ಮುಂಬೈ: ಭಾರತ ಕ್ರಿಕೆಟ್ ತಂಡದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 2011ನೇ ವಿಶ್ವಕಪ್ ಗೆಲುವಿನ ಸಂಭ್ರಮದ ಕ್ಷಣ ಲೌರೆಸ್ ಸ್ಪೂರ್ತಿದಾಯಕ ಕ್ರೀಡಾ ಕ್ಷಣಕ್ಕೆ ಆಯ್ಕೆಯಾಗಿದ್ದು ಸಚಿನ್ಗೆ ಮತ ಹಾಕುವಂತೆ ಟೀಂ ಇಂಡಿಯಾ ನಾಯಕ ಕೊಹ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
2000ರಿಂದ 2020ರ ವರೆಗಿನ 20 ವರ್ಷಗಳಲ್ಲಿ ಕ್ರೀಡಾಲೋಕದ 20 ಸ್ಮರಣೀಯ ಕ್ಷಣಗಳನ್ನು ಪಟ್ಟಿಯಲ್ಲಿ ಮಾಡಲಾಗಿತ್ತು. ಅದರಲ್ಲಿ 2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದ ಬಳಿಕ ಸಚಿನ್ ತೆಂಡೂಲ್ಕರ್ ಅವರನ್ನ ತಂಡದ ಸಹ ಆಟಗಾರರು ತಮ್ಮ ಭುಜದ ಮೇಲೆ ಹೊತ್ತು ವಾಂಖೆಡೆ ಸ್ಟೇಡಿಯಂನ ಸುತ್ತು ಒಂದು ಸುತ್ತು ಸುತ್ತಿದ್ದರು. ಈ ಕ್ಷಣವನ್ನು ‘ದೇಶವನ್ನು ಭುಜದ ಮೇಲೆ ಹೊತ್ತ ಕ್ಷಣ’ ಎಂದು ಹೆಸರಿಡಲಾಗಿದೆ. ಇದು ಆ ಪಟ್ಟಿಯಲ್ಲಿ ಮೊದಲ 5 ಸ್ಥಾನಗಳಲ್ಲಿ ಅವಕಾಶ ಪಡೆದಿದೆ.
-
A friend, teammate, mentor and icon. Let's all come together and vote for @sachin_rt paaji for the Laureus Sporting Moment 2⃣0⃣0⃣0⃣ - 2⃣0⃣2⃣0⃣ ✌ Click on the link below and vote now. 💪 @LaureusSport #Laureus20 https://t.co/wzzzldtJhS pic.twitter.com/PegECYFH2E
— Virat Kohli (@imVkohli) February 9, 2020 " class="align-text-top noRightClick twitterSection" data="
">A friend, teammate, mentor and icon. Let's all come together and vote for @sachin_rt paaji for the Laureus Sporting Moment 2⃣0⃣0⃣0⃣ - 2⃣0⃣2⃣0⃣ ✌ Click on the link below and vote now. 💪 @LaureusSport #Laureus20 https://t.co/wzzzldtJhS pic.twitter.com/PegECYFH2E
— Virat Kohli (@imVkohli) February 9, 2020A friend, teammate, mentor and icon. Let's all come together and vote for @sachin_rt paaji for the Laureus Sporting Moment 2⃣0⃣0⃣0⃣ - 2⃣0⃣2⃣0⃣ ✌ Click on the link below and vote now. 💪 @LaureusSport #Laureus20 https://t.co/wzzzldtJhS pic.twitter.com/PegECYFH2E
— Virat Kohli (@imVkohli) February 9, 2020
"ಗೆಳೆಯ, ತಂಡದ ಸಹ ಆಟಗಾರ, ಮೆಂಟರ್, ಐಕಾನ್ ಆಗಿರುವ ಸಚಿನ್ ಪಾಜಿ ಅವರನ್ನು '2000-2020 ಲೌರೆಸ್ ಸ್ಪೂರ್ತಿದಾಯಕ ಕ್ಷಣ ' ಗೌರವ ದೊರಕುವಂತೆ ಮಾಡಲು ನಾವೆಲ್ಲರೂ ಒಟ್ಟಿಗೆ ಮತ ಹಾಕೋಣ" ಎಂದು ಟ್ವೀಟ್ ಮಾಡಿದ್ದಾರೆ.
6 ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದರೂ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಗೆಲುವಿನ ಸಿಹಿ ಅನುಭವಿಸಿರಲಿಲ್ಲ. ಆದರೆ 2011ರಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ, ಏಕದಿನ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಸಚಿನ್ ಹೊರತುಪಡಿಸಿದರೆ 2005ರ ಆ್ಯಶಸ್ ಟೆಸ್ಟ್ ಗೆಲುವಿನ ಬಳಿಕ ಇಂಗ್ಲೆಂಡ್ ತಂಡದ ಆಟಗಾರ ಫ್ಲಿಂಟಾಫ್ ಗೆಲುವಿನ ಸಂಭ್ರಮವನ್ನ ಆಚರಿಸುವ ಬದಲು ಬ್ರೆಟ್ ಲೀಗೆ ಹಸ್ತಲಾಘವ ಮಾಡಿದ ಕ್ಷಣ ಕೂಡ ಪ್ರಶಸ್ತಿಯ ರೇಸ್ನಲ್ಲಿದೆ.
ಜನವರಿ 10 ರಿಂದ ಫೆ.16ರವರೆಗೆ ಅಭಿಮಾನಿಗಳು ಪ್ರಶಸ್ತಿಗೆ ವೋಟ್ ಮಾಡುವ ಅವಕಾಶ ಹೊಂದಿದ್ದು, ಫೆ. 17 ರಂದು ಬರ್ಲಿನ್ನಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಲಿದೆ.