ETV Bharat / sports

ಬಾಂಗ್ಲಾದೇಶದ ಟಿ20 ತಂಡದ ನಾಯಕ ಮಹಮದುಲ್ಲಾಗೆ ಕೋವಿಡ್​ 19 ಪಾಸಿಟಿವ್​

ಮೊಹಮದುಲ್ಲಾ ಮುಸಲ್ತಾನ್​ ಸುಲ್ತಾನ್​ ತಂಡಕ್ಕೆ ಮೊಯೀನ್ ಅಲಿ ಸ್ಥಾನಕ್ಕೆ ಸೇರಿಕೊಂಡಿದ್ದರು. ಆದರೆ, ಬಾಂಗ್ಲಾದೇಶ ಸರ್ಕಾರದ ನಿಯಮದ ಪ್ರಕಾರ ದೇಶದಿಂದ ಹೊರ ಹೋಗುವ ಪ್ರಯಾಣಿಕರು ಕೋವಿಡ್-19 ನೆಗೆಟಿವ್ ಸರ್ಟಿಫಿಕೇಟ್ ಸಲ್ಲಿಸಬೇಕು..

ಮಹಮದುಲ್ಲಾ ರಿಯಾದ್​
author img

By

Published : Nov 8, 2020, 4:05 PM IST

ಡಾಕಾ : ಬಾಂಗ್ಲಾದೇಶದ ಟಿ20 ತಂಡದ ನಾಯಕ ಮಹಮದುಲ್ಲಾ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಇದೇ ತಿಂಗಳು ಪುನಾರಂಭಗೊಳ್ಳುತ್ತಿರುವ ಪಿಎಸ್​ಎಲ್​ನ ನಾಕ್​ಔಟ್​ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

34 ವರ್ಷದ ಆಲ್​ರೌಂಡರ್ ​ಭಾನುವಾರ ಪಿಎಸ್​ಎಲ್​ಗಾಗಿ ದುಬೈ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ಸಿದ್ಧರಾಗಿದ್ದರು. ಆದರೆ, ಕೋವಿಡ್​ 19 ಸೋಂಕು ತಗುಲಿರುವುದರಿಂದ ಸೆಲ್ಫ್​ ಐಸೊಲೇಸನ್​ಗೆ ಒಳಗಾಗಿದ್ದಾರೆ.

ಇನ್ನು, ನವೆಂಬರ್​ 21 ಅಥವಾ 22ರಂದು ಆರಂಭವಾಗಲಿರುವ ಬಂಗಬಂಧು ಟಿ20 ಕಪ್​ಗೂ ಕೂಡ ಮಹಮದುಲ್ಲಾ ಗೈರಾಗುವ ಸಾಧ್ಯತೆಯಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.

ಮಹಮದುಲ್ಲಾ
ಮಹಮದುಲ್ಲಾ

ಮೊಹಮದುಲ್ಲಾ ಮುಸಲ್ತಾನ್​ ಸುಲ್ತಾನ್​ ತಂಡಕ್ಕೆ ಮೊಯೀನ್ ಅಲಿ ಸ್ಥಾನಕ್ಕೆ ಸೇರಿಕೊಂಡಿದ್ದರು. ಆದರೆ, ಬಾಂಗ್ಲಾದೇಶ ಸರ್ಕಾರದ ನಿಯಮದ ಪ್ರಕಾರ ದೇಶದಿಂದ ಹೊರ ಹೋಗುವ ಪ್ರಯಾಣಿಕರು ಕೋವಿಡ್-19 ನೆಗೆಟಿವ್ ಸರ್ಟಿಫಿಕೇಟ್ ಸಲ್ಲಿಸಬೇಕು.

ಮಹಮದುಲ್ಲಾ ಮತ್ತು ತಮೀಮ್ ಇಕ್ಬಾಲ್‌ ಅವರನ್ನು ಪಿಎಸ್‌ಎಲ್​ನ ವಿದೇಶಿ ಬದಲಿ ಆಟಗಾರರಾಗಿ ಕರೆ ಬಂದ ಹಿನ್ನೆಲೆ ಇಬ್ಬರು ಆಟಗಾರರು ಪಾಕಿಸ್ತಾನಕ್ಕೆ ಹೊರಡಲು ತಯಾರಾಗಿದ್ದರು. ತಮೀಮ್​ ಇಕ್ಬಾಲ್​ ಮಂಗಳವಾರ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆಯಿದ್ದು, ಲಾಹೋರ್ ಕಲಂದರ್ಸ್​ ತಂಡದ ಕ್ರಿಸ್‌ ಲಿನ್‌ಗೆ ಬದಲಿ ಆಟಗಾರರಾಗಿ ಆಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.