ETV Bharat / sports

ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ನಿರ್ಧಾರ ಪೂರ್ವನಿಯೋಜಿತ: ಮೈಕ್ ಹೆಸನ್ - ವಿರಾಟ್ ಕೊಹ್ಲಿ ನ್ಯೂಸ್​

ಪಂದ್ಯದಲ್ಲಿ ಕೊಹ್ಲಿ ಆರಂಭಿಕನಾಗಿ ಆಡುವ ಬಗ್ಗೆ ಮೊದಲೇ ಚರ್ಚಿಸಿದ್ದೆವು. ಇದು ನಮಗೆ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಹೇಗೆ ರಚಿಸಬೇಕೆಂಬ ದೃಷ್ಟಿಯಿಂದ ನಮ್ಮ ಹರಾಜು ಯೋಜನೆಯನ್ನು ಸೃಷ್ಟಿಸಲಾಗಿತ್ತು ಎಂದು ಆರ್​ಸಿಬಿ ನಿರ್ದೇಶಕ ಮೈಕ್ ಹೆಸನ್ ತಿಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು
ವಿರಾಟ್ ಕೊಹ್ಲಿ
author img

By

Published : Mar 25, 2021, 7:22 PM IST

ಹೈದರಾಬಾದ್​: ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವರ ನಿರ್ಧಾರ ಹರಾಜಿನ ಕಾರ್ಯತಂತ್ರದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಡೈರೆಕ್ಟರ್​ ಆಫ್​ ಕ್ರಿಕೆಟ್​ ಮೈಕ್​ ಹೆಸನ್​ ಒಪ್ಪಿಕೊಂಡಿದ್ದಾರೆ.

ಆರ್​ಸಿಬಿ ಹರಾಜಿಗೂ ಮುನ್ನವೇ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ಅವರು ಬಹಿರಂಗಗೊಳಿಸಿದ್ದಾರೆ. ಕೊಹ್ಲಿ ಆರಂಭಿಕನಾಗಿ ಆಡುವ ಬಗ್ಗೆ ಮೊದಲೇ ಮಾತನಾಡಿದ್ದೆವು. ಏಕೆಂದರೆ, ನಮಗೆ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಹೇಗೆ ರಚಿಸಬೇಕೆಂಬ ದೃಷ್ಟಿಯಿಂದ ಹರಾಜು ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ದೆವು ಎಂದು ಮೈಕ್ ಹೆಸನ್​ ತಿಳಿಸಿದ್ದಾರೆ.

"ನಾವು ಐಪಿಎಲ್​ ಹರಾಜಿಗೂ ಮೊದಲು ಕೊಹ್ಲಿ ಆರಂಭಿಕನಾಗಿ ಆಡುವ ಬಗ್ಗೆ ಮಾತನಾಡಿದ್ದೆವು. ಈ ಮೂಲಕ ನಮ್ಮ ಬ್ಯಾಟಿಂಗ್​ ಶ್ರೇಣಿಯನ್ನು ರಚಿಸಿಕೊಳ್ಳಬೇಕು ಎಂದು ಯೋಜಿಸಿದ್ದೆವು. ಆದ್ದರಿಂದ ಖಂಡಿತವಾಗಿಯೂ, ಕೊಹ್ಲಿಯ ನಿರ್ಧಾರ ನಮಗೆ ಆಶ್ಚರ್ಯ ತಂದಿಲ್ಲ. ತಂಡದ ಸಂಯೋಜನೆ ನೋಡಲು ಸ್ವಲ್ಪ ವಿಭಿನ್ನವಾಗಿ ಕಾಣಬಹುದು. ಆದರೆ ಇದು ನಮ್ಮ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಬಹಳ ನೆರವು ನೀಡಿತು" ಎಂದು ಆರ್​ಸಿಬಿ ಶೇರ್​ ಮಾಡಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವುದರ ಬಗ್ಗೆ ಕೊಹ್ಲಿ ಹೀಗಂತಾರೆ..

ಕೊಹ್ಲಿ ಆರಂಭಿಕರಾಗಿ ಪಡಿಕ್ಕಲ್​ ಜೊತೆ ಕಣಕ್ಕಿಳಿದರೆ, 3ನೇ ಕ್ರಮಾಂಕದಲ್ಲಿ ಎಬಿಡಿ ಯಾವುದೇ ಒತ್ತಡವಿಲ್ಲದೆ ಬ್ಯಾಟ್​ ಬೀಸಬಲ್ಲರು. ಇದೇ ಕಾರಣದಿಂದ ಮ್ಯಾಕ್ಸ್​ವೆಲ್ ಅವ​ರನ್ನು ದುಬಾರಿ ಬೆಲೆ ನೀಡಿ ಖರೀದಿಸಲಾಗಿದೆ. ಅವರು​ ಮಧ್ಯಮ ಕ್ರಮಾಂಕದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮೊಹಮ್ಮದ್ ಅಜರುದ್ದೀನ್ ಮತ್ತು ಕೆ.ಎಸ್.ಭರತ್ ತಂಡದಲ್ಲಿ ವಿಕೆಟ್​ ಕೀಪಿಂಗ್ ಮಾಡಬಲ್ಲರಾದ್ದರಿಂದ ಎಬಿಡಿ ಮೇಲಿನ ಭಾರ ಕಡಿಮೆಯಾಗಿದೆ ಎಂದು ಹೆಸನ್​ ವಿವರಿಸಿದರು.

ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ20ಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಕೊಹ್ಲಿ, ಕೇವಲ 52 ಎಸೆತಗಳಲ್ಲಿ 80 ರನ್‌ಗಳಿಸಿದ್ದರು. ಈ ಪಂದ್ಯಲ್ಲಿ ಭಾರತ 224 ರನ್​ಗಳಿಸಿ 36 ರನ್​ಗಳಿಂದ ಆಂಗ್ಲರನ್ನು ಬಗ್ಗುಬಡಿದು 3-2 ರಲ್ಲಿ ಟಿ20 ಸರಣಿ ಜಯಿಸಿತ್ತು.

ಇದನ್ನೂ ಓದಿ: ಈ ಬಾರಿಯ ಐಪಿಎಲ್​​ನಲ್ಲಿ ಓಪನರ್​ ಆಗಿ ಆಡುತ್ತೇನೆ : ವಿರಾಟ್​ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.