ETV Bharat / sports

ಪಂಜಾಬ್‌ ತಂಡಕ್ಕೆ ಸೋಲಿನ 'ಶತಕ'! - ಐಪಿಎಲ್​ ಅಂಕಿ ಅಂಶ

ಶನಿವಾರ ನಡೆದ ಪಂದ್ಯದಲ್ಲಿ ಕೆಕೆಆರ್​ ನೀಡಿದ 164 ರನ್​ಗಳ ಗುರಿ ಬೆನ್ನಟ್ಟಲಾಗದೆ 2 ರನ್​ಗಳ ರೋಚಕ ಸೋಲು ಕಂಡಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸೋಲು ಹಾಗೂ ನೂರನೇ ಸೋಲುಂಡ ತಂಡ ಎಂಬ ಕುಖ್ಯಾತಿಗೆ ಪಾತ್ರವಾಯಿತು.

ಐಪಿಎಲ್​ನಲ್ಲಿ 100 ಸೋಲು
ಐಪಿಎಲ್​ನಲ್ಲಿ 100 ಸೋಲು
author img

By

Published : Oct 11, 2020, 6:37 PM IST

ದುಬೈ: ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ, ಸೋಲಿನ ಜೊತೆಗೆ ಕಳಪೆ ದಾಖಲೆಗೆ ತುತ್ತಾಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಕೆಕೆಆರ್​ ನೀಡಿದ 164 ರನ್​ಗಳ ಗುರಿ ಸಾಧಸಲಾಗದೆ ರಾಹುಲ್ ತಂಡ 2 ರನ್​ಗಳ ರೋಚಕ ಸೋಲು ಕಂಡಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸೋಲು ಹಾಗೂ ನೂರನೇ ಸೋಲುಂಡ ತಂಡ ಎಂಬ ಅಪಖ್ಯಾತಿಗೂ ಪಾತ್ರವಾಯಿತು.

ಐಪಿಎಲ್​ನಲ್ಲಿ ಒಮ್ಮೆ ಮಾತ್ರ ಫೈನಲ್ ಪ್ರವೇಶಿಸಿರುವ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ 13 ಆವೃತ್ತಿಗಳಿಂದ ಒಟ್ಟು 183 ಪಂದ್ಯಗಳನ್ನಾಡಿದೆ. ಇದರಲ್ಲಿ 100 ಪಂದ್ಯಗಳನ್ನು ಸೋಲು ಕಂಡಂತಾಗಿದೆ. ಕಿಂಗ್ಸ್​ ಇಲೆವೆನ್ ಹೊರತುಪಡಿಸಿದರೆ ಡೆಲ್ಲಿ ಕ್ಯಾಪಿಟಲ್ ತಂಡ ಹೆಚ್ಚು ಸೋಲು ಕಂಡಿರುವ ತಂಡವಾಗಿದೆ. ಡೆಲ್ಲಿ 194 ಪಂದ್ಯಗಳಲ್ಲಿ 99 ಪಂದ್ಯಗಳಲ್ಲಿ ಸೋತಿದೆ.

ಉಳಿದಂತೆ ಆರ್​ಸಿಬಿ 94 (198 ಪಂದ್ಯ), ಕೆಕೆಆರ್​ 85 (185), ಮುಂಬೈ 79 (193), ರಾಜಸ್ಥಾನ್​ 73 (153), ಚೆನ್ನೈ 69 (173) ಹಾಗೂ ಸನ್​ರೈಸರ್ಸ್​ ಹೈದರಾಬಾದ್​ 52 (114) ಸೋಲು ಕಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.