ಅಹ್ಮದಾಬಾದ್ : ನಾಯಕ ಕೊಹ್ಲಿ ಮತ್ತು ಯುವ ಆರಂಭಿಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಜಯಭೇರಿ ಬಾರಿಸುವ ಮೂಲಕ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ನೀಡಿದ್ದ 165 ರನ್ಗಳ ಗುರಿಯನ್ನು ಟೀಂ ಇಂಡಿಯಾ 17.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ರಾಹುಲ್ 6 ಎಸೆತಗಳಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಆದರೆ, ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ ಜೊತೆ ಸೇರಿದ ವಿರಾಟ್ ಕೊಹ್ಲಿ 2ನೇ ವಿಕೆಟ್ಗೆ 94 ರನ್ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರುಮಾಡಿದ್ದಲ್ಲದೆ ತಂಡವನ್ನು ಸುಸ್ಥಿತಿಗೆ ತಂದರು.
-
Captain @imVkohli finishes it off in style with a SIX 😎#TeamIndia 🇮🇳 beat England 🏴 by 7️⃣ wickets to level the series 1-1 👌🏻#INDvENG @Paytm
— BCCI (@BCCI) March 14, 2021 " class="align-text-top noRightClick twitterSection" data="
Scorecard 👉 https://t.co/gU4AGqh8Um pic.twitter.com/GjZ6qhTI2n
">Captain @imVkohli finishes it off in style with a SIX 😎#TeamIndia 🇮🇳 beat England 🏴 by 7️⃣ wickets to level the series 1-1 👌🏻#INDvENG @Paytm
— BCCI (@BCCI) March 14, 2021
Scorecard 👉 https://t.co/gU4AGqh8Um pic.twitter.com/GjZ6qhTI2nCaptain @imVkohli finishes it off in style with a SIX 😎#TeamIndia 🇮🇳 beat England 🏴 by 7️⃣ wickets to level the series 1-1 👌🏻#INDvENG @Paytm
— BCCI (@BCCI) March 14, 2021
Scorecard 👉 https://t.co/gU4AGqh8Um pic.twitter.com/GjZ6qhTI2n
ಪದಾರ್ಪಣೆ ಪಂದ್ಯದಲ್ಲಿ ಅಬ್ಬರಿಸಿದ ಕಿಶನ್ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 56 ರನ್ಗಳಿಸಿ ಔಟಾದರು. ನಂತರ ಬಂದ ಪಂತ್ ಕೂಡ ಅಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 13 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 26 ರನ್ಗಳಿಸಿದ್ದಲ್ಲದೆ, ಕೊಹ್ಲಿ ಜೊತೆ 36 ರನ್ಗಳ ಜೊತೆಯಾಟ ನೀಡಿ ಜೋರ್ಡನ್ಗೆ ವಿಕೆಟ್ ಒಪ್ಪಿಸಿದರು.
ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 5 ಬೌಂಡರಿ ಸಹಿತ 73 ರನ್ಗಳಿಸುವ ಮೂಲಕ ತಮ್ಮ ಫಾರ್ಮ್ಗೆ ಮರಳಿದರು. ಅವರು ಶ್ರೇಯಸ್ ಅಯ್ಯರ್(8) ಜೊತೆಗೆ 4ನೇ ವಿಕೆಟ್ ಮುರಿಯದ 36 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಈ ಪಂದ್ಯದಲ್ಲಿ 73 ರನ್ಗಳಿಸಿದ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 3000 ರನ್ ಮೈಲುಗಲ್ಲು ದಾಟಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು.
ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್, ಜೋರ್ಡನ್ ಮತ್ತು ರಶೀದ್ ತಲಾ ಒಂದು ವಿಕೆಟ್ ಪಡೆದರು. ಇದಕ್ಕು ಮುನ್ನ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಭಾರತದ ಶಿಸ್ತಿನ ದಾಳಿಯ ಮುಂದೆ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್ಗಳಿಸಲಷ್ಟೇ ಶಕ್ತವಾಯಿತು.
ಜೇಸನ್ ರಾಯ್ 46(35 ಎಸೆತ), ಡೇವಿಡ್ ಮಲನ್ 24(23), ಬೈರ್ಸ್ಟೋವ್ 20(15), ಮಾರ್ಗನ್ 28(20) ಮತ್ತು ಸ್ಟೋಕ್ಸ್ 24(21) ರನ್ಗಳಿಸಿದ್ದರು. ಭಾರತದ ಪರ ಭುವನೇಶ್ವರ್ ಕುಮಾರ್ 28ಕ್ಕೆ 1, ಸುಂದರ್ 29ಕ್ಕೆ 2, ಶಾರ್ದುಲ್ ಠಾಕೂರ್ 29ಕ್ಕೆ 2, ಚಹಾಲ್ 34ಕ್ಕೆ 1 ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದರು.