ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 317ರನ್ಗಳ ಬೃಹತ್ ಗೆಲುವು ದಾಖಲು ಮಾಡಿದ್ದು, ಕೊಹ್ಲಿ ಪಡೆಗೆ ಎಲ್ಲೆಡೆಯಿಂದ ಅಭಿನಂದನೆ ಜತೆಗೆ ಪ್ರಶಂಸೆಗಳ ಸುರಿಮಳೆ ಮಾಡಲಾಗುತ್ತಿದೆ. ಇದರ ಮಧ್ಯೆ ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಪಿಟರ್ಸನ್ ಟೀಂ ಇಂಡಿಯಾ ಕಾಲೆಳೆದಿದ್ದಾರೆ.
ಓದಿ: ಟೆಸ್ಟ್ ಗೆಲ್ಲುವುದಕ್ಕೆ ನಾವು ತೋರಿದ ಉತ್ಸಾಹ, ಪರಿಶ್ರಮ ಕಾರಣವೇ ಹೊರತು, ಟಾಸ್ ಅಲ್ಲ: ಕೊಹ್ಲಿ
ಇದೀಗ ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಕೆವಿನ್ ಪಿಟರ್ಸನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಇಂಗ್ಲೆಂಡ್ ಬಿ ತಂಡ ಸೋಲಿಸಿದಕ್ಕಾಗಿ ಅಭಿನಂದನೆಗಳು ಎಂದು ಕೆವಿನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೆವಿನ್ ಪಿಟರ್ಸನ್ ಟ್ವೀಟ್
-
Badhai ho india 🇮🇳,England B Ko harane ke liye 😉
— Kevin Pietersen🦏 (@KP24) February 16, 2021 " class="align-text-top noRightClick twitterSection" data="
">Badhai ho india 🇮🇳,England B Ko harane ke liye 😉
— Kevin Pietersen🦏 (@KP24) February 16, 2021Badhai ho india 🇮🇳,England B Ko harane ke liye 😉
— Kevin Pietersen🦏 (@KP24) February 16, 2021
ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಬದಾಯಿ ಹೋ ಇಂಡಿಯಾ, ಬಿ ತಂಡ ಇಂಗ್ಲೆಂಡ್ ಕೋ ಹರಾನೆ ಕೇ ಲಿಯೇ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಕಾಲೆಳೆದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 227ರನ್ಗಳ ಗೆಲುವು ದಾಖಲು ಮಾಡಿತ್ತು. ಇದಕ್ಕೆ ಪ್ರತಿಯಾಗಿ ಟೀಂ ಇಂಡಿಯಾ ಎರಡನೇ ಟೆಸ್ಟ್ನಲ್ಲಿ 317ರನ್ಗಳ ಜಯ ದಾಖಲು ಮಾಡಿ ತಿರುಗೇಟು ನೀಡಿದ್ದು, ಸರಣಿ 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿದೆ. ಇನ್ನು ಇಂಗ್ಲೆಂಡ್ ವಿರುದ್ಧ ಇಷ್ಟೊಂದು ರನ್ಗಳ ಅಂತರದಿಂದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಇದೇ ಮೊದಲ ಸಲ ಗೆಲುವು ದಾಖಲು ಮಾಡಿದೆ.