ಲಂಡನ್: ಐಪಿಎಲ್ ಅಂದ್ರೆ ಟಿ20 ಜಗತ್ತಿನ ಹಬ್ಬವಾಗಿದ್ದು, ಈ ಟೂರ್ನಿ ನಡೆಯುವ ಎರಡು ತಿಂಗಳು ವಿಶ್ವದಾದ್ಯಂತ ಎಲ್ಲಾ ಮಾದರಿಯ ಕ್ರಿಕೆಟ್ಗಳು ನಿಶಬ್ಧವಾಗಿರುತ್ತವೆ. ಆದರೆ ಅಂತಹ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಇಂಗ್ಲೆಂಡ್ನ ಲೈಮ್ ಲೆವಿಂಗ್ಸ್ಟನ್ ತಾವಾಗಿಯೇ ಕಳೆದುಕೊಳ್ಳುತ್ತಿದ್ದಾರೆ.
ಕಳೆದ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದ ಇಂಗ್ಲೆಂಡ್ನ ಆಲ್ರೌಂಡರ್ ಲೈಮ್ ಲಿವಿಂಗ್ಸ್ಟನ್ ಈ ಬಾರಿ ಹರಾಜಿಗೂ ಮುನ್ನವೇ ತಂಡ ಅವರನ್ನು ರಿಲೀಸ್ ಮಾಡಿತ್ತು. ಡಿಸೆಂಬರ್ 19 ರಂದು 2020ರ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಆದರೆ ಲೈಮ್ ತಾನು ಈ ಬಾರಿ ಐಪಿಎಲ್ಗೆ ಲಭ್ಯವಿರುವುದಿಲ್ಲ ಎಂದು ಅವರೇ ತಿಳಿಸಿದ್ದಾರೆ.
-
Thanks to all at @rajasthanroyals unbelievable franchise! Good luck for the season, I will be supporting from England! 👍👍 https://t.co/656QpRGVHO
— Liam Livingstone (@liaml4893) November 16, 2019 " class="align-text-top noRightClick twitterSection" data="
">Thanks to all at @rajasthanroyals unbelievable franchise! Good luck for the season, I will be supporting from England! 👍👍 https://t.co/656QpRGVHO
— Liam Livingstone (@liaml4893) November 16, 2019Thanks to all at @rajasthanroyals unbelievable franchise! Good luck for the season, I will be supporting from England! 👍👍 https://t.co/656QpRGVHO
— Liam Livingstone (@liaml4893) November 16, 2019
ಈಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಲಿವಿಂಗ್ಸ್ಟನ್ ಟೆಸ್ಟ್ ಕ್ರಿಕೆಟ್ನಲ್ಲಿ ನೆಲೆಯೂರಲು ನಿರ್ಧರಿಸಿದ್ದು, ಐಪಿಎಲ್ ಬದಲು ಕೌಂಟಿ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ.
ನಾನು ರಾಜಸ್ಥಾನ ರಾಯಲ್ಸ್ ಪರ ಕಳೆದ ಸೀಸನ್ನಲ್ಲಿ ಐಪಿಎಲ್ನಲ್ಲಿ ಆಡಿರುವುದು ಅದ್ಭುತ ಅನುಭವ. ಈ ಸಮಯದ ಎಲ್ಲಾ ಸೆಕೆಂಡ್ಗಳನ್ನು ನಾನು ಎಂಜಾಯ್ ಮಾಡಿದ್ದೇನೆ. ಎಲ್ಲಾ ಆಟಗಾರರು ನನ್ನ ಜೀವನದಲ್ಲಿ ಒಂದು ಭಾಗವಾಗಿದ್ದಾರೆ. ಆದರೆ ನನಗೆ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚಿನ ಗಮನ ನೀಡಲು ಐಪಿಎಲ್ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಲಿವಿಂಗ್ಸ್ಟನ್ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ.