ಕರಾಚಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ20 ಕ್ರಿಕೆಟ್ ಲೀಗ್ನಲ್ಲಿ ಯುವ ಬ್ಯಾಟ್ಸ್ಮನ್ ಕುಶ್ದಿಲ್ ಶಾ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಪಾಕಿಸ್ತಾನ ಪರ ವೇಗದ ಶತಕ ದಾಖಲಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ದಕ್ಷಿಣ ಪಂಜಾಬ್ ತಂಡದ 25 ವರ್ಷದ ಕುಶ್ದಿಲ್ ಶಾ ನ್ಯಾಷನಲ್ ಟಿ20 ಲೀಗ್ನಲ್ಲಿ ಸಿಂಧ್ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಅವರ ಇನ್ನಿಂಗ್ಸ್ನಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳು ಸೇರಿದ್ದವು.
ಕುಶ್ದಿಲ್ ಶಾ ಅವರ ಶತಕದ ನೆರವಿನಿಂದ ಪಂಜಾಬ್ ತಂಡ 217 ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಜಯ ಸಾಧಿಸಿತು. ಇದು ನ್ಯಾಷನಲ್ ಟಿ20 ಕಪ್ನ 2ನೇ ಅತಿ ದೊಡ್ಡ ಚೇಸಿಂಗ್ ಆಗಿದೆ.
-
Khushdil Shah scored the fastest T20 century by a Pakistan batsman to help Southern Punjab to their first win of the ongoing #NationalT20Cup at the Pindi Cricket Stadium.
— Pakistan Cricket (@TheRealPCB) October 9, 2020 " class="align-text-top noRightClick twitterSection" data="
MORE: https://t.co/5VCH5HSrOg#HarHaalMainCricket | #SINvSP pic.twitter.com/XV0KqAeVu6
">Khushdil Shah scored the fastest T20 century by a Pakistan batsman to help Southern Punjab to their first win of the ongoing #NationalT20Cup at the Pindi Cricket Stadium.
— Pakistan Cricket (@TheRealPCB) October 9, 2020
MORE: https://t.co/5VCH5HSrOg#HarHaalMainCricket | #SINvSP pic.twitter.com/XV0KqAeVu6Khushdil Shah scored the fastest T20 century by a Pakistan batsman to help Southern Punjab to their first win of the ongoing #NationalT20Cup at the Pindi Cricket Stadium.
— Pakistan Cricket (@TheRealPCB) October 9, 2020
MORE: https://t.co/5VCH5HSrOg#HarHaalMainCricket | #SINvSP pic.twitter.com/XV0KqAeVu6
ಶಾಗಿಂತ ಮೊದಲು ಅಹ್ಮದ್ ಶೆಹ್ಜಾದ್ 40 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅವರು 2012ರಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಈ ಸಾಧನೆ ಮಾಡಿದ್ದರು. ಇದೀಗ ಆ ದಾಖಲೆ ಕುಶ್ದಿಲ್ ಶಾ ಹೆಸರಿಗೆ ಸೇರ್ಪಡೆಗೊಂಡಿದೆ.
ಅಲ್ಲದೆ ಕುಶ್ದಿಲ್ ಶಾ ಟಿ20 ಕ್ರಿಕೆಟ್ನಲ್ಲಿ 5ನೇ ವೇಗದ ಶತಕ ದಾಖಲಿಸಿದ್ದಾರೆ. ಇವರಿಗೂ ಮೊದಲು ಕ್ರಿಸ್ ಗೇಲ್(30 ಎಸೆತ), ರಿಷಭ್ ಪಂತ್(32), ವಿಹಾನ್ ಲುಬ್ಬೆ(33), ಆ್ಯಂಡ್ರ್ಯೂ ಸೈಮಂಡ್ಸ್(34) ಹಾಗೂ ರೋಹಿತ್ ಶರ್ಮಾ, ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದಾರೆ.