ETV Bharat / sports

ಮಿಂಚಿದ ಮಂಧಾನ, ರೋಡ್ರಿಗಸ್​... ಮಿಥಾಲಿ ಪಡೆಗೆ ಸರಣಿ ಗೆಲುವು - ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಭಾರತೀಯ ಮಹಿಳಾ ತಂಡ

ಮೊದಲ ಪಂದ್ಯವನ್ನು ಕೇವಲ ಒಂದು ರನ್​ನಿಂದ ಸೋತಿದ್ದ ಮಿಥಾಲಿ ರಾಜ್ ಪಡೆ ಎರಡನೇ ಪಂದ್ಯವನ್ನು 53 ರನ್ ಹಾಗೂ ಮೂರನೇ ಪಂದ್ಯವನ್ನು 6 ವಿಕೆಟ್​ಗಳಿಂದ ಗೆದ್ದು ಸರಣಿ ಗೆಲುವಿನ ಸಂಭ್ರಮ ಆಚರಿಸಿದೆ.

ಸರಣಿ ಗೆಲುವು
author img

By

Published : Nov 7, 2019, 9:37 AM IST

ಆ್ಯಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿ ಸರಣಿ ತನ್ನದಾಗಿಸಿಕೊಂಡಿದೆ.

ಮೊದಲ ಪಂದ್ಯವನ್ನು ಕೇವಲ ಒಂದು ರನ್​ನಿಂದ ಸೋತಿದ್ದ ಮಿಥಾಲಿ ರಾಜ್ ಪಡೆ ಎರಡನೇ ಪಂದ್ಯವನ್ನು 53 ರನ್ ಹಾಗೂ ಮೂರನೇ ಪಂದ್ಯವನ್ನು 6 ವಿಕೆಟ್​ಗಳಿಂದ ಗೆದ್ದು ಸರಣಿ ಗೆಲುವಿನ ಸಂಭ್ರಮ ಆಚರಿಸಿದೆ.

ಸರಣಿ ಗೆಲುವಿನಲ್ಲಿ ನಿರ್ಣಾಯಕವಾಗಿದ್ದ ಮೂರನೇ ಪಂದ್ಯದಲ್ಲಿ ಆತಿಥೇಯರು ನಿಗದಿತ 50 ಓವರ್​ನಲ್ಲಿ 194 ರನ್ ಗಳಿಸಲಷ್ಟೇ ಶಕ್ತರಾದರು. ನಾಯಕಿ ಸ್ಟೆಫಾನಿ ಟೇಲರ್​ 79 ಹಾಗೂ ಸ್ಟಾಸಿ ಆನ್​ ಕಿಂಗ್ 38 ಗಳಿಸಿದ್ದ ಬಿಟ್ಟರೆ ಉಳಿದವರಿಂದ ಉತ್ತಮ ಕೊಡುಗೆ ಬರಲಿಲ್ಲ.

  • India win by six wickets and claim the series 2-1!

    Smriti Mandhana, on her return from injury, smashed 74 off just 63 balls to claim the Player of the Match award 👏#WIvIND pic.twitter.com/pTwDMNwQrk

    — ICC (@ICC) 6 November 2019 " class="align-text-top noRightClick twitterSection" data=" ">

195 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕರಿಬ್ಬರೂ ಉತ್ತಮ ಅಡಿಪಯ ಹಾಕಿದರು. ಜೆಮಿಯಾ ರೋಡ್ರಿಗಸ್ 69, ಸ್ಮೃತಿ ಮಂಧಾನ 74 ಸಿಡಿಸಿ ಗೆಲುವನ್ನು ಖಚಿತಪಡಿಸಿದರು. ಕೊನೆಯಲ್ಲಿ ಪೂನಂ ರಾವುತ್ 24 ಹಾಗೂ ಮಿಥಾಲಿ ರಾಜ್ 20 ರನ್ ಬಾರಿಸಿ ಗೆಲುವು ತಂದಿತ್ತರು.

ನ.9ರಿಂದ ಉಭಯ ತಂಡಗಳ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಐದು ಟಿ20 ಪಂದ್ಯಗಳ ಈ ಸರಣಿ ನ.20ರಂದು ಮುಕ್ತಾಯವಾಗಲಿದೆ.

Intro:Body:

ಸರಣಿ ಗೆಲುವಿನಲ್ಲಿ ನಿರ್ಣಾಯಕವಾಗಿದ್ದ ಮೂರನೇ ಪಂದ್ಯದಲ್ಲಿ ಆತಿಥೇಯರು ನಿಗದಿತ 50 ಓವರ್​ನಲ್ಲಿ 194 ರನ್ ಗಳಿಸಲಷ್ಟೇ ಶಕ್ತರಾದರು.ನಾಯಕಿ ಸ್ಟೆಫಾನಿ ಟೇಲರ್​ 79 ಹಾಗೂ ಸ್ಟಾಸಿ ಆನ್​ ಕಿಂಗ್ 38 ಗಳಿಸಿದ್ದ ಬಿಟ್ಟರೆ ಉಳಿದವರಿಂದ ಉತ್ತಮ ಕೊಡುಗೆ ಬರಲಿಲ್ಲ.

195 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕರಿಬ್ಬರೂ ಉತ್ತಮ ಅಡಿಪಯ ಹಾಕಿದರು. ಜೆಮಿಯಾ ರೋಡ್ರಿಗಸ್ 69, ಸ್ಮೃತಿ ಮಂಧಾನ 74 ಸಿಡಿಸಿ ಗೆಲುವನ್ನು ಖಚಿತಪಡಿಸಿದರು. ಕೊನೆಯಲ್ಲಿ ಪೂನಂ ರಾವುತ್ 24 ಹಾಗೂ ಮಿಥಾಲಿ ರಾಜ್ 20 ರನ್ ಬಾರಿಸಿ ಗೆಲುವು ತಂದಿತ್ತರು.

ನ.9ರಿಂದ ಉಭಯ ತಂಡಗಳ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಐದು ಟಿ20 ಪಂದ್ಯಗಳ ಈ ಸರಣಿ ನ.20ರಂದು ಮುಕ್ತಾಯವಾಗಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.