ಬೊಕಾರೋ: ಮನೀಶ್ ಪಾಂಡೆ ಶತಕ ಹಾಗೂ ಶ್ರೇಯಸ್ ಗೋಪಾಲ್ ಅದ್ಭುತ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸರ್ವೀಸ್ ವಿರುದ್ಧ 80 ರನ್ಗಳ ಜಯ ದಾಖಲಿಸಿದೆ.
ಲೀಗ್ನ ತನ್ನ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ ನಾಯಕ ಮನೀಶ್ ಪಾಂಡೆ 54 ಎಸೆತಗಳಲ್ಲಿ 129 ರನ್ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ ಹಾಗೂ 12 ಬೌಂಡರಿ ಕೂಡಿತ್ತು. ದೇವದತ್ ಪಡಿಕ್ಕಲ್ 43 ಎಸೆತಗಳಲ್ಲಿ 4 ಸಿಕ್ಸರ್, 8 ಬೌಂಡರಿ ಸಹಿತ 75 ರನ್ಗಳಿಸಿ 250 ರನ್ಗಳ ಬೃಹತ್ ಮೊತ್ತಕ್ಕೆ ನೆರವಾದರು.
ಸರ್ವೀಸಸ್ ಪರ ವಿಕಾಶ್ ಯಾದವ್, ದ್ವಿವೇಶ್ ಪಥಾನಿಯಾ ಹಾಗೂ ಮೋಹಿತ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
251 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಸರ್ವೀಸಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ಗಳಿಸಷ್ಟೇ ಶಕ್ತವಾಗಿ 80 ರನ್ಗಳ ಸೋಲನುಭಿಸಿತು. ಆರಂಭಿಕ ಬ್ಯಾಟ್ಸ್ಮನ್ ರವಿ ಚವ್ಹಾಣ್ 54, ಅನ್ಶುಲ್ ಗುಪ್ತಾ 29, ರಜತ್ ಪಲಿವಾಲ್ 46 ರನ್ಗಳಿಸಿದರು.
ಕರ್ನಾಟಕ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಶ್ರೇಯಸ್ ಗೋಪಾಲ್ 5 ವಿಕೆಟ್ ಪಡೆದರೆ, ಕೆ ಗೌತಮ್ ಹಾಗೂ ವಿ ಕೌಶಿಕ್ ತಲಾ ಒಂದು ವಿಕೆಟ್ ಪಡೆದರು.