ETV Bharat / sports

ಕಿವೀಸ್​ ವಿರುದ್ಧದ 3ನೇ ಪಂದ್ಯದಲ್ಲಿ ಮೂವರು ಕನ್ನಡಿಗರು... ಕಿವೀಸ್​ ಮೈದಾನದಲ್ಲಿ ಕನ್ನಡ ಕಲರವ - ಕಿವೀಸ್​ ಮೈದಾನದಲ್ಲಿ ಕನ್ನಡದ ಕಲರವ

31.3ನೇ ಓವರ್​ನಲ್ಲಿ ಶ್ರೇಯಸ್​ ಅಯ್ಯರ್​ ಔಟಾದರು. ಈ ವೇಳೆ ಪಾಂಡೆ ತಾವು ಎದುರಿಸಿದ ಮೊದಲನೇ ಎಸೆತದಲ್ಲೇ ಒಂಟಿರನ್​ ತೆಗೆಯಲು ರಾಹುಲ್​ರನ್ನು ಕರೆದಿದ್ದಾರೆ. ಇದಕ್ಕೆ ರಾಹುಲ್​ 'ಬೇಡ ಬೇಡ' ಎಂದು ಕೂಗಿದ್ದಾರೆ. ಇವರಿಬ್ಬರ ಮಾತು ಸ್ಟಂಪ್​ಮೈಕ್​ ಮೂಲಕ ಟಿವಿ ವೀಕ್ಷಕರಿಗೆ ಕೇಳಿಸಿದೆ.

KL Rahul and Manish Pandey talking in Kannada
ಕನ್ನಡದಲ್ಲಿ ಮಾತನಾಡಿದ ಪಾಂಡೆ-ರಾಹುಲ್​
author img

By

Published : Feb 11, 2020, 1:42 PM IST

Updated : Feb 11, 2020, 1:55 PM IST

ಮೌಂಗನ್ಯುಯಿ​​: ಕಿವೀಸ್​ ವಿರುದ್ಧದ ಮೂರನೇ ಪಂದ್ಯದಲ್ಲಿ ಭಾರತ ತಂಡದ ಪರ ಮೂವರು ಕನ್ನಡಿಗರು ಕಣಕ್ಕಿಳಿದಿದ್ದು, ಬ್ಯಾಟಿಂಗ್​ ನಡೆಸುವ ವೇಳೆ ರಾಹುಲ್​ ಹಾಗೂ ಮನೀಷ್​ ಪಾಂಡೆ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್​ ಆಗುತ್ತಿದೆ.

ಮೊದಲೆರಡು ಏಕದಿನ ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಮನೀಷ್​ ಪಾಂಡೆ ಕೊನೆಯ ಪಂದ್ಯದಲ್ಲಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಈ ವೇಳೆ ಶ್ರೇಯಸ್​ ಅಯ್ಯರ್​ ಔಟಾಗುತ್ತಿದ್ದಂತೆ ಮೈದಾನಕ್ಕಿಳಿದ ಪಾಂಡೆ ರಾಹುಲ್​ ಜೊತೆ ಸೇರಿ ಶತಕದ ಜೊತೆಯಾಟ ನಡೆಸಿದರು.

31.3ನೇ ಓವರ್​ನಲ್ಲಿ ಶ್ರೇಯಸ್​ ಅಯ್ಯರ್​ ಔಟಾದರು. ಈ ವೇಳೆ ಪಾಂಡೆ ತಾವು ಎದುರಿಸಿದ ಎರಡನೇ ಬಾಲ್​​​​ನಲ್ಲಿ ರನ್​ ತೆಗೆದಿದ್ದ ಪಾಂಡೆ ಮತ್ತೊಂದು ರನ್​​ ತೆಗೆಯಲು ರಾಹುಲ್​ರನ್ನು ಕರೆದಿದ್ದಾರೆ. ಇದಕ್ಕೆ ರಾಹುಲ್​ 'ಬೇಡ ಬೇಡ' ಎಂದು ಕೂಗಿದ್ದಾರೆ. ಇವರಿಬ್ಬರ ಮಾತು ಸ್ಟಂಪ್​ಮೈಕ್​ ಮೂಲಕ ಟಿವಿ ವೀಕ್ಷಕರಿಗೆ ಕೇಳಿಸಿದೆ.

  • Rahul and manish talking Kannada.. ಕಿವೀಸ್ ವಿರುದ್ದದ ಮೂರನೆ ಪಂದ್ಯದ ವೇಳೆ ಕನ್ನಡದಲ್ಲಿ ಮಾತನಾಡಿದ ರಾಹುಲ್-ಮನೀಷ್ ಪಾಂಡೆ pic.twitter.com/Ce4PmRHCDt

    — Rajesh M B (@rajeshmagnur) February 11, 2020 " class="align-text-top noRightClick twitterSection" data=" ">

ಕರ್ನಾಟಕ ತಂಡದ ಪರ ಆಡುವ ಈ ಇಬ್ಬರು ಉತ್ತಮ ಗೆಳೆಯರಾಗಿದ್ದಾರೆ. ರಾಹುಲ್​ ಮೂಲತಃ ಕನ್ನಡಿಗರಾಗಿದ್ದಾರೆ. ಆದರೆ, ಮನೀಷ್​ ಮೂಲ ಉತ್ತರಾಂಚಲವಾಗಿದ್ದರೂ ಬಹಳ ವರ್ಷಗಳಿಂದ ಕರ್ನಾಟಕದಲ್ಲೇ ನೆಲೆಸಿದ್ದು, ಕರ್ನಾಟಕ ರಣಜಿ ತಂಡದ ಪರ ಆಡುತ್ತಿರುವುದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡಬಲ್ಲರು. ಈ ಹಿಂದೆಯೂ ಐಪಿಎಲ್​ ಪಂದ್ಯದ ವೇಳೆ ಉತ್ತಪ್ಪ ಜೊತೆ ಕನ್ನಡದಲ್ಲಿ ಮಾತನಾಡಿದ್ದರು. ಇದೀಗ ಮತ್ತೆ ರಾಹುಲ್​ ಜೊತೆ ಮೈದಾನದಲ್ಲಿ ಕನ್ನಡ ಮಾತನಾಡಿರುವುದು ಕನ್ನಡಿಗರಿಗೆ ಖುಷಿ ತಂದಿದೆ.

ಈ ಪಂದ್ಯದಲ್ಲಿ ರಾಹುಲ್​ 112 ರನ್​ಗಳಿಸಿದರೆ, ಮನೀಷ್​ ಪಾಂಡೆ 42 ರನ್​ಗಳಿಸಿ ಉತ್ತಮ ಕೊಡುಗೆ ನೀಡಿದರೆ, ಮತ್ತೊಬ್ಬ ಕರ್ನಾಟಕ ಬ್ಯಾಟ್ಸ್​ಮನ್​ ಮಯಾಂಕ್​ ಅಗರ್​ವಾಲ್​ ಕೇವಲ ರನ್​ಗೆ ವಿಕೆಟ್​ ಒಪ್ಪಿಸಿ ಔಟಾಗಿ ನಿರಾಶೆ ಮೂಡಿಸಿದರು.

Last Updated : Feb 11, 2020, 1:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.