಗಳಲ್ಲಿ ಮಾತ್ರ..

ಮನೀಶ್ ಪಾಂಡೆ
ಮನೀಶ್ ಪಾಂಡೆ

ಕ್ಯಾನ್ಬೆರಾ : ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಈಗಾಗಲೇ ಏಕದಿನ ಸರಣಿ ಕಳೆದುಕೊಂಡಿದೆ. ಇಂದು ನಡೆಯುತ್ತಿರುವ 3ನೇ ಪಂದ್ಯ ಔಪಚಾರಿಕವಾಗಿದ್ದು, ಕೇವಲ ಕ್ಲೀನ್​ ಸ್ವೀಪ್​ ಮುಖಭಂಗ ತಪ್ಪಿಸಿಕೊಳ್ಳಲು ಮಾತ್ರ ಆಡುತ್ತಿದೆ.

ಇಂದಿನ ಪಂದ್ಯದಲ್ಲಿ ಭಾರತ ತಂಡ ಕೆಲವು ಬದಲಾವಣೆ ಮಾಡಿಕೊಂಡಿದೆ. ಬೆಂಚ್​ ಕಾದಿರುವ ಆಟಗಾರರಿಗೆ ಅವಕಾಶ ನೀಡಿದೆ. ಆದರೆ, ಕನ್ನಡಿಗ ಮನೀಶ್​ ಪಾಂಡೆಗೆ ಮಾತ್ರ ಒಂದೂ ಅವಕಾಶ ನೀಡದಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ದೊಡ್ಡ ಗಣೇಶ್​ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • If you can’t give a game to Manish even in a dead rubber why have him in the fifteen, in the first place ? He’s played only 3 games in the last 2 years #DoddaMathu #AUSvIND

    — ದೊಡ್ಡ ಗಣೇಶ್ | Dodda Ganesh (@doddaganesha) December 2, 2020 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಗಣೇಶ್​, ಔಪಚಾರಿಕವಾಗಿರುವ ಪಂದ್ಯದಲ್ಲೂ ಮನೀಶ್ ಪಾಂಡೆಗೆ ಅವಕಾಶ ನೀಡದಿದ್ದರೆ, ಅವರು 15ರ ಬಳಗದಲ್ಲಿ ಇದ್ದು ಏನು ಪ್ರಯೋಜನ, ಕಳೆದ 2 ವರ್ಷಗಳಲ್ಲಿ ಆತ ಕೇವಲ 3 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, "ಮನೀಶ್​ ಪಾಂಡೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಿವೃತ್ತಿಯಾಗುವ ವೇಳೆಗೆ ಅತಿ ಹೆಚ್ಚು ಪಂದ್ಯಗಳಲ್ಲಿ ಬೆಂಚ್​ ಕಾಯ್ದ ಆಟಗಾರ ಎಂಬ ವಿಶ್ವದಾಖಲೆ ಬರೆಯಲಿದ್ದಾರೆ" ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೀಶ್ ಪಾಂಡೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ 5 ವರ್ಷಗಳಾಗಿದ್ದರೂ ಅವರು ಭಾರತ ತಂಡದ ಪರ ಆಡುವುದಕ್ಕೆ ಅವಕಾಶ ಸಿಕ್ಕಿರುವುದು ಮಾತ್ರ ಕೇವಲ 26 ಪಂದ್ಯ ಮಾತ್ರ. ಅದರಲ್ಲಿ ಬ್ಯಾಟಿಂಗ್ ಸಿಕ್ಕಿರುವುದು ಕೇವಲ 21 ಇನ್ನಿಂಗ್ಸ್​ಗಳಲ್ಲಿ ಮಾತ್ರ.

492 ರನ್​ ಗಳಿಸಿದ್ದು ಒಂದು ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದಾರೆ. ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಪೈಪೋಟಿ ಹೆಚ್ಚಿರುವ ಕಾರಣ ಅವರು 15ರ ತಂಡದಲ್ಲಿದ್ದರೂ 11ರ ಬಳಗದಲ್ಲಿ ಆಡುವ ಅವಕಾಶ ಸಿಗುತ್ತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.