ಸೈಲೆಟ್(ಬಾಂಗ್ಲಾದೇಶ): ಲಿಟ್ಟನ್ ದಾಸ್ ಅವರ ಭರ್ಜರಿ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಜಿಂಬಾಂಬ್ವೆಯನ್ನು 169 ರನ್ಗಳ ಅಂತರದಿಂದ ಬಗ್ಗುಬಡಿದಿದೆ.
ಸೈಲೆಟ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ಲಿಟ್ಟನ್ ದಾಸ್(126) ಅವರ ಭರ್ಜರಿ ಶತಕ, ಮೊಹಮ್ಮದ್ ಮಿಥುನ್(50) ಅವರ ಅರ್ಧಶತಕದ ನೆರವಿನಿಂದ 321 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
-
Bangladesh win by 169 runs! 🎉
— ICC (@ICC) March 1, 2020 " class="align-text-top noRightClick twitterSection" data="
That is their biggest ODI victory ever by runs 👏 #BANvZIM pic.twitter.com/GkPcl6ZnWL
">Bangladesh win by 169 runs! 🎉
— ICC (@ICC) March 1, 2020
That is their biggest ODI victory ever by runs 👏 #BANvZIM pic.twitter.com/GkPcl6ZnWLBangladesh win by 169 runs! 🎉
— ICC (@ICC) March 1, 2020
That is their biggest ODI victory ever by runs 👏 #BANvZIM pic.twitter.com/GkPcl6ZnWL
ಜಿಂಬಾಬ್ವೆ ಪರ ಕ್ರಿಸ್ ಎಂಪೋಫು 2 ವಿಕೆಟ್ ಪಡೆದರೆ, ಕಾರ್ಲ್ ಮಂಬಾ, ವೆಸ್ಲೆ ಮ್ಯಾಧೆವರ್, ಟ್ರಿಪಾನೋ ಹಾಗೂ ಮುಟೊಂಬೊಡ್ಜಿ ತಲಾ ಒಂದು ವಿಕೆಟ್ ಪಡೆದರು.
322 ರನ್ಗಳ ಬೃಹತ್ ಮೊತ್ತವನ್ನು ಹಿಂಬಾಲಿಸಿದ ಜಿಂಬಾಬ್ವೆ ಬಾಂಗ್ಲಾದೇಶದ ಬೌಲರ್ಗಳ ದಾಳಿಗೆ ಸಿಲುಕಿ ಕೇವಲ 39.1 ಓವರ್ಗಳಲ್ಲಿ 152 ರನ್ಗಳಿಗೆ ಆಲೌಟ್ ಆಯಿತು. ವೆಸ್ಲೆ ಮ್ಯಾಧೆವರ್ 35 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸೈಫುದ್ದೀನ್(3ವಿಕೆಟ್), ಮುಷ್ರಫೆ ಮೋರ್ತಾಜ(2), ಮೆಹಿದಿ ಹಸನ್(2) ಮುಸ್ತಫಿಜುರ್ ರಹಮಾನ್ ಹಾಗೂ ತೈಜುಲ್ ಇಸ್ಲಾಮ್ ತಲಾ ಎರಡು ವಿಕೆಟ್ ಪಡೆದರು.
ಶತಕ ಸಿಡಿಸಿದ ಲಿಟ್ಟನ್ ದಾಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.