ETV Bharat / sports

ನ್ಯೂಜಿಲ್ಯಾಂಡ್​​​ ತಂಡದ ಆಟಗಾರ ಲೂಕೀ ಫರ್ಗುಸನ್​​ಗೆ ಕೊರೊನಾ ಸೋಂಕು ಶಂಕೆ?

ಲೂಕೀ ಫರ್ಗುಸನ್​ ಅವರ ಗಂಟಲು ದ್ರವದ ಮಾದರಿಯನ್ನು ಲ್ಯಾಬ್​ಗೆ ಕಳುಹಿಸಲಾಗಿದ್ದು, ಅದರ ವರದಿ ಬಂದ ಬಳಿಕ ರೋಗ ನಿರ್ಣಯ ತಿಳಿಯಲಿದೆ ಎಂದು ಕ್ರಿಕೆಟ್​ ಸಂಸ್ಥೆ ತಿಳಿಯಲಿದೆ.

Lockie Ferguson put under isolation following sore throat on international return
ಲೂಕೀ ಫರ್ಗುಸನ್
author img

By

Published : Mar 14, 2020, 3:28 PM IST

ಸಿಡ್ನಿ: ನ್ಯೂಜಿಲ್ಯಾಂಡ್​​ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್​ ಆಟಗಾರ ಲೂಕೀ ಫರ್ಗುಸನ್​ ಅವರಿಗೆ ಕೊರೊನಾ ವೈರಸ್​ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

ಪಂದ್ಯ ಮುಗಿದ ಬಳಿಕ ಫರ್ಗುಸನ್​ಗೆ ಗಂಟಲು ನೋವು ಕಾಣಿಸಿಕೊಂಡಿದೆ. ಆದ್ದರಿಂದ ಆತನನ್ನು 24 ಗಂಟೆಗಳ ಕಾಲ ತಪಾಸಣೆ ನಡೆಸಲಾಗುತ್ತದೆ ಎಂದು ನ್ಯೂಜಿಲ್ಯಾಂಡ್​​ ​ ಕ್ರಿಕೆಟ್​ ಹೇಳಿದೆ.

ಗಂಟಲು ದ್ರವದ ಮಾದರಿಯನ್ನು ಲ್ಯಾಬ್​ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ರೋಗ ನಿರ್ಣಯ ತಿಳಿಯಲಿದೆ. ಅದಾದ ನಂತರ ತಂಡಕ್ಕೆ ಮರಳುವುದೇ ಬೇಡವೇ ಎಂದು ನಿರ್ಧರಿಸಲಾಗುತ್ತದೆ.

ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 71 ರನ್​ಗಳ ಗೆಲುವು ದಾಖಲಿಸಿದೆ. ಕೊರೊನಾ ವೈರಸ್ ಹೆಚ್ಚಾದ ಪರಿಣಾಮ ಉಳಿದ ಪಂದ್ಯಗಳನ್ನು ರದ್ದು ಪಡಿಸಲಾಗಿದೆ.

ನಿನ್ನೆ ಆಸ್ಟ್ರೇಲಿಯಾ ತಂಡ ಆಟಗಾರ ಕೆ.ರಿಚರ್ಡ್​​ಸನ್​ಗೂ ಸೋಂಕು ತಗುಲಿದೆ ಎಂದು ಶಂಕಿಸಲಾಗಿತ್ತು. ಎಲ್ಲ ಪರೀಕ್ಷೆಯ ನಂತರ ಆತನ ವರದಿಯಲ್ಲಿ ನೆಗಟಿವ್​ ಬಂದಿದೆ. ಹೀಗಾಗಿ ತಂಡಕ್ಕೆ ಮರಳಲು ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ ಸೂಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.