ETV Bharat / sports

ಶ್ರೀಶಾಂತ್​ ಪಾಲಿಗೆ ಕೇರಳ ತಂಡದ ಬಾಗಿಲು ತೆರೆದಿದೆ.. ಆದರೆ, ಕೆಲವು ಕಂಡೀಷನ್ಸ್ - ಕೇರಳ ತಂಡದ ಕೋಚ್​ ಟಿನು ಯೋಹನ್ನನ್​

37 ವರ್ಷದ ಬೌಲರ್ ಕ್ರಿಕೆಟ್​ಗೆ ಮರಳುವುದಕ್ಕೆ ಸಾಕಷ್ಟು ಪ್ರಯತ್ನದಲ್ಲಿದ್ದಾರೆ.​ ಲಾಕ್​ಡೌನ್ ಮುಗಿನ ನಂತರ ಅಂಡರ್ 23 ತಂಡದ ಆಟಗಾರರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.​.

ಎಸ್​ ಶ್ರೀಶಾಂತ್​
ಎಸ್​ ಶ್ರೀಶಾಂತ್​
author img

By

Published : Sep 14, 2020, 10:59 PM IST

ಕೊಚ್ಚಿ: 7 ವರ್ಷಗಳ ನಿಷೇಧದ ಅವಧಿಯನ್ನು ಪೂರೈಸಿ ಸಂಪೂರ್ಣ ಸ್ವತಂತ್ರ ಹಕ್ಕಿಯಾಗಿರುವ ಕೇರಳದ ಬೌಲರ್ ಎಸ್​. ಶ್ರೀಶಾಂತ್​ ಪಾಲಿಗೆ ಕೇರಳ ತಂಡದ ಬಾಗಿಲು ತೆರೆದಿರುತ್ತದೆ. ಆದರೆ, ಅವರು ಕಠಿಣ ತರಬೇತಿ ಪಡೆದು ಸ್ಥಿರತೆ ಕಂಡುಕೊಳ್ಳುವುದರ ಜೊತೆಗೆ ಫಿಟ್​ನೆಸ್​ ಸಾಬೀತುಪಡಿಸಬೇಕು ಎಂದು ಕೇರಳ ತಂಡದ ಕೋಚ್​ ಟಿನು ಯೋಹನ್ನನ್​ ತಿಳಿಸಿದ್ದಾರೆ.

2013ರ ಐಪಿಎಲ್​ನಲ್ಲಿ ಸ್ಪಾಟ್​ ಫಿಕ್ಸಿಂಗ್​ನಲ್ಲಿ ಸಿಲುಕಿದ್ದ ಶ್ರೀಶಾಂತ್ ಹಾಗೂ ಇತರೆ ಇಬ್ಬರು ಆಟಗಾರರಿಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆದರೆ, ಬಿಸಿಸಿಐನ ಒಂಬುಡ್ಸನ್​ ಡಿಕೆ ಜೈನ್​ ಅವರು ಕಳೆದ ವರ್ಷ ಆಗಸ್ಟ್​ನಲ್ಲಿ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿದ್ದರು. ಸೆಪ್ಟೆಂಬರ್​ 13ರಂದು ಶ್ರೀಶಾಂತ್​ರ ನಿಷೇಧದ ಅವಧಿ ಮುಗಿದಿದ್ದು, ಇದೀಗ ಕೇರಳ ತಂಡದ ಪರ ಮತ್ತೆ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ್ದರು. ಅದಕ್ಕೆ ಕೋಚ್​ ಕೂಡ ಕೇರಳ ತಂಡದ ಬಾಗಿಲು ಶ್ರೀ ಪಾಲಿಗೆ ಸದಾ ತೆರೆದಿದೆ ಎಂದಿದ್ದಾರೆ.

37 ವರ್ಷದ ಬೌಲರ್ ಕ್ರಿಕೆಟ್​ಗೆ ಮರಳುವುದಕ್ಕೆ ಸಾಕಷ್ಟು ಪ್ರಯತ್ನದಲ್ಲಿದ್ದಾರೆ.​ ಲಾಕ್​ಡೌನ್ ಮುಗಿನ ನಂತರ ಅಂಡರ್ 23 ತಂಡದ ಆಟಗಾರರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.​

ಶ್ರೀಶಾಂತ್​ ಅವರು ಕಠಿಣ ತರಬೇತಿ ಪಡೆಯುವ ಮೂಲಕ ತಮ್ಮ ನ್ನು ತಾವೂ ಸದೃಢವಾಗಿಟ್ಟುಕೊಳ್ಳುವ ಮೂಲಕ ಕ್ರಿಕೆಟ್ ಆಡುವ ಉತ್ಸಾಹ ತೋರಿಸಿದ್ದಾರೆ ಎಂದು ಕೇರಳ ತಂಡದ ತರಬೇತುದಾರ ಟಿನು ಯೋಹನ್ನನ್​ ಇಎಸ್​ಪಿನ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜೊತೆಗೆ ತಾವು ಶ್ರೀಶಾಂತ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರ ಫಾರ್ಮ್​ ಮತ್ತು ಫಿಟ್ನೆಸ್​ ಮೇಲೆ ಅವರ ಪುನಾರಾಗಮನ ಅವಲಂಭಿಸಿರುತ್ತದೆ. ಆದರೆ, ಅವರಿಗೆ ಕೇರಳ ತಂಡದ ಬಾಗಿಲು ತೆರೆದಿದೆ ಎಂದು ಖಚಿತ ಪಡಿಸುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.