ನವದೆಹಲಿ (ಭಾರತ): ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರ ತಂದೆ ನಿಧನರಾಗಿದ್ದು, ಕೃನಾಲ್ ಪಾಂಡ್ಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ರಚಿಸಿದ ಬಯೋ ಬಬಲ್ ಅನ್ನು ತೊರೆದಿದ್ದಾರೆ.
ಬರೋಡ ತಂಡದ ನಾಯಕ ಕೃನಾಲ್ ಪಾಂಡ್ಯ, ತಮ್ಮ ಕುಟುಂಬದೊಂದಿಗೆ ಇರಲು ಬಯೋ ಬಬಲ್ ತೊರೆದಿದ್ದಾರೆ. ಹೀಗಾಗಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬರೋಡಾ ಪರ ಆಡುತ್ತಿಲ್ಲ.
"ಕೃನಾಲ್ ಪಾಂಡ್ಯ ಅವರು ಬಯೋ ಬಬಲ್ ತೊರೆದಿದ್ದಾರೆ. ಇದು ವೈಯಕ್ತಿಕ ದುರಂತ, ಹಾರ್ದಿಕ್ ಮತ್ತು ಕೃನಾಲ್ ಅವರ ತಂದೆಯ ನಿಧನಕ್ಕೆ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಶೋಕಿಸುತ್ತಿದೆ" ಎಂದು ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಸಿಇಒ ಶಿಶಿರ್ ತಿಳಿಸಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಕೃನಾಲ್ ಪಾಂಡ್ಯ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಆಡುತ್ತಿಲ್ಲ. ಆದರೆ ಮುಂಬರುವ ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಗಾಗಿ ತರಬೇತಿಯನ್ನು ಪ್ರಾರಂಭಿಸಿದ್ದರು.