ETV Bharat / sports

ವಿರಾಟ್ ಕೊಹ್ಲಿ ನನ್ನ ಮೆಚ್ಚಿನ ಬ್ಯಾಟ್ಸ್​​​ಮನ್​​; ಮಿಯಾಂದಾದ್

author img

By

Published : Mar 21, 2020, 5:00 PM IST

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಹಿರಿಯ ಕ್ರಿಕೆಟ್ ಪಟು ಜಾವೇದ್ ಮಿಯಾಂದಾದ್ ಅವರು ವಿರಾಟ್​ ಕೊಹ್ಲಿ ಆಟದ ಶೈಲಿಯನ್ನು 'ಕ್ಲಾಸಿ' ಎಂದು ಬಾಯ್ತುಂಬ ಹೊಗಳಿದ್ದಾರೆ. ವೇಗದ ಬೌಲಿಂಗ್, ಬೌನ್ಸ್ ಪಿಚ್​ಗಳು, ಸ್ಪಿನ್ ಬೌಲಿಂಗ್ ಹೀಗೆ ಯಾವುದಕ್ಕೂ ಹೆದರದೇ ಆಟವಾಡುವ ಕೊಹ್ಲಿ ನನ್ನ ಮೆಚ್ಚಿನ ಭಾರತೀಯ ಕ್ರಿಕೆಟ್ ಆಟಗಾರ ಎಂದು ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

virat kohli
ವಿರಾಟ್ ಕೊಹ್ಲಿ

ಕರಾಚಿ: ವಿರಾಟ್ ಕೊಹ್ಲಿ ಅವರ ದಾಖಲೆಗಳೇ ಅವರ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತವೆ ಎಂದು ಹಿರಿಯ ಪಾಕ್ ಕ್ರಿಕೆಟ್ ಪಟು ಜಾವೇದ ಮಿಯಾಂದಾದ್ ಹೇಳಿದ್ದಾರೆ. ಕೊಹ್ಲಿ ಬ್ಯಾಂಟಿಂಗ್​​ 'ಕ್ಲಾಸಿ' ಎಂದು ಮಿಯಾಂದಾದ್ ಬಾಯ್ತುಂಬ ಹೊಗಳಿದ್ದಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ಮಿಯಾಂದಾದ್, ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಪ್ರತಿಭಾ ಸಾಮರ್ಥ್ಯದ ಬಗ್ಗೆ ಸಾಕಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಈಗ ಭಾರತೀಯ ಕ್ರಿಕೆಟ್​ ತಂಡದಲ್ಲಿರುವವರಲ್ಲಿ ನಿಮಗೆ ಫೇವರಿಟ್ ಯಾರು ಎಂದು ಕೇಳಿದರೆ ನಾನು ಕೊಹ್ಲಿ ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ಅವರ ಸಾಮರ್ಥ್ಯದ ಬಗ್ಗೆ ನಾನೇನೂ ಹೇಳಬೇಕಿಲ್ಲ. ಅವರ ದಾಖಲೆಗಳು, ಅದರಲ್ಲಿನ ಅಂಕಿ-ಅಂಶಗಳೇ ಎಲ್ಲವನ್ನೂ ಹೇಳುತ್ತವೆ. ಸೌತ್ ಆಫ್ರಿಕಾ ಪ್ರಯಾಣದಲ್ಲಿ ವಿರಾಟ್ ತುಂಬಾ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಅಲ್ಲಿಯೂ ಶತಕ ಬಾರಿಸಿರುವ ವಿರಾಟ್ ವೇಗದ ಬೌಲಿಂಗ್, ಪುಟಿಯುವ ಪಿಚ್ ಅಥವಾ ಸ್ಪಿನ್ನರ್​ಗಳು ಯಾವುದಕ್ಕೂ ಹೆದರಲಾರರು.' ಎಂದು ಮಿಯಾಂದಾದ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.