ETV Bharat / sports

ಮೋದಿ ಮೈದಾನದಲ್ಲಿ ನಡೆಯದ ರಾಹುಲ್​ ಆಟ; ಮತ್ತೊಮ್ಮೆ ನಿರಾಸೆ ಮೂಡಿಸಿದ ಕನ್ನಡಿಗ

author img

By

Published : Mar 18, 2021, 8:15 PM IST

ನರೇಂದ್ರ ಮೋದಿ ಮೈದಾನದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್​ ರಾಹುಲ್​ ಬ್ಯಾಟಿಂಗ್​ ವೈಫಲ್ಯ ಮುಂದುವರೆದಿದೆ.

KL Rahul
KL Rahul

ಅಹಮದಾಬಾದ್​: ಟೀಂ ಇಂಡಿಯಾ ಆರಂಭಿಕ ಕೆ.ಎಲ್​ ರಾಹುಲ್​ ಕಳಪೆ ಬ್ಯಾಟಿಂಗ್​​ ಪ್ರದರ್ಶನ ನೀಡುತ್ತಿದ್ದು, ಇಂದಿನ ಪಂದ್ಯದಲ್ಲಿಯೂ ಮತ್ತೊಮ್ಮೆ ಕಡಿಮೆ ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಟಿ-20 ಪಂದ್ಯಗಳ ನಾಲ್ಕನೇ ಟಿ-20 ಪಂದ್ಯದಲ್ಲಿ ಕನ್ನಡಿಗ, ಆರಂಭಿಕ ಆಟಗಾರ ಕೆ.ಎಲ್​.ರಾಹುಲ್​ ತಾವು ಎದುರಿಸಿದ 17 ಎಸೆತಗಳಲ್ಲಿ ಕೇವಲ 14ರನ್​ಗಳಿಕೆ ಮಾಡಿದ್ದಾರೆ.

ಇದನ್ನೂ ಓದಿ: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್; ಭಾರತಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ

ರಾಹುಲ್​ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಮೈದಾನದ ಹೆಸರೇ ಕಾರಣ ಎಂದು ಟ್ರೋಲ್​ ಮಾಡಲಾಗುತ್ತಿದೆ. ಹಾಗಾಗಿ ಕಾಂಗ್ರೆಸ್​ ಮುಖಂಡ ರಾಹುಲ್​ ಟ್ರೋಲ್​ಗೊಳಗಾಗುತ್ತಿದ್ದಾರೆ. ಜತೆಗೆ ನರೇಂದ್ರ ಮೋದಿ ಮುಂದೆ ರಾಹುಲ್​ ಆಟ ನಡೆಯುವುದಿಲ್ಲ ಎಂಬ ಟ್ರೋಲ್‌ಗಳು ಜೋರಾಗಿ ಸದ್ದು ಮಾಡುತ್ತಿವೆ.

​ರೋಹಿತ್​ ಶರ್ಮಾ ಜೊತೆ ಸೇರಿ ಇನ್ನಿಂಗ್ಸ್​ ಆರಂಭಿಸಿದ ರಾಹುಲ್​​, ಬೆನ್​ ಸ್ಟೋಕ್ಸ್​ ಓವರ್​ನಲ್ಲಿ ಕ್ಯಾಚ್​ ನೀಡಿದರು. ಕಳೆದ ಐದು ಟಿ-20 ಪಂದ್ಯಗಳಲ್ಲಿಯೂ ಇವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇಂಗ್ಲೆಂಡ್​ ವಿರುದ್ಧದ ನಾಲ್ಕು ಟಿ-20 ಪಂದ್ಯಗಳಿಂದ ಕೇವಲ 15 ರನ್​ಗಳಿಕೆ ಮಾಡಿದ್ದಾರೆ. ವಿಶೇಷವೆಂದರೆ, 119 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳ ವೃತ್ತಿ ಜೀವನದಲ್ಲಿ ರಾಹುಲ್​ ಇದೇ ಮೊದಲ ಸಲ ಸತತ ವೈಫಲ್ಯಕ್ಕೊಳಗಾಗಿದ್ದಾರೆ.

ಈ ಹಿಂದಿನ ಮೂರು ಪಂದ್ಯಗಳಿಂದ ಕೆ.ಎಲ್.ರಾಹುಲ್​ ಕೇವಲ 1 ರನ್​ಗಳಿಕೆ ಮಾಡಿ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಆರ್ಭಟಿಸಲಿದ್ದಾರೆ ಎಂಬ ಭರವಸೆಯಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.