ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿಯ ಓನರ್ ನೆಸ್ ವಾಡಿಯಾ ಐಪಿಎಲ್ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬೇಕೆಂದು ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ರಾಷ್ಟ್ರಗೀತೆಯನ್ನು ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ಹಾಡಿಸಲಾಗುತ್ತಿದೆ. ಆದರೆ ನೆಸ್ವಾಡಿಯಾ ವಿಶ್ವದ ಪ್ರಸಿದ್ಧ ಟಿ20 ಲೀಗ್ ಆದ ಐಪಿಎಲ್ನಲ್ಲೂ ರಾಷ್ಟ್ರಗೀತೆ ಹಾಡಿಸಬೇಕೆಂದು ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ.
ಜೊತೆಗೆ ಐಪಿಎಲ್ ಸಂಭ್ರಮದ ಉದ್ಘಾಟನೆಯನ್ನು ನಿಲ್ಲಿಸುವ ಬಿಸಿಸಿಐ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅದೇ ರೀತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡಿಸುವ ಹೊಸ ಸಂಸ್ಕೃತಿಗೆ 2020ರ ಆವೃತ್ತಿಯಿಂದ ನಾಂದಿ ಹಾಡುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಇಂಡಿಯನ್ ಸೂಪರ್ ಲೀಗ್(ಫುಟ್ಬಾಲ್), ಪ್ರೊ ಕಬಡ್ಡಿ ಲೀಗ್ನಲ್ಲಿ ರಾಷ್ಟ್ರಗೀತೆ ಹಾಡಿಸಲಾಗುತ್ತಿದೆ. ಇದೀಗ ವಿಶ್ವಪ್ರಸಿದ್ಧ ಟಿ20 ಲೀಗ್ನಲ್ಲೂ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ನೆಸ್ವಾಡಿಯಾ ಅಭಿಪ್ರಾಯಪಟ್ಟಿದ್ದಾರೆ.